ಬಂಡಾಯದ ಅರಿವು

ಖಡ್ಗವಾಗಲಿ ಕಾವ್ಯ, ಜನರ ನೋವಿಗೆ ಮಿಡಿವ ಪ್ರಾಣಮಿತ್ರ. ಬಂಡಾಯದ ಅರಿವು. ನಾವೆಲ್ಲರೂ ನೋಡಬೇಕಾದ ಸಂದರ್ಶನ ಇಲ್ಲಿ ಕಟ್ಟಿಕೊಟ್ಟಿದ್ದಾರೆ ದೂರದರ್ಶನ ಚಂದನದವರು. ವೀಕ್ಷಿಸಿ. ಗುರುವಿನ ಗುಲಾಮನಾಗುವತನಕ ದೊರೆಯದಣ್ಣ ಮುಕ್ತಿ ! – ಪುರೋಹಿತಶಾಹಿ ಮಾತುಗುರುವಿನ ಸಮಾನನಾಗುವತನಕ ದೊರೆಯದಣ್ಣ ಶಾಂತಿ ! – ಶರಣರ ಮಾತು ಡಾ|| ಬಸವರಾಜ ಸಬರದ ವರಿಸುವ ರಾಮನಲ್ಲ, ಒಲಿಸುವ ರಾಮ ಬೇಕು. ಪಂಪ –ಅರಿವಂಪ(ಪೊ)ಸಯಿಸುವುದೆ () ಧರ್ಮಮ್ಅದ ಕೆಡಿಪುದೆ ಅಧರ್ಮಮ್ ಅಲ್ಲಮ –ಪದವ ಹೇಳಬಹುದಲ್ಲದೆ ಪಾದಾರ್ಥವ ಹೇಳಬದುದೇ ಅಯ್ಯ ? ಕನ್ನಡ ಉಳಿದಿರುವುದು ನಮ್ಮ […]

ಹ್ಯಾಲೋವೀನ್‌

ಹ್ಯಾಲೋವೀನ್‌ ಎನ್ನುವುದು ಅಕ್ಟೋಬರ್ 31ನೇ ತಾರೀಖಿನಂದು ಆಚರಿಸುವ ಒಂದು ವಾರ್ಷಿಕ ಹಬ್ಬವಾಗಿದೆ. ಇದು, ಮೂಲತಃ ಸೆಲ್ಟ್‌ ಜನಗಳ ಸೋಯಿನ್ ಹಬ್ಬವಾಗಿದೆ ಮತ್ತು ಕ್ರಿಶ್ಚಿಯನ್ನರ ಪವಿತ್ರ ದಿನವಾದ ಆಲ್‌ ಸೇಂಟ್ಸ್‌ ಇವುಗಳಲ್ಲಿ ತನ್ನ ಬೇರನ್ನು ಹೊಂದಿದೆ. ಆದರೆ ಇಂದು ಇದನ್ನು ಜಾತ್ಯಾತೀತವಾಗಿ ದೊಡ್ಡ ಪ್ರಮಾಣದಲ್ಲಿ ಎಲ್ಲೆಡೆಯಲ್ಲಿಯೂ ಆಚರಿಸಲಾಗುತ್ತದೆ ಕೊಡುಗೆ : ವಿಕಿಪೀಡಿಯ

ಸಾಕರ್ ಆಟವನ್ನು ಮೊದಲಿಗೆ ಎಲ್ಲಿ ಆಡಲಾಯಿತು ?

