ನೀ ಹಿಂಗ ನೋಡಬ್ಯಾಡ ನನ್ನ

ಅಂ ಅಂ … ಅಂ …. ಅಂ … ಅಂ …..ನೀ ಹಿಂಗ ನೋಡಬ್ಯಾಡ ನನ್ನನೀ ಹಿಂಗ ನೋಡಿದರೆ ನನ್ನತಿರುಗಿ ನಾ ಹ್ಯಾಂಗ ನೋಡಲೇ ನಿನ್ನ ! ನೀ ಹಿಂಗ ನೋಡಬ್ಯಾಡ ನನ್ನನೀ ಹಿಂಗ ನೋಡಿದರೆ ನನ್ನತಿರುಗಿ ನಾ ಹ್ಯಾಂಗ ನೋಡಲೇ ನಿನ್ನ ! ದಾರೀಲೆ ನೆನೆದೆ.. ಕೈ ಹಿಡಿದೆ ನೀನುತಣ್ಣಾಗ ಅಂತ ನಾ ತಿಳಿದು..ಬಿಡವಲ್ಲಿ ಇನ್ನೂನು ಬೂದಿ ಮುಚ್ಚಿದ ಕೆಂಡಾ ಇದಂತಾ ಹೊಳೆದುಮುಗಿಲಿನ ಕಪ್ಪರಿಸಿ ನೆಲಕ ಬಿದ್ದರಾ ನೆಲಕ ನೆಲಿ ಎಲ್ಲಿನ್ನ?ಆ ಗಾದಿಮಾತು ನಂಬಿ ನಾನು […]

ಬಂಗಾರ ನೀರ ಕಡಲಾಚೆ

ಹೊಸ ದ್ವೀಪಗಳಿಗೆ ಹೋರಾಟನ ಬನ್ನಿ ಅಂದದೋ ಅಂದದಹೊಸ ದ್ವೀಪಗಳಿಗೆ ಹೋರಾಟನ ಬನ್ನಿ ಅಂದದೋ ಅಂದದ ಬಂಗಾರ ನೀರ ಕಡಲಾಚೆಗೀಚೆಗಿದೆ ನೀಲ ನೀಲ ತೀರಮಿಂಚು ಬಳಗ ತೆರೆ-ತೆರೆಗಳಾಗಿ ಅಲೆಯುವುದು ಪುಟ್ಟ ಪೂರಾಅದು ನಮ್ಮ ಊರು ಇದು ನಿಮ್ಮ ಊರು ತಂತಮ್ಮಊರು ಧೀರಅದರೊಳಗೆ ನಾವು ನಮ್ಮೊಳಗೆ ತಾವು ಅದು ಇಲ್ಲವಣ್ಣ ದೂರ ಕರೆ ಬಂದಿತಣ್ಣ, ತೆರೆ ಬಂದಿತಣ್ಣ, ನೆರೆ ಬಂದಿತಣ್ಣ ಬಳಿಗೆಹರಿತದ ಭಾವ, ಬೇರಿತದ ಜೀವ ಅದರೊಳಗೆ ಒಳಗೆ ಒಳಗೆಕರೆ ಬಂದಿತಣ್ಣ, ತೆರೆ ಬಂದಿತಣ್ಣ, ನೆರೆ ಬಂದಿತಣ್ಣ ಬಳಿಗೆಹರಿತದ ಭಾವ, […]

