ನಮ್ಮ ಭವಿಷ್ಯ ನಮ್ಮ ಕೈಯಲ್ಲಿ ಮಾತ್ರ

ನಮ್ಮಲ್ಲಿ ೧೫ದ ನೇ ಚುನಾವಣೆ ಮುಗಿದಿದೆ. ಕೇಂದ್ರದಲ್ಲಿ ಕಾಂಗ್ರೆಸ್ ಸರಕಾರ ಕಟ್ಟುತ್ತದೆ ಎಂದು ಖಾತ್ರಿಯಾಗಿದೆ. ಸ್ವಲ್ಪ ದಿನಗಳ ಹಿಂದೆ ನಾನು ಪೇಪರ್ ನಲ್ಲಿ ಓದಿದೆ. ಅರಸೀಕೆರೆ ತಾಲ್ಲುಕಿನಲ್ಲಿರುವ ಒಂದು ಗುರುಗಳ ಮಠದಲ್ಲಿ ನಮ್ಮ ದೇಶದ ಭವಿಷ್ಯವನ್ನು ನುಡಿದರಂತೆ. ಅವರು ಹೇಳಿದಂತೆ ಎಲ್ಲವೂ ನಿಜವಾಗುತ್ತದೆಂದು . ಶ್ರೀಗಳು ತಾಳೆ ಬರಹಗಳನ್ನು ಓದಿ ಭವಿಷ್ಯ ಹೇಳುತ್ತಾರಂತೆ. ನಮ್ಮ ಜನಗಳನ್ನು ಎಷ್ಟು ಸುಲಭವಾಗಿ ಮೋಸ ಮಾಡುತ್ತಾರೆ. ಜನಗಳಿಗೆ ಏಕೆ ಯೋಚಿಸಲಾಗುತ್ತಿಲ್ಲ? ಎಲ್ಲರೂ ಹೇಳಿದಂತೆ ಪ್ರಪಂಚ ನಡೆಯುತಿದ್ದರೆ ಕಷ್ಟ-ಅಶಾಂತಿಗಳನ್ನೂ ಯಾವಾಗಲೋ ನೀಗಿರಬಹುದಿತ್ತು. ಯಾವ […]

ಬೇಡವು ನಮಗೆ ನಾಮ್ಮನಾಳುವವ

ನಮಗೆ ಬೇಕಿದೆ ದೇಶ ನಡೆಸುವವ ಬೇಡವು ನಮಗೆ ನಾಮ್ಮನಾಳುವವನಮಗೆ ಬೇಕಿದೆ ದೇಶ ನಡೆಸುವವ ಬೇಡವು ನಮಗೆ ನಾಮ್ಮನಾಳುವವ ಅಸಮಾಧಾನವು ನನ್ನ ಕಾಡುತಿರೆ ನನ್ನನು ನಾನೇ ಪ್ರಶ್ನಿಸುತ್ತಿರುವೆಆಲೋಚನೆಯ ಶಕ್ತಿಯ ಒಪ್ಪಿಸಿ ನನ್ನ ಬುದ್ಧಿಯನು ನಾ ಮಾರಿರುವೆನನ್ನ ಕಣ್ಣುಗಳ ಅವರಿಗೆ ಕೊಟ್ಟು ಅವರ ನೋಟದ ಗುಲಾಮನಾಗಲೆ ?ನನ್ನ ನಂಬಿಕೆಯ ಸೂತ್ರವ ಕೊಟ್ಟು ನನ್ನ ಗಾಳಿಪಟ ಅವರು ಹಿಡಿಯಲೆ ?ನಮಗೆ ಬೇಕಿದೆ ದೇಶ ನಡೆಸುವವ ಬೇಡವು ನಮಗೆ ನಾಮ್ಮನಾಳುವವ ನನ್ನ ಎದೆಗೂಡು ಅವರಿಗೆ ನೀಡಿ ಅವರ ಉಸಿರಲಿ ನಾನು ಬದುಕಲೇ ?ನನ್ನ […]

ಏನಾಯ್ತು ? What happened ?