ಸಾಕರ್ ಪದವು ಅಸೋಸಿಯೇಷನ್ ಎಂಬ ಇಂಗ್ಲೀಷ್ ಪದದಿಂದ ಬಂದಿದೆ. ೧೮೬೩ (1863) ನಲ್ಲಿ ಇಂಗ್ಲೆಂಡ್ ನ ಫುಟ್ಬಾಲ್ ಸಂಘವು ಈಗಿರುವ ಸಾಕರ್ ಕ್ರೀಡೆಯ ನಿಯಮಗಳನ್ನು ಘೋಪಿಸಿತು. ಪುರಾತನ ,ಚೀನಿಯರು, ಗ್ರೀಕರು, ಹಾಗು ರೋಮನ್ನರು ಚೆಂಡನ್ನು ಒದೆಯುವಂತಹ ವಿವಿದ ಆಟಗಳನ್ನು ಆಡುತ್ತಿದ್ದರು. ೧೬ನೇ(16th) ಶತಮಾನದ ಹೊತ್ತಿಗೆ ಹಲವು ವಿಧಗಳ ಕಾಲ್ಚೆಂಡಾಟಗಳು ಜನಪ್ರಿಯವಾಗಿದ್ದವು. ಕೆಲವು ವಿಧಗಳಲ್ಲಂತೂ ನೂರಾರು ಪಟುಗಳು ಆಡುತ್ತಿದ್ದರು. ಮಧ್ಯಯುಗದಲ್ಲಿ ಇಂಗ್ಲೆಂಡ್ನಲ್ಲಿ ಕಾಲ್ಚೆಂಡಾಟವು ಬಹಳ ಜನಪ್ರಿಯತೆಯನ್ನು ಗಳಿಸಿದಾಗ  ಇಂಗ್ಲೆಂಡ್ ನ  ರಾಜನು, ದೇಶದ ರಕ್ಷಣೆಗೆ ಅಗತ್ಯವಿರುವ ಧನುರ್ವಿಧ್ಯೆಯನ್ನು ಕಲಿಯದೇ […]

ನಾನೇನು ಮಾಡಬೇಕು ?

ಜನಗಳ ಜೊತೆ ಸ್ಪಂದಿಸುವಾಗ / ಮಾತಾಡುವಾಗ ಇರಬೇಕಾದ (ತೋರಬೇಕಾದ) ಮೂಲಭೂತ ಗುಣಗಳು (ವಿಚಾರಗಳು) ಟೀಕೆ ಮಾಡಬೇಡಿ, ದೂರು ಹೇಳಬೇಡಿ, ಅವಹೇಳನ ಮಾಡಬೇಡಿ ನಿಜವಾದ ಮತ್ತು ಆತ್ಮೀಯವಾಗಿ ಪ್ರಶಂಸೆ ಮಾಡಿ ಬೇರೆಯವರ ಆಸೆಗೆ ಅವರ ಬಯಕೆಗೆ ಬೆಲೆ ಕೊಡಿ – ಜೋರ್ಡನ್ ಲೆಜುವಾನ್ (ಹೈ ಎಕ್ಷಿಸ್ಟೆನ್ಸ್)

ನಾವು ಸುಳ್ಳೇಕೆ ಹೇಳುತ್ತೇವೆ?

ಭಯ / ಹೆದರಿಕೆ ನಾವು ಭಯದಲ್ಲಿ ಅಥವಾ ಹೆದರಿಕೆಯಿಂದ ಇದ್ದಾಗ ಸಾಮಾನವಾಗಿ ಸುಳ್ಳು ಹೇಳುತ್ತೇವೆ. ನಮಗೆ ಏನು ತಿಳಿಯದ ಭಯ. ಬೇರೆಯವರು ನಮ್ಮ ಬಗ್ಗೆ ಏನು ಅಂದುಕೊಳ್ಳುತ್ತಾರೋ (ತಿಳಿಯುತ್ತಾರೋ) ಎಂಬ ಭಯ. ನಮ್ಮ ಬಗ್ಗೆ ಬೇರೆಯವರು ಏನು ಕಂಡುಹಿಡಿಯುತ್ತಾರೋ ಎಂಬ ಭಯ. ಪ್ರತಿಸಲ ನಾವು ಸುಳ್ಳುಹೇಳಿದಾಗ ನಮ್ಮ ಭಯ ಜಾಸ್ತಿಯಾಗುತ್ತಿರುತ್ತದೆ. ಇಲ್ಲದ್ದನ್ನು ಊಹೆಮಾಡಿಕೊಳ್ಳುತ್ತಾ, ಯಾವುದು ಮುಂದೆ ಆಗುತ್ತದೆ ಎಂದು ಈಗಲೇ ಊಹೆಮಾಡಿಕೊಳ್ಳುತ್ತಾ ಭಯಪಡುತ್ತಾ ಸುಳ್ಳುಹೇಳುತ್ತಿರುತ್ತಾರೆ. ಕೆಲವೊಮ್ಮೆತಪ್ಪು ಮಾಡಿ ಅದನ್ನು ಮುಚ್ಚಲು ಸುಳ್ಳು ಹೇಳುತ್ತಿರುತ್ತಾರೆ. ತಪ್ಪುಮಾಡಿದ್ದಕ್ಕಿಂತ ತಪ್ಪುಮಾಡಿಲ್ಲವೆಂದು ಸುಳ್ಳುಹೇಳುವುದು […]

ನಾನೇಕೆ ಬರೆಯಬೇಕು?