ದೀಪದ ಹಾವಳಿ ಈ ದೀಪಾವಳಿ

ದೀಪಗಳ ಹಾವಳಿ ಈ ದೀಪಾವಳಿ,ಮನೆ ಮನೆಯಲ್ಲೂ ಬಣ್ಣದ ರಂಗೋಲಿ,ಮನ ಮನಗಳಲ್ಲೂ ಬೀಸುವ ತಂಗಾಳಿ,ಎಲ್ಲರ ಬದುಕಲ್ಲೂ…ಹೊತ್ತು ತರಲಿ ಪ್ರೀತಿಯ ಈ ಬೆಳಕಿನ ದೀಪಾವಳಿ… ಬೆಳಗುವ ದೀಪವು ಸುಡಲಿ ದ್ವೇಶವ,ಕರಗಲಿ ಜಾತಿ-ಮತಗಳ ಭಾವ,ಎಲ್ಲರೂ ಹೊಸೆಯಲಿ ಒಲವಿನ ದಾರವ,ಇಂದೇ ಹುಟ್ಟಲಿ ಶಾಂತಿಯ ಮಾನವ ಎಲ್ಲರ ಮನೆಯಲ್ಲೂ ಬೆಳಗಲಿ ಶಾಂತಿಯ ನೀತಿ,ಎಲ್ಲರ ಮನದಲ್ಲೂ ಹುಟ್ಟಲಿ ನೀತಿಯ ಪ್ರೀತಿ,ಪ್ರತಿದಿನ ವಾತಾವರಣವಿರಲಿ ಹಬ್ಬದ ರೀತಿ,ಎಲ್ಲರ ಬಾಳಲಿ ಬೆಳಗಲಿ ಈ ಬೆಳಕಿನ ಆರತಿ….ಈ ಬೆಳಕಿನ ಆರತಿ…. – ಶಮಂತ್

ದೇಹಒಂದು ದೇವ ವೀಣೆ

ದೇಹಒಂದು ದೇವ ವೀಣೆ ನರ ನರವು ತಂತಿತಾನೆದೇಹಒಂದು ದೇವ ವೀಣೆ ನರ ನರವು ತಂತಿತಾನೆಹಗಲಿರುಳು ನುಡಿಯುತ್ತಿಹ ಉಸಿರಾಟವೆ ಗೀತಾಅದ ಬಾರಿಸೆ ನೀ ಪ್ರವೀಣೆ ತಾಯಿ ನಿನ್ನ ಕೈಗೆ ನಾನೇಒಪ್ಪಿಸಿಕೊಂಡಿಹೆನು ಬರಲಿ ಜೀವದ ಸಂಗೀತ …ದೇಹಒಂದು ದೇವ ವೀಣೆ ನರ ನರವು ತಂತಿತಾನೆದೇಹಒಂದು ದೇವ ವೀಣೆ …. ಮನದ ಮಲೆಯ ತುದಿ-ತುದಿಯಲಿ ಮೌನದ ಸುತ್ತೂರಧಿಯಲಿಏಳಲಿ ಅಲೆ ನವತಾರೆಯ ಕಿರಣಾವಲಿಯಂತೆಮನದ ಮಲೆಯ ತುದಿ-ತುದಿಯಲಿ ಮೌನದ ಸುತ್ತೂರಧಿಯಲಿಏಳಲಿ ಅಲೆ ನವತಾರೆಯ ಕಿರಣಾವಲಿಯಂತೆಇಗೋ ಚಿತ್ತದ ಯಾವುದೋ ಸ್ಮೃತಿ ಸುಳಿಸುತ್ತಿದೆ ವಿದ್ಯಾರತಿಇಗೋ ಚಿತ್ತದ ಯಾವುದೋ […]

ಕಾಣದ ಕಡಲಿಗೆ

ಸಾಹಿತ್ಯ : ಜಿ ಎಸ್ ಶಿವರುದ್ರಪ್ಪಸಂಗೀತ : C ಅಶ್ವಥ್ ಕಾಣದ ಕಡಲಿಗೆ ಹಂಬಲಿಸಿದೆ ಮನ ||ಕಾಣಬಲ್ಲೆನೆ ಒಂದು ದಿನ ಕಡಲನು ||ಕೂಡಬಲ್ಲೆನೆ ಒಂದು ದಿನ || ಕಾಣದ ಕಡಲಿಗೆ ಹಂಬಲಿಸಿದೆ ಮನ ಕಾಣದ ಕಡಲಿನ ಮೊರೆತದ ಜೋಗುಳ ಒಳಗಿವಿಗಿಂದು ಕೇಳುತಿದೆ ||ನನ್ನ ಕಲ್ಪನೆಯು ತನ್ನ ಕಡಲನೆ ಚಿತ್ರಿಸಿ ಚಿಂತಿಸಿ ಸ್ಯುಯುತಿದೆಎಲ್ಲಿರುವುದೋ ಅದು ? ಎಂತಿರುವುದೋ ಅದು ?ನೋಡಬಲ್ಲೆನೆ ಒಂದು ದಿನ ಕಡಲನು, ಕೂಡಬಲ್ಲೆನೆ ಒಂದು ದಿನ ಕಾಣದ ಕಡಲಿಗೆ ಹಂಬಲಿಸಿದೆ ಮನ ಸಾವಿರ ಹೊಳೆಗಳು ತುಂಬಿ […]