‘ನೀವು ನಿಮ್ಮ ಕಾರಿನ ಗ್ಲಾಸ್ ಕೆಳಗೆ ಇಳಿಸುತ್ತೀರಾ?’ ಕುರುಚಲು ಗಡ್ಡವಿದ್ದ ಬೆಳ್ಳಗೆಇದ್ದ ಒಬ್ಬ ವ್ಯಕ್ತಿ ಕಾರಿನ ಹೊರಗಿನಿಂದ ಕಾರಿನಲ್ಲಿ ಒಳಗೆ ಕುಳಿತಿದ್ದ ಪ್ರಶಾಂತನಿಗೆ ಬಹಳ ವಿನಯದಿಂದ ಸನ್ಹೆ ಮಾಡುತ್ತಿದ್ದ. ಪ್ರಶಾಂತನಿಗೆ ಹೊರಗೆ ಏನು ನಡೆಯುತ್ತಿದೆ ಎಂದು ಕಾಣಿಸುತ್ತಿತ್ತು ಆದರೆ ಕೇಳಿಸುತ್ತಿರಲಿಲ್ಲ. ಅವನ ಸೌಂಡ್ ಪ್ರೂಫ್ ಕಾರು ಅವನಿಗೆ ತೊಂದರೆಗೆ ಸಿಲುಕಿಸುತ್ತದೆ ಎಂದು ತಿಳಿದಿರಲ್ಲ.ಆ ಸಮಯದಲ್ಲಿ ಸಹಜವಾಗಿ ಪ್ರಶಾಂತ ತನ್ನ ಕಾರಿನ ಕಿಟಕಿಯನ್ನು ಕೆಳಕ್ಕೆ ಇಳಿಸುತ್ತಾ ವಿನಮ್ರ ಭಾವದಿಂದ ಕೂಡಿದ ಹೊರಗಿನ ವ್ಯಕ್ತಿಗೆ ತನ್ನ ಸಹಾಯ ಬೇಕಾಗಿದೆ ಎಂದು […]

ಮಾದ…

ಮಾದ… ಮಿತಿ ಮೀರಿದ ನಗರೀಕರಣದ ಸಲುವಾಗಿ ಒಂದು ಕುಟುಂಬ ನಾಶವಾಗುವ ಕಿರು-ನಾಟಕ.ಇಲ್ಲಿ ಬರುವ ಎಲ್ಲ ಪಾತ್ರಗಳು ಕಾಲ್ಪನಿಕ, ಇದು ಯಾರನ್ನೂ ಬಿಂಬಿಸುವ ಪ್ರಯತ್ನವಲ್ಲ. ಇಲ್ಲಿಯ  ಒಂದು ಪಾತ್ರವನ್ನು ನಿರರ್ಗಳವಾಗಿ, ಸಹಜವಾಗಿ ನಿಭಾಯಿಸಿರುವ ನನ್ನ ಮಿತ್ರ ಕಾಲವಶವಾಗಿದ್ದಾನೆ. ಸಜ್ಜನಿಕೆ, ಸಹೃದಯ, ಆದರ್ಶವಾಗಿ ಬದುಕಿದ ಈ ವ್ಯಕ್ತಿಗೆ ನಮ್ಮ ನಮನ. ಮಿತ್ರನ ದ್ವನಿಯನ್ನು ಹಾಗು ಅವನ ಭಾವವನ್ನು ಹಿಡಿದಿಟ್ಟಿರುವ ನಾವೇ ಧನ್ಯರು. ಇಲ್ಲಿ ಬರುವ ಮಾದ … ಪ್ರತಿಯೊಂದು ಪ್ರಗತಿಪರ / ಪ್ರಗತಿಹೊಂದುತ್ತಿರುವ ರಾಷ್ಟ್ರದ ಸಾಮಾನ್ಯ ನಾಗರೀಕನಾಗಿ ಮತ್ತು ಅವರ ಸಾಮಾಜಿಕ […]

ಮಕ್ಕಳು

ನಿಜವಾದ ಜೀವಂತ ದೇವರುಗಳನ್ನು / ದೇವರನ್ನು ನೋಡಬೇಕು ಎಂದರೆ, ಎಲ್ಲಿ? ಎಂದು ಯಾರಾದರು ಕೇಳಿದಾಗ ತಿಳಿದವರು ಹೇಳುವುದು ಒಂದೇ ಜವಾಬು(ಉತ್ತರ), “ಮಕ್ಕಳನ್ನು ನೋಡಿ !” ಎಂದು. ನಿಜ!! ಪ್ರತ್ಯಕ್ಷ ದೇವರುಗಳು ಎಂದರೆ ಮಕ್ಕಳೇ!! ನನ್ನ ಪ್ರಕಾರ ಹೊಸದಾಗಿ ರೂಪುಗೊಂಡಿತುವ ಮುಗ್ಧ ಸ್ವರೂಪದ ಪುಟ್ಟ ಚೇತನಾ ಶಕ್ತಿಗಳು. ಎಷ್ಟು ಶುದ್ಧವಾದ ಮನಸ್ಸು! ಸ್ವಲ್ಪವೂ ಕಲ್ಮಷ ಇಲ್ಲದ, ಚೂರೂ ಕೆಟ್ಟಬುದ್ಧಿ ಇಲ್ಲದ, ಅನಂತದಿಂದ ಆಗತಾನೇ ಇಳಿದುಬಂದ ಜೀವಗಳು. ಅದ್ಭುತವಾಗಿ ಹೆಣೆದಂತಹ ಹಗುರವಾದ ನೂಲಿನ ಬಟ್ಟೆಗಳಂತೆ. ಮುಗ್ಧತೆಯ ತಾಣಗಳಿದ್ದಂತೆ!  ನೇರ ನುಡಿ, ಕಂಡದ್ದನ್ನು ಕಂಡಂತೆ […]

