ಒಟ್ಟಿನಲ್ಲಿ ‘ ದಬ್ಬಾಳಿಗೆ ‘ ನನ್ನ ಶತ್ರು !

ಒಂದು ದೊಡ್ಡ ದೇಶ ,  ಸಣ್ಣ ದೇಶದ ಮೇಲೆ ದಬ್ಬಾಳಿಕೆ ಮಾಡಿದರೆ ; ನಾನು ಸಣ್ಣ ದೇಶದೊಂದಿಗೆ ನಿಲ್ಲುತ್ತೇನೆ ! ಸಣ್ಣ ದೇಶದಲ್ಲಿ ಬಹುಸಂಖ್ಯಾತ ಧರ್ಮ, ಅಲ್ಪಸಂಖ್ಯಾತ ಧರ್ಮದಮೇಲೆ ದಬ್ಬಾಳಿಗೆ ಮಾಡಿದರೆ ; ನಾನು ಅಲ್ಪಸಂಖ್ಯಾತ ಧರ್ಮದೊಂದಿಗೆ ನಿಲ್ಲುತ್ತೇನೆ ! ಒಂದುವೇಳೆ ಅಲ್ಪಸಂಖ್ಯಾತ ಧರ್ಮದಲ್ಲಿ , ಒಂದು ಜಾತಿ ಇನ್ನ್ನೊಂದು ಜಾತಿಯಮೇಲೆ ದಬ್ಬಾಳಿಕೆ ನಡಸಿದರೆ ; ನಾನು ದಬ್ಬಾಳಿಕೆಗೆ ಒಳಪಟ್ಟ ಜಾತಿಯೊಂದಿಗೆ ನಿಲ್ಲುತ್ತೇನೆ ! ದಬ್ಬಾಳಿಗೆ ಒಳಪಟ್ಟ ಜಾತಿಯಲ್ಲಿ ಒಬ್ಬ ಉದ್ಯೋಗದಾತ ( ಯಜಮಾನ ) , ತನ್ನ ಉದ್ಯೋಗಿಯ  (ನೌಕರನ) […]

ವಿಶ್ವ ಮಾನವತ್ವ – ನಮ್ಮ ಸಂವಿಧಾನ

ನಮ್ಮ ಸಂವಿಧಾನದ, ಹೀಗಿದೆ ನಾವು ಭಾರತದ ಜನ, ಗಂಭೀರವಾಗಿ, ಔಪಚಾರಿಕವಾಗಿ, ಧೃಡ-ಮನಸ್ಸಿನಿಂದ, ಭಾರತವನ್ನು ಸಾರ್ವಭೌಮ, ಪ್ರಜಾಪ್ರಭುತ್ವ ಗಣರಾಜ್ಯವೆಂದು ರೂಪಿಸಿ, ನೇಮಿಸಿ ಅದರ ಎಲ್ಲ ಪೌರ ಎಲ್ಲ ನಾಗರೀಕರ ರಕ್ಷಣೆಗಾಗಿ, ಅವರ ನ್ಯಾಯಕ್ಕಾಗಿ, ಸಮಾಜಕ್ಕಾಗಿ, ಆರ್ಥಿಕತೆಗಾಗಿ ರಾಜಕೀಯಕ್ಕಾಗಿ; ಹಾಗೂ ಜನರ ಸ್ವತಂತ್ರ ವಿಚಾರವನ್ನು , ಸ್ವತಂತ್ರ ಅಭಿವ್ಯಕ್ತಿಯನ್ನು , ನಂಬಿಕೆಯ ಸ್ವತಂತ್ರವನ್ನು, ಅವರ ವಿಶ್ವಾಸ ಹಾಗು ಅವರ ಪೂಜಾ ಸ್ವತಂತ್ರವನ್ನು ರಕ್ಷಿಸುತ್ತಾ, ಸಮಾನ ಸ್ಥಾನ-ಮಾನ್ಯತೆಯನ್ನು, ಸಮಾನ ಅವಕಾಶವನ್ನು ಎಲ್ಲ ಭ್ರಾತೃಭಾವದಲ್ಲಿ, ಸಹೋದರತ್ವದಲ್ಲಿ ಬೆಂಬಲಿಸಿ ಪ್ರೋತ್ಸಾಹಿಸುತ್ತೇವೆಂದು, ಹಾಗೂ ಜನರ ವೈಯಕ್ತಿಕ […]

ಬಲವಂತವಾಗಿ ಹಿಂದಿ ಬೇಕೇ?