ನಮ್ಮೆಲ್ಲರಲ್ಲೂ ಒಬ್ಬ ಕವಿ ಇದ್ದಾನೆ

ನಮ್ಮೆಲ್ಲರಲ್ಲೂ ಒಬ್ಬ ಕವಿ ಇದ್ದಾನೆ.. ನಾವೂ ಕವಿತೆಗಳನ್ನು ಕಟ್ಟಬಹುದು,ನಮ್ಮೆಲ್ಲರಲ್ಲೂ ಒಬ್ಬ ರವಿ ಇದ್ದಾನೆ.. ಬೆಳಕನ್ನು ನಾವೂ ಸಹ ಬೀರಬಹುದು,ಹೀಗೆ ಒ೦ದುಗೂಡಿ ನಡೆದರೆ ಸಾಕು, ಒ೦ದು ದಿನ ಕನ್ನಡಕ್ಕೆ ಎತ್ತರದ ಸ್ಥಾನ ಮಾನ ಗಿಟ್ಟಿಸಬಹುದು; ಬನ್ನಿ ಕನ್ನಡವನ್ನು ಮತ್ತೆ ಕಟ್ಟೋಣ,ಅಳಿಸಿ ಹೋಗಿರುವ ನೆನಪುಗಳನ್ನು ಮತ್ತೆ ನೆನೆಯೋಣ,ನಡೆದು ಬಂದ ದಾರಿ ಯಾವುದೇ ಇರಲಿ,ಮರೆತವರಿಗೆ ಕನ್ನಡಾಂಬೆಯ ಪರಿಚಯ ಮತ್ತೆ ಮಾಡಿಸೋಣ… ಜೈ ಕರ್ನಾಟಕ ಮಾತೆ —  ಶಮಂತ್

ಬೇಲಿಯ ಹೂವು

ಬೇಲಿಯ ಹೂವು ಏರದು ಮುಡಿಗೆ, ಬಣ್ಣದ ಹೂವದು ಕಾಣದು ಹೊರಗೆನೋಡಿತು ನೋಡುತ ನಲಿಯುತ ಹೇಳಿತು, ಸಂತಸ ಒಳಗಿದೆ ಹೊರಗಿಲ್ಲೆಂದಿತು ಗಿಡದಲೆ ಮೊಳೆತು, ಗಿಡದಲೆ ಅರಳಿ, ಸಸ್ಯದ ಸಾರವ ಹೀರುವೆ ನಾನುಬಾಡುವವರೆಗು ಸೃಷ್ಟಿಯ ಸಾರವ ಅಡೆ-ತಡೆ ಇಲ್ಲದೆ ಸವಿಯುವೆನೆಂದಿತು ನನ್ನನು ಯಾರು ನೋಡಿದರೇನು?, ಮಾತನಾಡಿಸದೆ ಹೋದರೆ ಏನು?ಸೂರ್ಯನ ಶಾಖದಿ, ಗಾಳಿಯ ಸ್ಪರ್ಶದಿ, ಮಂಜಿನ ಹನಿಯಲಿ ತೋಯುವೆನೆಂದಿತು ಚಿಲಿಪಿಲಿಗುಟ್ಟುತ, ಚೀರುತ ಹಾರುವ ಹಕ್ಕಿಯ ಬಳಗವೆ ನನ್ನಯ ಆಪ್ತರುಬಳುಕುತ ಬಳಸಿಹ ಬಳ್ಳಿಗಳೆಲ್ಲವು ಮಾತನು ಹರಟುವ ಮಿತ್ರರು ಎಂದಿತು ಯಾರಿಗು ಕಾಣದೆ ಮರೆಯಲಿ […]