ಒಳ್ಳೆಯ ಮಾತುಗಳು

ಬಹಳ ಜನ ಜೀವನದಲ್ಲಿ ಸಾಕಷ್ಟು ಅನುಭವವನ್ನು ಒಂದು ಸಣ್ಣ ವಾಖ್ಯದಲ್ಲಿ ಅಥವಾ ಒಂದು ಸಾಲಿನ ಮಾತಿನಲ್ಲಿ ಯಾವುದಾದರೊಂದು ಸಂದರ್ಭದಲ್ಲಿ ಬಳಸಿರುತ್ತಾರೆ. ಆ ಮಹಾನುಭಾವರ ಮಾತು ಜೀವನದ ಮಾರ್ಗವನ್ನೋ, ಸರಳ ಯೋಚನೆಯನ್ನೋ, ಮನುಷ್ಯನ ಬದುಕಿನ ಉದ್ದೇಶವನ್ನೋ ಹೇಳುವುದೆಂದು ನನ್ನ ನಂಬಿಕೆ. ಈ ರೀತಿಯ ಸಾಲುಗಳಲ್ಲಿ ದಿಟವಾದ ಅರ್ಥವಿರುತ್ತದೆ. ತಕ್ಷಣಕ್ಕೆ ಒಪ್ಪದಿದ್ದರೂ ನಿಧಾನವಾಗಿ ತಾಳ್ಮೆಯಿಂದ ಯೋಚಿಸಿದಾಗ ಈ ಮಾತಿನ ತಿರುಳು ತಿಳಿಯುತ್ತದೆ. ಈ ಮಾತುಗಳನ್ನು / ಸಾಲುಗಳನ್ನು ಬರೆದವರ / ಸೃಷ್ಠಿಸಿದವರ ನೆನಪು ನನಗೆ ಇಲ್ಲವಾದರೂ, ಬೇರೆಯವರರಿಂದ ಕೇಳಿರುವುದನ್ನು ಬರೆಯುತ್ತಿದ್ದೇನೆ. […]

ಜೀವದಾತ ಗೂರ್ಖಾ (Gūrkhā)

ಗೋಕರ್ಣದ ನಾಯಿ(ಗೂರ್ಖಾ), ಮೈಸೂರಿನ ನಾಯಿಯನ್ನು (ಕಾಳ) ಬದುಕಿಸಿದ ನಿಜದ ಪ್ರಸಂಗ,  ಜೀವಂತ ಘಟನೆಗೆ ನಾನು ಸಾಕ್ಷಿ. (ನಮ್ಮಲ್ಲಿ ಈ  ಅನುಭವ ಕಡಿಮೆ.  ಈ ಅನುಭವನ್ನು ನಾನು ಹಚ್ಚಿಕೊಳ್ಳಲು ಬಯಸುತ್ತೇನೆ, ರಕ್ತದಾನ ಬರಿ ಮನುಷ್ಯನಿಗೆ ಮಾತ್ರ ಸೀಮಿತವಲ್ಲ, ಪ್ರಾಣಿಗಳಲ್ಲಿಯೂ ರಕ್ತದಾನ ಸಾಧ್ಯ !.  ಈ ಅರಿವು ಎಲ್ಲರಿಗೂ ತಿಳಿಯಬೇಕು) ನನ್ನ ಕಣ್ಣಮುಂದೆ ಕುಸಿದುಬಿದ್ದ ಕಾಳನನ್ನು Dr. ಮದನ್ (Dr. Madan) ಬಳಿ ಕರೆದುತಂದಾಗ ನನ್ನ ಅಂತರಾಳ ಕುಂದಿತ್ತು. ನನ್ನ ೧೦ (10) ವರ್ಷದ ಮಗ ಕಾಳನನ್ನೇ ನೋಡುತ್ತಾ, ಅಪ್ಪ ನಮ್ಮ ಕಾಳನಿಗೆ […]