ಹೀಗೆ ಮಾತಾಡುತ್ತಾ, ಅಟ್ಲಾಂಟಾ ದಿಂದ ನಾರ್ತ್- ಕ್ಯಾರೊಲಿನಾ ಕಡೆಗೆ ಸಾಗಿದ್ದೆವು.
ದಾರಿಯಲ್ಲಿ ಬೇರೆ ಯಾವುವದನ್ನು ಕಂಡರೂ ಗಮನ ಹರಿಸುತ್ತಿರಲಿಲ್ಲ, ಪಕ್ಕದಲ್ಲಿ ದೈತ್ಯ ಟ್ರೆಕ್ ಬಂದಾಗ, ಒಮ್ಮೆಲೆ ಗಮನ ಹರಿಯಿತು ಅದರ ಬೆನ್ನಮೇಲೆ !!!(ಚಿತ್ರದಮೇಲೆ).
ನಮಗೆ ಯಾವುದು ಬೇಕೋ ಅದು ಮಾತ್ರ ಮನಸ್ಸಿಗೆ ನಾಟುತ್ತದೆ ಎನ್ನುವುದಕ್ಕೆ ಇಲ್ಲಿರುವ ಚಿತ್ರಣವೇ ಸಾಕ್ಷಿ !
ಹೆಣ್ಣುಮಕ್ಕಳಿಗೆ / ಹೆಂಗಸರಿಗೆ ತರ-ತರಾವರಿಯ ವಸ್ತುಗಳು ಮನಸ್ಸಿಗೆ ಹಿಡಿಸುವಹಾಗೆ, ಗಂಡುಮಕ್ಕಳಿಗೆ / ಗಂಡಸರಿಗೆ ‘ಈ’ವಸ್ತು ಬಹಳ ಪ್ರಿಯಕರ 🙂 ಅಲ್ಲವೇ?
ಮನುಷ್ಯ ಇರುವುದೇ ಹೀಗೆ ಎನಿಸುತ್ತದೆ. ನಮಗೆಬೇಕಾದನ್ನು ಮಾತ್ರ ಆಯ್ದುಕೊಂಡು ಬೇರೆಯವರ ಇಷ್ಟ/ಕಷ್ಟ/ನಷ್ಟ ಅಲ್ಲಗಳೆಯುತ್ತೇವೆ. ಜೀವನ ಇರುವುದೇ ಹೀಗೆ ಇದರ ನುಡುವೆ ಇದ್ದು ಬಾಳಬೇಕು.
ನನ್ನ ಬೋಧನೆ ಸಾಕು !! :):)
ನನ್ನ ‘Wife‘ ಇದನ್ನು ನೋಡಿದರೆ ಹೇಳುವುದು ‘ಇದಕ್ಕೆಲ್ಲ ಏನು ಕಡಿಮೆ ಇಲ್ಲ‘ ಎಂದು !!