ನಮ್ಮ ಸಂವಿಧಾನದ, ಹೀಗಿದೆ ನಾವು ಭಾರತದ ಜನ, ಗಂಭೀರವಾಗಿ, ಔಪಚಾರಿಕವಾಗಿ, ಧೃಡ-ಮನಸ್ಸಿನಿಂದ, ಭಾರತವನ್ನು ಸಾರ್ವಭೌಮ, ಪ್ರಜಾಪ್ರಭುತ್ವ ಗಣರಾಜ್ಯವೆಂದು ರೂಪಿಸಿ, ನೇಮಿಸಿ ಅದರ ಎಲ್ಲ ಪೌರ ಎಲ್ಲ ನಾಗರೀಕರ ರಕ್ಷಣೆಗಾಗಿ, ಅವರ ನ್ಯಾಯಕ್ಕಾಗಿ, ಸಮಾಜಕ್ಕಾಗಿ, ಆರ್ಥಿಕತೆಗಾಗಿ ರಾಜಕೀಯಕ್ಕಾಗಿ; ಹಾಗೂ ಜನರ ಸ್ವತಂತ್ರ ವಿಚಾರವನ್ನು , ಸ್ವತಂತ್ರ ಅಭಿವ್ಯಕ್ತಿಯನ್ನು , ನಂಬಿಕೆಯ ಸ್ವತಂತ್ರವನ್ನು, ಅವರ ವಿಶ್ವಾಸ ಹಾಗು ಅವರ ಪೂಜಾ ಸ್ವತಂತ್ರವನ್ನು ರಕ್ಷಿಸುತ್ತಾ, ಸಮಾನ ಸ್ಥಾನ-ಮಾನ್ಯತೆಯನ್ನು, ಸಮಾನ ಅವಕಾಶವನ್ನು ಎಲ್ಲ ಭ್ರಾತೃಭಾವದಲ್ಲಿ, ಸಹೋದರತ್ವದಲ್ಲಿ ಬೆಂಬಲಿಸಿ ಪ್ರೋತ್ಸಾಹಿಸುತ್ತೇವೆಂದು, ಹಾಗೂ ಜನರ ವೈಯಕ್ತಿಕ ಘನತೆ ಮತ್ತು ಒಗ್ಗಟ್ಟಿನ-ರಾಷ್ಟ್ರದ ಭರವಸೆ ನೀಡುತ್ತಾ; ಈ ನಮ್ಮ ಸಂವಿಧಾನ ಸಭೆಯಲ್ಲಿ ೧೯೪೯(1949) ನವೆಂಬರ್ ೨೬ನೇ(26)ದಿನವಾದ ಇಂದು ಈ ಮೂಲಕ ಅಳವಡಿಸಿಕೊಂಡು ಜಾರಿಗೊಳಿಸಿ ನಮಗೆ ನಾವೇ ಈ ಸಂವಿಧಾನವನ್ನು ನೀಡುತ್ತಿದ್ದೇವೆ.