ಎಷ್ಟು ಬರುತ್ತೆ ನಿಂಗೆ ಸಂಬಳ ತಿಂಗಳಿಗೆ?

ಮೈಸೂರಿನ ಒಂದು ನೆಚ್ಚಿನ ತಾಣದಲ್ಲಿ ನನ್ನ ಆಪ್ತ ಸ್ನೇಹಿತನ ಜೊತೆ (ನಾವಿಬ್ಬರೂ ಮಧ್ಯ-ವಯಸ್ಕರು  🙂 ) ಸಂಜೆ ೭ (7) ಗಂಟೆ, ನಮ್ಮ ಎಲ್ಲ ಹತಾಶೆಗಳನ್ನು, ಜಗತ್ತಿನ ತಪ್ಪುಗಳನ್ನು, ಸಂಸಾರದ ಸಂಕಷ್ಟಗಳನ್ನು, ನಮ್ಮ ಸರಿಗಳನ್ನು ಮಾತನಾಡುತ್ತ ಕುಳಿತಿದ್ದೆವು. ನಮಪ್ಪ-ನಮ್ಮಮ್ಮನ ಕಾಲದಲ್ಲಿ ಹೊರಗೆ ತಿನ್ನುವುದೇ ಮಾಹಾ ತಪ್ಪು ಎಂದು ತಿಳಿಯುತಿದ್ದ ಕಾಲ, ಕೆಲಸ ಮಾಡದೆ ಸೋಮಾರಿಗಳಾಗುತ್ತೀರಾ ಎಂದು ನಮ್ಮನ್ನು ಬಯ್ಯುತ್ತಿದ್ದ / ಕೇಳುತ್ತಿದ್ದ ಕಾಲ.  ಈಗ swiggi / zomato ಗಳು ಬಂದು ‘ಮನೆಯಿಂದ ಹೊರಗೆ ಬರಬೇಡಿ, ನಾವೇ […]

ಮಗನ ಮನೆಯಲ್ಲಿ

ಮಗನಾಗಿ ಬರೆಯುತ್ತಿದ್ದೇನೆ ಎಂದು ತಿಳಿದುಕೊಳ್ಳುವುದಕ್ಕಿಂತ ‘ಸಾಮಾನ್ಯವಾಗಿ ಈ ರೀತಿಯಾದ ಅನುಭವ ನಾವೆಲ್ಲರೂ ನೋಡಿರುತ್ತೇವೆ’ ಎಂದು ತಿಳಿದು ಬರೆಯುತ್ತೀದ್ದೇನೆ ಅದೇ ಅರ್ಥದಲ್ಲಿ ಓದಿದರೆ ನನ್ನ ಉದ್ದೇಶ ಸಾರ್ಥಕವೆಂದು ತಿಳಿಯುತ್ತೇನೆ. ಇಲ್ಲಿ ಹಿರಿಯರ ಸ್ವಾಭಿಮಾನ ಮತ್ತು ಆತ್ಮಗೌರವವನ್ನು ಒಮ್ಮೆ ನೋಡೋಣ! ಅಪ್ಪ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಮುಖ್ಯ ಉಪಾಧ್ಯಾಯರಾಗಿದ್ದರು. ಮೂಲತಃ ಗ್ರಾಮ್ಯ ಕುಟುಂಬದಿಂದ ಬಂದಿದ್ದರಿಂದ ಕಷ್ಟಸಹೀಷ್ಣುತೆ, ಸರಳತೆ, ಹೆದರಿಕೆಯ ಮನೋಭಾವ ಸಹಜವಾಗಿತ್ತೆಂದು ನನ್ನ ನಂಬಿಕೆ. ಪರಾವಲಂಬನೆಯಲ್ಲಿ ಅರ್ಥವಿಲ್ಲ ಎಂದು ಗಾಢವಾಗಿ ನಂಬಿದ ವಕ್ತಿಯಲ್ಲಿ ನಾನು ನೋಡಿರುವುದು, ನೋಡುತ್ತಿರುವುದು ಒಬ್ಬಮಗನಾಗಿ, ಮೂರನೆಯವನಾಗಿ. […]