ಬರಹ ಸಾಹಿತ್ಯದ ಕಣ್ಣು. ಸಾಹಿತ್ಯ ಪ್ರಪಂಚದಾದ್ಯಂತ ಹರಡಲು ಬರಹವೇ ಕಾರಣ. ಭಾಷೆಯ ಉಗಮದ(ಹುಟ್ಟಿನ) ಜೊತೆ-ಜೊತೆಗೆ ಬಂದಿರುವುದು ಬರಹ. ನಾವು ತಾಳೆಗರಿಗಳ ಮೇಲಿನ ಬರಹಗಳನ್ನು ನೋಡಿದಾಗ ನಮ್ಮ ಜ್ಞಾನ ಸಂಗ್ರಹದ ಬಗ್ಗೆ ನಮಗೆ ಬರಹಗಳ ಪ್ರಾಮುಖ್ಯತೆ ತಿಳಿಯುತ್ತದೆ ಹಾಗು ಹೆಮ್ಮೆ ಎನಿಸುತ್ತದೆ. ಬರೆಯುವುದರಿಂದ ಹಲವಾರು ರೀತಿಯ ಬದಲಾವಣೆಗಳು ವೈಯಕ್ತಿಕವಾಗಿ ಹಾಗು ಸಾಮಾಜಿಕವಾಗಿ ನಡೆದಿರುವುದಕ್ಕೆ ಇತಿಹಾಸವೇ ಸಾಕ್ಷಿ. ಅದರಲ್ಲೂ ಜಗತ್ತಿಗೆ ಭಾರತದ ಬರಹಗಳ ಕೊಡುಗೆ ಅಪಾರ(ಬಹಳ). ವೇದ, ವಚನ, ಗದ್ಯ, ಪದ್ಯ, ನಾಟಕ, ಕಾದಂಬರಿ, ಮಹಾಕಾವ್ಯ ಹೀಗೆ ಹತ್ತು ಹಲವು. […]

ನಿರುತ್ಸಾಹ ಮಿತಿ ಮೀರಿದಾಗ

ಮನುಷ್ಯರೆಂದಮೇಲೆ ಜೀವನದ ಏರು-ಪೇರುಗಳಿಂದಾಗುವ ತೊಂದರೆಗಳು ಸಾಮಾನ್ಯ.   ಇಂತಹ ಒಂದು ತೊಂದರೆಯಲ್ಲಿ ‘ನಿರುತ್ಸಾಹ’ (ಡಿಪ್ರೆಶನ್) ದಿನನಿತ್ಯದ ಕೆಲಸಗಳನ್ನು ಬುಡಮೇಲು ಮಾಡಿಬಿಡಬಲ್ಲ ಖಾಯಿಲೆ. ಇದನ್ನು ಖಿನ್ನತೆ ಎಂದು ಕರೆಯಲಾಗುತ್ತದೆ. ಆಹಾರ-ಔಷದ, ಜೀನವಶೈಲಿ ಒಂದು ಬಗೆಯ ಪಾತ್ರ-ಪರಿಹಾರವಾದರೆ, ಇಂದರಿಂದ ನಿರುತ್ಸಾಹಿಗಳ ಜತೆಯಲ್ಲಿ ಬದುಕುವವರ ಜೀವನವೂ ನರಕಮಯವಾಗಿ ಪರಿಣಮಿಸುತ್ತದೆ. ಸದಾಕಾಲ ನಿಂದನೆ, ಶೋಷಣೆ, ಜಗಳವಾಡುತ್ತ ಕೆಟ್ಟ ಮಾತುಗಳಲ್ಲಿ ಬೈಯುತ್ತಾ, ಸಣ್ಣ ಸಣ್ಣ ವಿಚಾರಗಳಿಗೆ ತಲೆಕಿಡಿಸಿಕೊಳ್ಳುತ್ತಾ ನಕಾರಾತ್ಮಕವಾಗಿ ಬದುಕುತ್ತಿರುವುದನ್ನು ನಾವು ನೋಡುತ್ತೇವೆ. ನಿರುತ್ಸಾಹಿಗಳು ಜಗಳಕ್ಕೆ, ಮಾತಿಗೆ, ವಿತಂಡವಾದಕ್ಕೆ ನಿಂತರೆ, ತಿಳಿದವರಾದ ನಾವು ಅವರ ಸ್ಥಿತಿಯನ್ನು […]