ನಾನು ಹಿಂದಿ ದ್ವೇಷಿಯಲ್ಲ, ಆದರೆ ಹಿಂದಿಯ ಅವಶ್ಯಕತೆ ಕರ್ನಾಟಕದಲಿಲ್ಲ ಎಂದು ನನ್ನ ಭಾವನೆ. ಈಗಿನ ರಾಜಕೀಯ ಪರಿಸ್ಥಿತಿ ನೋಡಿದರೆ ನಾವೆಲ್ಲರೂ ಹಿಂದಿ ಭಾಷೆಯನ್ನು ಬಲವಂತವಾಗಿ ಬಳಸುವಂತೆ ಮಾಡುತ್ತಾರೆ ಎಂದು ಆತಂಕವಾಗುತ್ತದೆ. ಹಿಂದಿ ಭಾಷೆ ಮಾತಾಡುವ ಜನ ಬಹಳ ಇದ್ದಾರೆ ಆದ್ದರಿಂದ ಹಿಂದಿ ಭಾಷೆಯನ್ನು ರಾಷ್ಟ್ರೀಯ ಭಾಷೆ ಮಾಡಬೇಕು ಎಂದು ಹೇಳುವ ಜನಕ್ಕೆ , ದಿ।। ಅಣ್ಣಾ ದೊರೈ ಅವರ ಉತ್ತರ ಹೀಗೆ. ೧. ನಮ್ಮ ದೇಶದಲ್ಲಿ ಕಾಗೆಗಳು ನವಿಲುಗಳಿಗಿಂತ ಬಹಳ ಸಂಖ್ಯೆಯಲ್ಲಿ ವಾಸಿಸುತ್ತವೆ, ಆದ್ದರಿಂದ ಕಾಗೆಯನ್ನು ರಾಷ್ಟ್ರೀಯ […]

ಎಷ್ಟು ಬರುತ್ತೆ ನಿಂಗೆ ಸಂಬಳ ತಿಂಗಳಿಗೆ?

ಮೈಸೂರಿನ ಒಂದು ನೆಚ್ಚಿನ ತಾಣದಲ್ಲಿ ನನ್ನ ಆಪ್ತ ಸ್ನೇಹಿತನ ಜೊತೆ (ನಾವಿಬ್ಬರೂ ಮಧ್ಯ-ವಯಸ್ಕರು  🙂 ) ಸಂಜೆ ೭ (7) ಗಂಟೆ, ನಮ್ಮ ಎಲ್ಲ ಹತಾಶೆಗಳನ್ನು, ಜಗತ್ತಿನ ತಪ್ಪುಗಳನ್ನು, ಸಂಸಾರದ ಸಂಕಷ್ಟಗಳನ್ನು, ನಮ್ಮ ಸರಿಗಳನ್ನು ಮಾತನಾಡುತ್ತ ಕುಳಿತಿದ್ದೆವು. ನಮಪ್ಪ-ನಮ್ಮಮ್ಮನ ಕಾಲದಲ್ಲಿ ಹೊರಗೆ ತಿನ್ನುವುದೇ ಮಾಹಾ ತಪ್ಪು ಎಂದು ತಿಳಿಯುತಿದ್ದ ಕಾಲ, ಕೆಲಸ ಮಾಡದೆ ಸೋಮಾರಿಗಳಾಗುತ್ತೀರಾ ಎಂದು ನಮ್ಮನ್ನು ಬಯ್ಯುತ್ತಿದ್ದ / ಕೇಳುತ್ತಿದ್ದ ಕಾಲ.  ಈಗ swiggi / zomato ಗಳು ಬಂದು ‘ಮನೆಯಿಂದ ಹೊರಗೆ ಬರಬೇಡಿ, ನಾವೇ […]

ಸಂಖ್ಯೆಗಳು ಅಂಕಗಳಿಗಷ್ಟೇ ಸೀಮಿತವಲ್ಲ!

೧೯೯೩ (1993), ನನ್ನ  ಮನೆಯ ಮೇಲೆ ನಾನು, ನನ್ನ ಗೆಳೆಯರಾದ ಗುರುರಾಜ, ಶಿವಪ್ರಕಾಶ ಎಲ್ಲರೂ ೨ನೇ (2ನೇ) PUC ಪರೀಕ್ಷೆಗಾಗಿ ಕೂಡು-ಅಧ್ಯನ (combined study) ನಡೆಸಿದ್ದೆವು. ಮನೆಯ ಮುಂದೆ ನನ್ನ ಕಾಲೇಜಿನ ಆಟದ ಮೈದಾನ (ಕಾಲೇಜು ಕಟ್ಟಡದ ಹಿಂದಿನ ಭಾಗ), ಮೈದಾನಕ್ಕೆ ತೆರೆದಂತೆ ನನ್ನ ಮನೆ (ಅಪ್ಪನ ಮನೆ :)).  ಮನೆಯ ಮುಂದೆ ಪೊಲೀಸ್ ಕ್ವಾರ್ಟ್ರಸ್ ನಿಂದ ನೇರವಾಗಿ ಬರುವ ಮಣ್ಣಿನ ರಸ್ತೆ, ರಸ್ತೆಯ ಒಂದು ಬದಿ ಮನೆಗಳು, ಮತ್ತೊಂದು ಬದಿ ಪಾರ್ಥೇನಿಯಂ ಗಿಡಗಳಿಂದ ಕೂಡಿದ, ಕಾಲೇಜು ಮೈದಾನಕ್ಕೆ ಅಂಟಿಕೊಂಡ ಮುಳ್ಳಿನ ಬೇಲಿ. ಮನೆಯ ಮೇಲಿನ ಸಣ್ಣ […]