ಸೋಮಾರಿತನ

ನಾವುಗಳು ಕೆಲಸ ಮಾಡದ್ದಿದ್ದಾಗ ಏಕೆ ನೆಪ ಹೇಳುತ್ತೇವೆ? ೧೦೦ಕ್ಕೆ ೯೦ ಸಲ ಸೋಮಾರಿತನದಿಂದ, ಇದು ಎಲ್ಲರಿಗೂ ತಿಳಿದ ವಿಷಯ, ಆದರೂ ನಮ್ಮದೇ ಸರಿ ನಮ್ಮದೇ ನಿಜ. ಈ ದಿನಗಳಲ್ಲಿ IT ಬಿದ್ದಿದೆ, ಎಲ್ಲರಿಗೂ ಒಂದೇ ಚಿಂತೆ, “ಕೆಲಸ ಹೋದರೆ??”. ಹೋದರೆ ಹೋಗಲಿ, … ಇದೊಂದೇ ಜೀವನವಲ್ಲ, ಇದರಾಚೆಗೂ ಜೀವನವಿದೆ. ಸಾವಿರಾರು ಜನ IT ಇಲ್ಲದೆ ಬದುಕುತ್ತಿಲ್ಲವೇ? ಸ್ವತಂತ್ರವಾಗಿ ಬದುಕಲು ಹಲವು ಮಾರ್ಗಗಳಿವೆ, ವಿಶಾಲವಾದ ಭೂಮಿ ನಮ್ಮನ್ನು ಸಾಕಿ ಸಲಹಲೆಂದೆ ತಳೆದಿದ್ದಾಳೆ.ಪ್ರಗತಿ ಓದಿನಿಂದ ಮಾತ್ರವಲ್ಲ, ಸರಿಯಾದ ರೀತಿಯಲ್ಲಿ ಬುದ್ಧಿ ಬಳಕೆಯಾದರೆ […]

ಸುಳ್ಳು ಹೇಳಿ

ಬೆಳಗ್ಗೆ ೭:೩೦ ರ ಬಸ್ಸಿಗೆ ಹೊರಡಬೇಕಿತ್ತು. ನನ್ನ ಸೋಮಾರಿತನದಿಂದ ಹೊರಡಲಾಗಲಿಲ್ಲ. ಮೀರಾಳ ತಂದೆ ಬಸ್ ಸ್ಟ್ಯಾಂಡ್ ಗೆ ಡ್ರಾಪ್ ಮಾಡಿದ ಕಾರಣ ಬೇಗ ಹೊರಟೆ. ನಾನೇ ಹೊರಟಿದ್ದರೆ ಇನ್ನೂ ಲೇಟ್ ಆಗುತಿದ್ದೆ. ಬಹಳ information ಸಿಗುತ್ತದೆ ಎಂದು ಎಲ್ಲ ಕನ್ನಡ ದಿನ ಪತ್ರಿಕೆಗಳನ್ನು ಕಡೆಗಣಿಸಿ ‘ಡೆಕ್ಕನ್ ಹೆರಾಲ್ಡ್’ ದಿನ ಪತ್ರಿಕೆಯನ್ನು ಕೊಂಡದ್ದಾಯಿತು. ವಾಯುವ್ಯ ಕರ್ನಾಟಕ ಸಾರಿಗೆ ಬಸ್ ಹಿಡಿದು ಮೈಸೂರಿನಿಂದ ಶಿವಮೊಗ್ಗ ಮಾರ್ಗವಾಗಿ ಅರಸೀಕೆರೆಗೆ ಹೋಗುವ ಬಸ್ ಬಳಿಬಂದೆ. ಈ ಬಸ್ ಅರಸೀಕೆರೆಗೆ ಹೋಗುತ್ತದಾ ಎಂದು ಪ್ರಶ್ನಿಸಿದಾಗ […]

ನಾನೇಕೆ ಬರೆಯಬೇಕು?