ಬೀಸೋಕಲ್ಲಿನ ಪದ

ಚಿತ್ರ ಕೊಡುಗೆ : Image Courtesy ಕಲ್ಲಮ್ಮ ತಾಯಿ ಮೆಲ್ಲಮ್ಮ ರಾಗಿಯಜಲ್ಲ ಜಲ್ಲಾನೆ ಉದುರಮ್ಮಜಲ್ಲ ಜಲ್ಲಾನೆ ಉದುರಮ್ಮ ನಾ ನಿನಗೆಬೆಲ್ಲದಾರತಿಯ ಬೆಳಗೇನು, ಬೆಲ್ಲದಾರತಿಯ ಬೆಳಗೇನು ಅಂದುಳ್ಳ ಅಡಿಗಲ್ಲು ಚಂದುಳ್ಳ ಮೇಗಲ್ಲುಚಂದ್ರಮತಿಯೆಂಬ ಹಿಡಿಗೂಟಚಂದ್ರಮತಿಯೆಂಬ ಹಿಡಿಗೂಟ ಹೀಡುಕೊಂಡುತಂದೆ-ತಾಯಿಗಳ ನೆನೆದೇನ, ತಂದೆ-ತಾಯಿಗಳ ನೆನೆದೇನ ರಾಗಿಯು ಮುಗಿದಾವು ರಾಜನ್ನ ಹೆಚ್ಚ್ಯಾವುನಾನ್ ಹಿಡಿದ ಕೆಲಸ ವದಗ್ಯಾವುನಾನ್ ಹಿಡಿದ ಕೆಲಸ ವದಗ್ಯಾವು ರಾಗಿಕಲ್ಲೇನಾ ತೂಗಿ ಬಿಡುತೀನಿ ಬಲದೋಳು, ನಾ ತೂಗಿ ಬಿಡುತೀನಿ ಬಲದೋಳು ಕಲ್ಲು ಬಿಟ್ಟೇನೆಂದು ಸಿಟ್ಟ್ಯಾಕೆ ಸರಸತಿಯೇಕುಕ್ಕೇಲಿ ರಾಗಿ ಬೆಳೆಯಾಲಿಕುಕ್ಕೇಲಿ ರಾಗಿ ಬೆಳೆಯಾಲಿ, ತಕ್ಕೊಂಡುಮತ್ತೆ […]

ಪಟ್ಟ ಕಟ್ಟ ಬೇಡಿ

ಅತ್ತ ಪುಲಿ ಇತ್ತ ದರಿ ಎಂಬುದೇ ಭ್ರಮೆ.ಹುಟ್ಟಲಾರದ ಅಪೇಕ್ಷೆಯ ಅರಿವಿನಅಸಂಗಥದ ವಾಸ್ತವಕ್ಕೆಏನೇನೂ ಅಳುಕಿನ, ಅಸಯ್ಯದ ಹೇಲು ಸಾರಿಸಿ,ಅಲ್ಲೇ ಮೃಷ್ಟಾನ್ನ ಭೋಜನಅಪಥ್ಯವಾದ ಮಿಥ್ಯಗಳಬೊಜ್ಜು ಹೊಟ್ಟೆ ಪ್ರಪಂಚಕ್ಕೆ ಸುಖದ ಸಂಕೇತ.ದ್ವಂದ್ವಗಳ ತಿಕ್ಕಾಟದ ಮನಸ್ಸು, ಅವರಿಗೆಹರೆಯದ ಕಾಮ ತೀಟೆ; ಇನ್ನು ‘ಸತ್ಯ’ಸನ್ಯಾಸಿಯ ಪದವಂತೆ! ಅದರ ಹೊನಲಿನಹುಡುಕಾಟದ ಯತ್ನಕ್ಕೆ ಕರ್ಕಶವಾದ ನಗುವಿನ ಕೇಕೆ;ನಿಂತಿರುವುದು ಕಕ್ಕದಲ್ಲಾದರೇನು; ನಾನೋ ಹಾತೊರೆವ ಸ್ವಾತಂತ್ರಕ್ಕೆಹಾದರದ ಬೆಲೆ ಕಟ್ಟಲಾರೆ.ಆತುರಕ್ಕೆ ಕರೆದಾಕೆ ಕೊಟ್ಟ ತೃಪ್ತಿ ಕ್ಷಣಿಕ ನನಗೆ;ಆಕೆ ಪಡೆದದ್ದು ಬಯಕೆಯ ಕಾಸು.ಕೊಟ್ಟ ತೃಪ್ತಿಯ ಆದರಿಸದಿದ್ದುದು ನನ್ನ ಕೊಳಕೋ?ಕಾಣಿಕೆಯದಾಚೆಗಿನ ಬಯಕೆ ಬಯಸಲಾರದ್ದು ಅವಳ […]