ಇಲ್ಲೇ ಸ್ವರ್ಗ ಇಲ್ಲೇ ನರಕ

ಗೀತ ರಚನೆ: ಚಿ।। ಉದಯಶಂಕರ್
ಹಾಡು: ರವಿ
ಸಂಗೀತ : ಸತ್ಯಮ್

ಅ…. ಅಹ ಹಾ ಆಹಾ ಆಹಾ ಅ ಹ ಹ ….

ಇಲ್ಲೇ ಸ್ವರ್ಗ ಇಲ್ಲೇ ನರಕ ಮೇಲೇನಿಲ್ಲ ಸುಳ್ಳು
ಹುಟ್ಟು ಸಾವು ಎರಡರ ಮಧ್ಯೆ ಮೂರು ದಿನದ ಬಾಳು
ಹೇ…. ಮೂರು ದಿನದ ಬಾಳು

ಇಲ್ಲೇ ಸ್ವರ್ಗ ಇಲ್ಲೇ ನರಕ ಮೇಲೇನಿಲ್ಲ ಸುಳ್ಳು
ಹುಟ್ಟು ಸಾವು ಎರಡರ ಮಧ್ಯೆ ಮೂರು ದಿನದ ಬಾಳು
ಹೇ…. ಮೂರು ದಿನದ ಬಾಳು

ಕಪ್ಪು ಬಿಳುಪು ಬಣ್ಣಾ ಹೇಗೊ ಹಗಲು ರಾತ್ರಿ ಹಾಗೆ
ನಗುವು ಅಳುವು ಎರುಡು ಉಂಟು ಬೇಡ ಅಂದ್ರೆ ಹೇಗೆ?
ಬಂದಾಗ ನಗುವೇ ಹೋದಾಗ ಮಾತ್ರ ಕಣ್ಣೀರೆಕೊ ಕಾಣೆ…
ಕಸಿದು ಕೊಳ್ಳುವ ಹಕ್ಕು ಎಂದು ಕೊಟ್ಟೊನ್ಗೆನೆ ತಾನೇ?..

ಇಲ್ಲೇ ಸ್ವರ್ಗ ಇಲ್ಲೇ ನರಕ ಮೇಲೇನಿಲ್ಲ ಸುಳ್ಳು
ಹುಟ್ಟು ಸಾವು ಎರಡರ ಮಧ್ಯೆ ಮೂರು ದಿನದ ಬಾಳು
ಹೇ…. ಮೂರು ದಿನದ ಬಾಳು

ಬಿಸಿಲಿಗೆ ಕರಗುವ ಮಂಜೇನಲ್ಲ ಕಷ್ಟ ನಷ್ಟ ಎಲ್ಲಾ
ಎದುರಿಸಬೇಕು ಧೈರ್ಯದಿಂದ ಬೇರೆ ದಾರಿ ಇಲ್ಲ
ಬೆಟ್ಟಾ ಕೊರದು ದಾರಿ ಮಾಡಿ ನೀರು ನುಗ್ಗೋ ಹಾಗೇ
ಮುಂದೆ ನುಗ್ಗಿ ಹೋದ್ರೆ ತಾನೇ ದಾರಿ ಕಾಣೊದ್ ನಮ್ಗೆ….

ಇಲ್ಲೇ ಸ್ವರ್ಗ ಇಲ್ಲೇ ನರಕ ಮೇಲೇನಿಲ್ಲ ಸುಳ್ಳು
ಹುಟ್ಟು ಸಾವು ಎರಡರ ಮಧ್ಯೆ ಮೂರು ದಿನದ ಬಾಳು
ಹೇ…. ಮೂರು ದಿನದ ಬಾಳು
ಓ …. ಮೂರು ದಿನದ ಬಾಳು

Leave a Reply

Your email address will not be published. Required fields are marked *