ಬರಹ ಸಾಹಿತ್ಯದ ಕಣ್ಣು. ಸಾಹಿತ್ಯ ಪ್ರಪಂಚದಾದ್ಯಂತ ಹರಡಲು ಬರಹವೇ ಕಾರಣ. ಭಾಷೆಯ ಉಗಮದ(ಹುಟ್ಟಿನ) ಜೊತೆ-ಜೊತೆಗೆ ಬಂದಿರುವುದು ಬರಹ. ನಾವು ತಾಳೆಗರಿಗಳ ಮೇಲಿನ ಬರಹಗಳನ್ನು ನೋಡಿದಾಗ ನಮ್ಮ ಜ್ಞಾನ ಸಂಗ್ರಹದ ಬಗ್ಗೆ ನಮಗೆ ಬರಹಗಳ ಪ್ರಾಮುಖ್ಯತೆ ತಿಳಿಯುತ್ತದೆ ಹಾಗು ಹೆಮ್ಮೆ ಎನಿಸುತ್ತದೆ. ಬರೆಯುವುದರಿಂದ ಹಲವಾರು ರೀತಿಯ ಬದಲಾವಣೆಗಳು ವೈಯಕ್ತಿಕವಾಗಿ ಹಾಗು ಸಾಮಾಜಿಕವಾಗಿ ನಡೆದಿರುವುದಕ್ಕೆ ಇತಿಹಾಸವೇ ಸಾಕ್ಷಿ. ಅದರಲ್ಲೂ ಜಗತ್ತಿಗೆ ಭಾರತದ ಬರಹಗಳ ಕೊಡುಗೆ ಅಪಾರ(ಬಹಳ). ವೇದ, ವಚನ, ಗದ್ಯ, ಪದ್ಯ, ನಾಟಕ, ಕಾದಂಬರಿ, ಮಹಾಕಾವ್ಯ ಹೀಗೆ ಹತ್ತು ಹಲವು. […]

ಗಣೇಶನ ಗದ್ದಲ

ಈ ದಿನ ಗೌರೀ-ಗಣೇಶನ ಹಬ್ಬ. ಮೈಸೂರಿನಲ್ಲಿ, ಸುಮಾರು ಒಂದು ಬೀದಿಗೆ ಕನಿಷ್ಠ ೨ (ಎರಡು) ಗಣಪತಿಗಳನ್ನು ಕೂರಿಸಿರುವುದನ್ನು ನೋಡಿದೆ. ಅಂದರೆ, ಮೈಸೂರಿನಲ್ಲಿ ಸುಮಾರು ಎರಡು ಸಾವಿರ ಬೀದಿಗಳಿವೆ. ಒಟ್ಟು ೨೦೦೦ * ೨ ಗಣಪಗಳು = ೪೦೦೦ (ನಾಲ್ಕು ಸಾವಿರ) ಬೀದಿ ಗಣೇಶಗಳು. ಗಳೆಯರೇ, ಗಣೇಶನನ್ನು ಕೂರಿಸುವುದರಲ್ಲಿ ತಪ್ಪಿಲ್ಲ ಆದರೆ ಗಣೇಶನ ಹೆಸರಿನಲ್ಲಿ ಬೀದಿ-ಬೀದಿಗಳಲ್ಲಿ ಜೋರಾಗಿ ಮೈಕ್-ಸೆಟ್ ಗಳನ್ನು ಹಾಕಿ ಅಬ್ಬರ ಮಾಡಿದರೆ ಜನ-ಸಾಮಾನ್ಯರು ಎಲ್ಲಿ ಹೋಗಬೇಕು. ಇದನ್ನು ಈಗ ಬರೆಯುತ್ತಿರುವ ನನ್ನ ಬಲದಲ್ಲಿ “ಚಿಂತೆ ಏಕೆ […]

ಇದಕ್ಕೆಲ್ಲ ಏನು ಕಡಿಮೆ ಇಲ್ಲ

ಹೀಗೆ ಮಾತಾಡುತ್ತಾ, ಅಟ್ಲಾಂಟಾ ದಿಂದ ನಾರ್ತ್- ಕ್ಯಾರೊಲಿನಾ ಕಡೆಗೆ ಸಾಗಿದ್ದೆವು.ದಾರಿಯಲ್ಲಿ ಬೇರೆ ಯಾವುವದನ್ನು ಕಂಡರೂ ಗಮನ ಹರಿಸುತ್ತಿರಲಿಲ್ಲ, ಪಕ್ಕದಲ್ಲಿ ದೈತ್ಯ ಟ್ರೆಕ್ ಬಂದಾಗ, ಒಮ್ಮೆಲೆ ಗಮನ ಹರಿಯಿತು ಅದರ ಬೆನ್ನಮೇಲೆ !!!(ಚಿತ್ರದಮೇಲೆ). ನಮಗೆ ಯಾವುದು ಬೇಕೋ ಅದು ಮಾತ್ರ ಮನಸ್ಸಿಗೆ ನಾಟುತ್ತದೆ ಎನ್ನುವುದಕ್ಕೆ ಇಲ್ಲಿರುವ ಚಿತ್ರಣವೇ ಸಾಕ್ಷಿ ! ಹೆಣ್ಣುಮಕ್ಕಳಿಗೆ / ಹೆಂಗಸರಿಗೆ ತರ-ತರಾವರಿಯ ವಸ್ತುಗಳು ಮನಸ್ಸಿಗೆ ಹಿಡಿಸುವಹಾಗೆ, ಗಂಡುಮಕ್ಕಳಿಗೆ / ಗಂಡಸರಿಗೆ ‘ಈ’ವಸ್ತು ಬಹಳ ಪ್ರಿಯಕರ 🙂 ಅಲ್ಲವೇ? ಮನುಷ್ಯ ಇರುವುದೇ ಹೀಗೆ ಎನಿಸುತ್ತದೆ. ನಮಗೆಬೇಕಾದನ್ನು […]