ಗಾದೆಗಳು

ವೇದ ಸುಳ್ಳಾದರು.. ಗಾದೆ ಸುಳ್ಳಾಗದು!! ಗಾದೆಗಳು ಜೀವನ ಅನುಭವದಿಂದ ಬರುವ ಮಾತುಗಳು!  ಗಾದೆಗಳು ಜನರ ದಿನ-ನಿತ್ಯದ ಬದುಕಿನಲ್ಲಿ ಬಳಸುವಂತಹ ನಯವಾದ ಮತ್ತು ಚೂಪಾದ ಮಾತುಗಳು. ಕಳ್ಳನ ನಂಬಿದರು ಕುಳ್ಳನ ನಂಬಬಾರದು ! ಹಳೇ ಗಂಡನ ಪಾದವೇ ಗತಿ ! ಒಲ್ಲದ (ಬೇಡದ) ಗಂಡನಿಗೆ ಮೊಸರಲ್ಲಿ ಕಲ್ಲಿತ್ತಂತೆ ! ಕುಂಬಳಕಾಯಿ ಕಳ್ಳ ಅಂದ್ರೆ ಹೆಗಲು ಮುಟ್ಟಿ ನೋಡಿಕೊಂಡರಂತೆ ! ಗಂಡ-ಹೆಂಡತಿ ಜಗಳಲದಲ್ಲಿ ಕೂಸು ಬಡವಾಯ್ತು ! ಕಳ್ಳನಿಗೊಂದು ಪಿಳ್ಳೆ ನೆಪ (ನೆವ) ! ತಾನು ಕಳ್ಳ ಪರರ ನಂಬ […]

ಯಾರಿಗಾಗಿ?

ಈ ಬರಹಗಳು ಎಲ್ಲರಿಗೂ ಸರಿ ಹೊಂದುತ್ತದೆ ಎಂದು ತಿಳಿದಿದ್ದೇನೆ. ಈಗಿನ ಯುವ ಪೀಳಿಗೆಗೆ, ಕಾಲೇಜು ಹುಡುಗ-ಹುಡುಗಿಯರಿಗೆ, ಸಾಹಿತ್ಯ ಪ್ರಿಯರಿಗೆ, ಜನಪದ ಇಷ್ಟ ಪಡುವವರಿಗೆ, ವಿಮರ್ಶಕರಿಗೆ, ಚುಟುಕು ಕವನಗಳನ್ನು ಕಟ್ಟುವವರಿಗೆ, ತಮ್ಮ ಬರಹಗಳನ್ನು ಪ್ರಪಂಚಕ್ಕೆ ಮುಕ್ತವಾಗಿ ತೋರುವರಿಗೆ, ಗ್ರಾಮೀಣ ಜನರಿಗೆ, ರೈತರಿಗೆ, ತರ್ಕಬದ್ಧ ವಿಚಾರಗಳನ್ನು ಇಷ್ಟ ಪಡುವವರನ್ನು ಹೀಗೆ ಹಲವರನ್ನು ಈ ಮೂಲಕ ಮುಟ್ಟುವ ಪ್ರಯತ್ನ. ಎಲ್ಲರೂ ತಮ್ಮದೇ ಆದ ಪರಿಸರದಲ್ಲಿ ಬೆಳೆದಿರುತ್ತಾರೆ. ಅವರ ಯೋಚನೆ, ಅನುಭವ, ಗೆಳೆತನ, ವಿಧ್ಯಾಭ್ಯಾಸ, ನೋವು-ನಲಿವು, ಆಚಾರ-ವಿಚಾರ ಎಲ್ಲವೂ ಭಿನ್ನವಾಗಿರುತ್ತವೆ. ಜೀವನಾನುಭವ ಭಿನ್ನವಾಗಿದ್ದರೂ […]