ಓ ಅಪ್ಪ ಬಂದರು ಕಥೆ ಹೇಳುತ್ತಾರೆ !!!

ನನ್ನ ಮೇಲೆ ನನಗೆ ಬೇಸರವಾಗುತ್ತಿದೆ. ಒಂದು ಸಣ್ಣ ವಿಷಯವನ್ನು ನನ್ನಿಂದ ನಿರ್ವಹಿಸಲಾಗಲಿಲ್ಲವಲ್ಲ ಎಂದು. ಮಕ್ಕಳನ್ನು ಹೇಗೆ ಬೆಳೆಸಬೇಕು ಎಂದು ಚಿಂತೆಮಾಡುತ್ತ ಅವರು ಮಾಡುತ್ತಿರುವ ತಪ್ಪುಗಳನ್ನು ತಿದ್ದುವ ವಿಧಾನವನ್ನು ಕಂಡುಹಿಡಿದುಕೊಳ್ಳುವಷ್ಟರಲ್ಲಿ ಕಾಲ ಮಿಂಚಿರುತ್ತದೆ. ನಡೆದದ್ದು ಹೀಗೆ ! ದೊಡ್ಡಮಗ ತಪ್ಪು ಮಾಡಿದ್ದಾನೆ, ಅವನ ಅಮ್ಮ ಅದನ್ನು ಸರಿಯಿಲ್ಲ ಎಂದು ಪ್ರಶ್ನಿಸಿದ್ದಾಳೆ, ಅವಳು ಪ್ರಶ್ನಿಸಿರುವ ರೀತಿ ಸರಿಯಿಲ್ಲ, ಮಗನ ಮನಸ್ಸಿಗೆ ನೋವಾಗಿದೆ ಅವನು ಹಿಂತಿರುಗಿ ಬಿದ್ದಿದ್ದಾನೆ. ಇಬ್ಬರೂ ಕೇಳಿಸಿಕೊಳ್ಳುವ ಪರಿಸ್ಥಿತಿಯಲಿಲ್ಲ. ಮಗನಿಗೆ ಸಿಟ್ಟುಬರಲೇಬಾರದು ಎಂದು ಅಮ್ಮ, ಅಮ್ಮ ನನಗೆ ತಾರತಮ್ಯ […]

ಮಕ್ಕಳು ದೊಡ್ಡವರನ್ನು ನೋಡಿ ಕಲಿಯುತ್ತವೆ

ಇದನ್ನು ನೋಡಿದರೆ ತುಂಬಾ ದುಃಖವಾಗುತ್ತದೆ. ನಾನು ಎಷ್ಟೋ ಸಲ ಈ ರೀತಿಯಾದ ಪರಿಸ್ಥಿತಿಯನ್ನು ಬಹಳ ಹತ್ತಿರದಿಂದ ನೋಡಿದ್ದೇನೆ. ಹೇಳಲಾಗದೆ ನೋಡಲಾಗದೆ ಅಸಹಾಯಕನಾಗಿ ವರ್ತಿಸಿದ್ದೇನೆ. ಒಬ್ಬ ತಾಯಿ ತನ್ನ ೮(8) ವರ್ಷ ಮತ್ತು ೪(4) ವರ್ಷದ ಮಕ್ಕಳನ್ನು ಇಲ್ಲಿ ಕೆಳಗೆ ಬಳಸಿದ ಶಬ್ದಗಳನ್ನು ಉಪಯೋಗಿಸಿ ಬಯ್ಯುವುದನ್ನು ನೋಡಿದ್ದೇನೆ. ನಾನು ಸತ್ತರೆ ಸ್ಮಶಾನದಲ್ಲಿ ಬಂದು ಬೆಂಕಿ ಹಚ್ಚಿ ಸುಡು ನನ್ನನ್ನು ನಾನು ಸತ್ತರೆ ನನ್ನ ತಿಥಿ ಮಾಡಬೇಡ ನಾನು ಸತ್ತರೆ ನೆಮಗೆಲ್ಲಾ ಸಂತೋಷ, ಸ್ವಲ್ಪ ಎಳ್ಳು ನೀರು ಬಿಟ್ಟುಬಿಡಿ ಬೋಳಿಮಗನೆ ನಿನ್ನ ಸಾಯಿಸಿ […]