ಸಿಟ್ಟಿನ ಸಂದರ್ಭವನ್ನು ನಿಭಾಯಿಸಿ

ಸಿಟ್ಟು ಎನ್ನುವುದು ಒಂದು ಭಾವನೆ ! ಹೇಗೆ ಸಂತೋಷ, ದುಃಖ, ಆನಂದ ಎನ್ನುವುದು ಭಾವನೆಗಳೋ ಹಾಗೆಯೇ ‘ಸಿಟ್ಟು’ ಕೂಡ ಒಂದು ಭಾವನೆ. ನೀವು ಸಿಟ್ಟು ಪಡುವುದಕ್ಕಿಂತ ಮುನ್ನ ನಿಮ್ಮ ಸಿಟ್ಟಿನ ಕಾರಣವನ್ನು ಮಾತನಾಡಿ. ನೀವು ಅಥವಾ ನಿಮ್ಮ ಜೊತೆಗಾರರಲ್ಲಿ ಸಿಟ್ಟಿನ ಕಾರಣವನ್ನು ಮುಂದಿಟ್ಟು ಮಾತಾಡಿದಾಗ, ಸುರಕ್ಷಕವಾಗಿ ಪರಿಹಾರ ದೊರಕುತ್ತದೆ. ಅದು ವಾದ-ವಿವಾದ ಅಥವಾ ವ್ಯರ್ಥ-ಚರ್ಚೆಗೆ ಎಡೆ ಮಾಡಿಕೊಡುವುದಿಲ್ಲ. ಕೆಲವೊಮ್ಮೆ ಸಮಸ್ಯೆಯನ್ನು ‘ಮಾತಾಡಿ ವಿವರಿಸಿದರೆ’ ಅಲ್ಲೇ ಸಮಸ್ಯೆಯ ಪರಿಹಾರ ಸಿಗುತ್ತದೆ. ಮುಂದಿನ ಅನಾಹುತವನ್ನು ಅಲ್ಲೇ ತಡೆಗಟ್ಟಬಹುದು. ಈ ಸಂದರ್ಭದಲ್ಲಿ […]

ಗಾದೆಗಳು

ವೇದ ಸುಳ್ಳಾದರು.. ಗಾದೆ ಸುಳ್ಳಾಗದು!! ಗಾದೆಗಳು ಜೀವನ ಅನುಭವದಿಂದ ಬರುವ ಮಾತುಗಳು!  ಗಾದೆಗಳು ಜನರ ದಿನ-ನಿತ್ಯದ ಬದುಕಿನಲ್ಲಿ ಬಳಸುವಂತಹ ನಯವಾದ ಮತ್ತು ಚೂಪಾದ ಮಾತುಗಳು. ಕಳ್ಳನ ನಂಬಿದರು ಕುಳ್ಳನ ನಂಬಬಾರದು ! ಹಳೇ ಗಂಡನ ಪಾದವೇ ಗತಿ ! ಒಲ್ಲದ (ಬೇಡದ) ಗಂಡನಿಗೆ ಮೊಸರಲ್ಲಿ ಕಲ್ಲಿತ್ತಂತೆ ! ಕುಂಬಳಕಾಯಿ ಕಳ್ಳ ಅಂದ್ರೆ ಹೆಗಲು ಮುಟ್ಟಿ ನೋಡಿಕೊಂಡರಂತೆ ! ಗಂಡ-ಹೆಂಡತಿ ಜಗಳಲದಲ್ಲಿ ಕೂಸು ಬಡವಾಯ್ತು ! ಕಳ್ಳನಿಗೊಂದು ಪಿಳ್ಳೆ ನೆಪ (ನೆವ) ! ತಾನು ಕಳ್ಳ ಪರರ ನಂಬ […]