ಮಕ್ಕಳು ದೊಡ್ಡವರನ್ನು ನೋಡಿ ಕಲಿಯುತ್ತವೆ

ಇದನ್ನು ನೋಡಿದರೆ ತುಂಬಾ ದುಃಖವಾಗುತ್ತದೆ. ನಾನು ಎಷ್ಟೋ ಸಲ ಈ ರೀತಿಯಾದ ಪರಿಸ್ಥಿತಿಯನ್ನು ಬಹಳ ಹತ್ತಿರದಿಂದ ನೋಡಿದ್ದೇನೆ. ಹೇಳಲಾಗದೆ ನೋಡಲಾಗದೆ ಅಸಹಾಯಕನಾಗಿ ವರ್ತಿಸಿದ್ದೇನೆ. ಒಬ್ಬ ತಾಯಿ ತನ್ನ ೮(8) ವರ್ಷ ಮತ್ತು ೪(4) ವರ್ಷದ ಮಕ್ಕಳನ್ನು ಇಲ್ಲಿ ಕೆಳಗೆ ಬಳಸಿದ ಶಬ್ದಗಳನ್ನು ಉಪಯೋಗಿಸಿ ಬಯ್ಯುವುದನ್ನು ನೋಡಿದ್ದೇನೆ. ನಾನು ಸತ್ತರೆ ಸ್ಮಶಾನದಲ್ಲಿ ಬಂದು ಬೆಂಕಿ ಹಚ್ಚಿ ಸುಡು ನನ್ನನ್ನು ನಾನು ಸತ್ತರೆ ನನ್ನ ತಿಥಿ ಮಾಡಬೇಡ ನಾನು ಸತ್ತರೆ ನೆಮಗೆಲ್ಲಾ ಸಂತೋಷ, ಸ್ವಲ್ಪ ಎಳ್ಳು ನೀರು ಬಿಟ್ಟುಬಿಡಿ ಬೋಳಿಮಗನೆ ನಿನ್ನ ಸಾಯಿಸಿ […]

ನಿರುತ್ಸಾಹ ಮಿತಿ ಮೀರಿದಾಗ

ಮನುಷ್ಯರೆಂದಮೇಲೆ ಜೀವನದ ಏರು-ಪೇರುಗಳಿಂದಾಗುವ ತೊಂದರೆಗಳು ಸಾಮಾನ್ಯ.   ಇಂತಹ ಒಂದು ತೊಂದರೆಯಲ್ಲಿ ‘ನಿರುತ್ಸಾಹ’ (ಡಿಪ್ರೆಶನ್) ದಿನನಿತ್ಯದ ಕೆಲಸಗಳನ್ನು ಬುಡಮೇಲು ಮಾಡಿಬಿಡಬಲ್ಲ ಖಾಯಿಲೆ. ಇದನ್ನು ಖಿನ್ನತೆ ಎಂದು ಕರೆಯಲಾಗುತ್ತದೆ. ಆಹಾರ-ಔಷದ, ಜೀನವಶೈಲಿ ಒಂದು ಬಗೆಯ ಪಾತ್ರ-ಪರಿಹಾರವಾದರೆ, ಇಂದರಿಂದ ನಿರುತ್ಸಾಹಿಗಳ ಜತೆಯಲ್ಲಿ ಬದುಕುವವರ ಜೀವನವೂ ನರಕಮಯವಾಗಿ ಪರಿಣಮಿಸುತ್ತದೆ. ಸದಾಕಾಲ ನಿಂದನೆ, ಶೋಷಣೆ, ಜಗಳವಾಡುತ್ತ ಕೆಟ್ಟ ಮಾತುಗಳಲ್ಲಿ ಬೈಯುತ್ತಾ, ಸಣ್ಣ ಸಣ್ಣ ವಿಚಾರಗಳಿಗೆ ತಲೆಕಿಡಿಸಿಕೊಳ್ಳುತ್ತಾ ನಕಾರಾತ್ಮಕವಾಗಿ ಬದುಕುತ್ತಿರುವುದನ್ನು ನಾವು ನೋಡುತ್ತೇವೆ. ನಿರುತ್ಸಾಹಿಗಳು ಜಗಳಕ್ಕೆ, ಮಾತಿಗೆ, ವಿತಂಡವಾದಕ್ಕೆ ನಿಂತರೆ, ತಿಳಿದವರಾದ ನಾವು ಅವರ ಸ್ಥಿತಿಯನ್ನು […]