ಮಕ್ಕಳು ಬೆಳೆಯುವ ಪರಿಸರ

“ಕೆಲ ದಿನಗಳ ಹಿಂದೆ ನನ್ನ ಮನೆಗೆ ಯೆನ್.ಜಿ.ಓ ಸಂಸ್ಥೆಇಂದ ನನ್ನ ಮಕ್ಕಳು ಬೆಳೆಯುತ್ತಿರುವ ಪರಿಸರ / ಪರಿಸ್ಥಿತಿ ಗಳ ಬಗ್ಗೆ ತಿಳಿದುಕೊಳ್ಳಲು ಕೆಲವರು ಬಂದಿದ್ದರು”. ಮಕ್ಕಳಿಗೆ ಸರಿಯಾದ ರೀತಿಯ ಪರಿಸರ ಸಿಗುತ್ತಿಲ ಎಂದು ನಿಖರವಾದ ದೂರಿರುವುದರಿಂದ ಬಂದಿದ್ದರೆಂದು ತಿಳಿದುಬಂತು. ಈ ವಿಚಾರವಾಗಿ ನನ್ನ ಮನೆಯವರ ಮನದಲ್ಲಿ ರುದ್ರತಾಂಡವವೇ ನಡೆದ ವಿಚಾರ ಹಾಗಿರಲಿ, ಆದರೆ ತಕ್ಷಣ ನನಗೆ ಹೊಳೆದದ್ದು ನಾನು ಹಿಂದೆ ಬರೆದುಕೊಂಡ ಈ ಕೆಳಗಿನ ಸಾಲುಗಳನ್ನು ಈ ದಿನ(21-02-2016) ಈ ತಾಣದಲ್ಲಿ ಪ್ರಕಟಿಸುತ್ತಿದ್ದೇನೆ. ಈ ಮಾತುಗಳು ನನ್ನವಲ್ಲ. […]

ಮಕ್ಕಳು

ನಿಜವಾದ ಜೀವಂತ ದೇವರುಗಳನ್ನು / ದೇವರನ್ನು ನೋಡಬೇಕು ಎಂದರೆ, ಎಲ್ಲಿ? ಎಂದು ಯಾರಾದರು ಕೇಳಿದಾಗ ತಿಳಿದವರು ಹೇಳುವುದು ಒಂದೇ ಜವಾಬು(ಉತ್ತರ), “ಮಕ್ಕಳನ್ನು ನೋಡಿ !” ಎಂದು. ನಿಜ!! ಪ್ರತ್ಯಕ್ಷ ದೇವರುಗಳು ಎಂದರೆ ಮಕ್ಕಳೇ!! ನನ್ನ ಪ್ರಕಾರ ಹೊಸದಾಗಿ ರೂಪುಗೊಂಡಿತುವ ಮುಗ್ಧ ಸ್ವರೂಪದ ಪುಟ್ಟ ಚೇತನಾ ಶಕ್ತಿಗಳು. ಎಷ್ಟು ಶುದ್ಧವಾದ ಮನಸ್ಸು! ಸ್ವಲ್ಪವೂ ಕಲ್ಮಷ ಇಲ್ಲದ, ಚೂರೂ ಕೆಟ್ಟಬುದ್ಧಿ ಇಲ್ಲದ, ಅನಂತದಿಂದ ಆಗತಾನೇ ಇಳಿದುಬಂದ ಜೀವಗಳು. ಅದ್ಭುತವಾಗಿ ಹೆಣೆದಂತಹ ಹಗುರವಾದ ನೂಲಿನ ಬಟ್ಟೆಗಳಂತೆ. ಮುಗ್ಧತೆಯ ತಾಣಗಳಿದ್ದಂತೆ!  ನೇರ ನುಡಿ, ಕಂಡದ್ದನ್ನು ಕಂಡಂತೆ […]