ನಾನು ಹಿಂದಿ ದ್ವೇಷಿಯಲ್ಲ, ಆದರೆ ಹಿಂದಿಯ ಅವಶ್ಯಕತೆ ಕರ್ನಾಟಕದಲಿಲ್ಲ ಎಂದು ನನ್ನ ಭಾವನೆ. ಈಗಿನ ರಾಜಕೀಯ ಪರಿಸ್ಥಿತಿ ನೋಡಿದರೆ ನಾವೆಲ್ಲರೂ ಹಿಂದಿ ಭಾಷೆಯನ್ನು ಬಲವಂತವಾಗಿ ಬಳಸುವಂತೆ ಮಾಡುತ್ತಾರೆ ಎಂದು ಆತಂಕವಾಗುತ್ತದೆ.
ಹಿಂದಿ ಭಾಷೆ ಮಾತಾಡುವ ಜನ ಬಹಳ ಇದ್ದಾರೆ ಆದ್ದರಿಂದ ಹಿಂದಿ ಭಾಷೆಯನ್ನು ರಾಷ್ಟ್ರೀಯ ಭಾಷೆ ಮಾಡಬೇಕು ಎಂದು ಹೇಳುವ ಜನಕ್ಕೆ , ದಿ।। ಅಣ್ಣಾ ದೊರೈ ಅವರ ಉತ್ತರ ಹೀಗೆ.
೧. ನಮ್ಮ ದೇಶದಲ್ಲಿ ಕಾಗೆಗಳು ನವಿಲುಗಳಿಗಿಂತ ಬಹಳ ಸಂಖ್ಯೆಯಲ್ಲಿ ವಾಸಿಸುತ್ತವೆ, ಆದ್ದರಿಂದ ಕಾಗೆಯನ್ನು ರಾಷ್ಟ್ರೀಯ ಪಕ್ಷಿಯಾಗಿ ಮಾಡಿ
೨. ನಮ್ಮ ದೇಶದಲ್ಲಿ ಇಲಿಗಳು ಹುಲಿಗಳಿಗಿಂತ ಬಹಳ ಸಂಖ್ಯೆಯಲ್ಲಿ ವಾಸಮಾಡುತ್ತವೆ, ಆದ್ದರಿಂದ ಇಲಿಯನ್ನು ರಾಷ್ಟ್ರೀಯ ಪ್ರಾಣಿಯಾಗಿ ಮಾಡಿರಿ
ಈಗಾಗಲೇ ನಾವು ಸಾಕಷ್ಟು ನಮ್ಮತನವನ್ನು ಕಳೆದುಕೊಂಡಿದ್ದೇವೆ, ಇನ್ನು ಮುಂದಾದರೂ ಕನ್ನಡವನ್ನು ಉಳಿಸೋಣ. ಇದನ್ನು ನಾವು ಅರಿತರೆ ಒಳಿತು, ಭಾಷೆ ಉಳಿಯುತ್ತದೆ.
ನಾವು ನಮ್ಮ ಮಕ್ಕಳಿಗೆ ಹಿಂದಿ ಭಾಷೆಯನ್ನು ಬಲವಂತವಾಗಿ ಏಕೆ ಹೇಳಿಕೊಡಬೇಕು? ಅವರಿಗೆ ಆಯ್ಕೆಗಳೇ ಇಲ್ಲದಿದ್ದರೆ ಹೇಗೆ? ಹಿಂದಿ ಮುಖ್ಯ ಭಾಷೆಯಾಗಬೇಕೇ? ಅಥವಾ ಕನ್ನಡ ಮುಖ್ಯ ಭಾಷೆಯಾಗಬೇಕೇ?