ಒಂದು ದೊಡ್ಡ ದೇಶ , ಸಣ್ಣ ದೇಶದ ಮೇಲೆ ದಬ್ಬಾಳಿಕೆ ಮಾಡಿದರೆ ; ನಾನು ಸಣ್ಣ ದೇಶದೊಂದಿಗೆ ನಿಲ್ಲುತ್ತೇನೆ ! ಸಣ್ಣ ದೇಶದಲ್ಲಿ ಬಹುಸಂಖ್ಯಾತ ಧರ್ಮ, ಅಲ್ಪಸಂಖ್ಯಾತ ಧರ್ಮದಮೇಲೆ ದಬ್ಬಾಳಿಗೆ ಮಾಡಿದರೆ ; ನಾನು ಅಲ್ಪಸಂಖ್ಯಾತ ಧರ್ಮದೊಂದಿಗೆ ನಿಲ್ಲುತ್ತೇನೆ ! ಒಂದುವೇಳೆ ಅಲ್ಪಸಂಖ್ಯಾತ ಧರ್ಮದಲ್ಲಿ , ಒಂದು ಜಾತಿ ಇನ್ನ್ನೊಂದು ಜಾತಿಯಮೇಲೆ ದಬ್ಬಾಳಿಕೆ ನಡಸಿದರೆ ; ನಾನು ದಬ್ಬಾಳಿಕೆಗೆ ಒಳಪಟ್ಟ ಜಾತಿಯೊಂದಿಗೆ ನಿಲ್ಲುತ್ತೇನೆ ! ದಬ್ಬಾಳಿಗೆ ಒಳಪಟ್ಟ ಜಾತಿಯಲ್ಲಿ ಒಬ್ಬ ಉದ್ಯೋಗದಾತ ( ಯಜಮಾನ ) , ತನ್ನ ಉದ್ಯೋಗಿಯ (ನೌಕರನ) ಮೇಲೆ ದಬ್ಬಾಳಿಗೆ ನಡೆಸಿದರೆ ; ನಾನು ಉದ್ಯೋಗಿಯೊಡನೆ ನಿಲ್ಲುತ್ತೇನೆ ! ಆ ಉದ್ಯೋಗಿ , ಒಂದು ವೇಳೆ ತನ್ನ ಮನೆಗೆ ಹೋಗಿ ತನ್ನ ಹೆಂಡತಿಯ ಮೇಲೆ ದಬ್ಬಳಿಗೆ ನಡೆಸಿದರೆ ; ನಾನು ಆ ಹೆಣ್ಣುಮಗಳ ನೆರವಿಗೆ ನಿಲ್ಲುತ್ತೇನೆ ! ಒಟ್ಟಿನಲ್ಲಿ ‘ ದಬ್ಬಾಳಿಗೆ ‘ ನನ್ನ ಶತ್ರು ! – ಪೆರಿಯಾರ್ |