ನಮ್ಮ ಭವಿಷ್ಯ ನಮ್ಮ ಕೈಯಲ್ಲಿ ಮಾತ್ರ

ನಮ್ಮಲ್ಲಿ ೧೫ದ ನೇ ಚುನಾವಣೆ ಮುಗಿದಿದೆ. ಕೇಂದ್ರದಲ್ಲಿ ಕಾಂಗ್ರೆಸ್ ಸರಕಾರ ಕಟ್ಟುತ್ತದೆ ಎಂದು ಖಾತ್ರಿಯಾಗಿದೆ. ಸ್ವಲ್ಪ ದಿನಗಳ ಹಿಂದೆ ನಾನು ಪೇಪರ್ ನಲ್ಲಿ ಓದಿದೆ. ಅರಸೀಕೆರೆ ತಾಲ್ಲುಕಿನಲ್ಲಿರುವ ಒಂದು ಗುರುಗಳ ಮಠದಲ್ಲಿ ನಮ್ಮ ದೇಶದ ಭವಿಷ್ಯವನ್ನು ನುಡಿದರಂತೆ. ಅವರು ಹೇಳಿದಂತೆ ಎಲ್ಲವೂ ನಿಜವಾಗುತ್ತದೆಂದು . ಶ್ರೀಗಳು ತಾಳೆ ಬರಹಗಳನ್ನು ಓದಿ ಭವಿಷ್ಯ ಹೇಳುತ್ತಾರಂತೆ. ನಮ್ಮ ಜನಗಳನ್ನು ಎಷ್ಟು ಸುಲಭವಾಗಿ ಮೋಸ ಮಾಡುತ್ತಾರೆ. ಜನಗಳಿಗೆ ಏಕೆ ಯೋಚಿಸಲಾಗುತ್ತಿಲ್ಲ? ಎಲ್ಲರೂ ಹೇಳಿದಂತೆ ಪ್ರಪಂಚ ನಡೆಯುತಿದ್ದರೆ ಕಷ್ಟ-ಅಶಾಂತಿಗಳನ್ನೂ ಯಾವಾಗಲೋ ನೀಗಿರಬಹುದಿತ್ತು. ಯಾವ […]

ಕೆಲಸದ ವಿಷಯದಲ್ಲಿ ಸಿಲುಕಿ

ನನ್ನಂತೆ ಬಹಳಷ್ಟು ಮಂದಿ ಈ ರೀತಿಯ ಜೀವನವನ್ನು ಅನುಭವಿಸಿರಬಹುದು ! ಇಲ್ಲಿ ನಾನು ಬರಿಯ ಉದಾಹರಣೆಯಷ್ಟೇ. ಒಮ್ಮೊಮ್ಮೆ ಅನಿಸುತ್ತದೆ ನಾನು ‘ಸರಿ ತಪ್ಪು’ ಹೇಳಲು ಶುರುಮಾಡಿದರೆ ಅವರು ತಮ್ಮ ಹುಡುಕಾಟವನ್ನೇ ನಿಲ್ಲಿಸಿಬಿಡುವರು ಎಂದು.   ಎಲ್ಲರಿಗೂ ತಮ್ಮ ತಮ್ಮ ಜೀವನವನ್ನು ಅನುಭವಿಸುವ ಅಧಿಕಾರ ಇದೆ, ನಾನು ನನ್ನ ವಿಚಾರವೇ ಸರಿ-ತಪ್ಪು ಎಂದು ಹೇಳಬಾರದು ಅಲ್ಲವೇ ? ಯಾವುದೋ ಒಂದು ಸಣ್ಣ ಪಬ್’ನಲ್ಲಿ ಕುಳಿತು ನನಗೆ ಈ ಕ್ಷಣ ಅನಿಸುತ್ತಿರುವುದನ್ನು ಬರೆಯುತ್ತಿದ್ದೇನೆ. ಸಾವಿರಾರು ಮೈಲಿ ದೂರ ಬಂದು ಒಬ್ಬನೇ ಇದ್ದು […]