‘ನೀವು ನಿಮ್ಮ ಕಾರಿನ ಗ್ಲಾಸ್ ಕೆಳಗೆ ಇಳಿಸುತ್ತೀರಾ?’ ಕುರುಚಲು ಗಡ್ಡವಿದ್ದ ಬೆಳ್ಳಗೆಇದ್ದ ಒಬ್ಬ ವ್ಯಕ್ತಿ ಕಾರಿನ ಹೊರಗಿನಿಂದ ಕಾರಿನಲ್ಲಿ ಒಳಗೆ ಕುಳಿತಿದ್ದ ಪ್ರಶಾಂತನಿಗೆ ಬಹಳ ವಿನಯದಿಂದ ಸನ್ಹೆ ಮಾಡುತ್ತಿದ್ದ. ಪ್ರಶಾಂತನಿಗೆ ಹೊರಗೆ ಏನು ನಡೆಯುತ್ತಿದೆ ಎಂದು ಕಾಣಿಸುತ್ತಿತ್ತು ಆದರೆ ಕೇಳಿಸುತ್ತಿರಲಿಲ್ಲ. ಅವನ ಸೌಂಡ್ ಪ್ರೂಫ್ ಕಾರು ಅವನಿಗೆ ತೊಂದರೆಗೆ ಸಿಲುಕಿಸುತ್ತದೆ ಎಂದು ತಿಳಿದಿರಲ್ಲ.ಆ ಸಮಯದಲ್ಲಿ ಸಹಜವಾಗಿ ಪ್ರಶಾಂತ ತನ್ನ ಕಾರಿನ ಕಿಟಕಿಯನ್ನು ಕೆಳಕ್ಕೆ ಇಳಿಸುತ್ತಾ ವಿನಮ್ರ ಭಾವದಿಂದ ಕೂಡಿದ ಹೊರಗಿನ ವ್ಯಕ್ತಿಗೆ ತನ್ನ ಸಹಾಯ ಬೇಕಾಗಿದೆ ಎಂದು ತನ್ನ ತಲೆಯನು ಸ್ವಲ್ಪ ಮುಂದೆಚಾಚಿ ‘ಹಾಯ್ ಎಂದು ಹೊರಗಿನ ವ್ಯಕ್ತಿಗೆ ಹಳಿದ !ಛಟೀರ್ ! ಎನ್ನುವ ಶಬ್ದ ಮಾತ್ರ ಕೇಳಿದ್ದುಂಟು, ಏನು ನಡೆಯುತ್ತಿದೆ ಎನ್ನುವ ಮೊದಲೇ ಪ್ರಶಾಂತನ ಎಡಭಾಗದ ಕೆನ್ನೆಯು ಚುರುಚುರು ಎನ್ನುತ್ತಾ ಕೆಂಪಾಗಿತ್ತು ! ಆಶ್ಚರ್ಯ, ತಲ್ಲಣ, ನೋವು ಹಾಗು ದಿಗ್ಭ್ರಾಂತನಾಗಿ ಪ್ರಶಾಂತ ತನ್ನ ಕಾರಿನ ಗ್ಲಾಸ್ ಮೇಲಕ್ಕೆ ಏರಿಸುತ್ತಿದ್ದಾಗ ಹೊರಗಿನ ವ್ಯಕ್ತಿ ಪ್ರಶಾಂತನನ್ನು ಕೊರಳಪಟ್ಟಿ ಹಿಡಿದು ಹೊರಗೆ ಎಳೆಯಲು ಪ್ರಯತ್ನಿಸುತ್ತಿದ್ದ, ಸಧ್ಯ !! ಕಾರಿನ ಗ್ಲಾಸ್ ಮೇಲಕ್ಕೆ ಬೇಗನೆ ಸರಿದು ಮುಚ್ಚಿಕೊಂಡಿತು. ಸರ-ಸರನೆ ಮೇಲಕ್ಕೆ ಸರಿಯುತ್ತಿದ್ದ ಗ್ಲಾಸ್ ಪೂರ್ತಿ ಮಚ್ಚುವ ಹೊತ್ತಿಗೆ ಹೊರಗಿನ ವ್ಯಕ್ತಿ ತನ್ನ ಬಲಗೈಯನ್ನು ಹಿಂದ್ಕಕೆ ಎಳೆದುಕೊಂಡುಬಿಟ್ಟ, ಪ್ರಶಾಂತ ಕಾರಿನ ಒಳಗೆ ಸುರಕ್ಷಿತವಾದ.ಹೊರಗಿನಿಂದ ಜನ-ಜನರ ಗುಂಪು ಸೇರುತ್ತಿತ್ತು, ತಾನು ರಸ್ತೆಯಲ್ಲಿ ಮಧ್ಯದಲ್ಲಿ ನಿಂತು ಎಲ್ಲರನ್ನು ಅಡ್ಡಗಟ್ಟಿದ್ದೇನೆ ಎಂದು ತಿಳಿದ ಪ್ರಶಾಂತನ ಕೆನ್ನೆಗೆ ಬಾರಿಸಿದ ವ್ಯಕ್ತಿ ಮೆಲ್ಲಗೆ ತನ್ನ ಆಟೋರಿಕ್ಷಾ ಕಡಗೆ ನಡೆದ.ಬೆಳಗಿನ ‘ಆಫೀಸ್ ಟ್ರಾಫಿಕ್’ ನ ನುಗ್ಗಾಟದಿಂದ ಬಹಳ ಹೊತ್ತು ರಸ್ತೆಯ ಮಧ್ಯೆ ನಿಲ್ಲಲಾಗದೆ ನೂಕು ನುಗ್ಗಲಾಗುವುದನ್ನು ಅರಿತ ಹೊರಗಿನ ಜನ ತಮ್ಮ ತಮ್ಮ ಕಾರ್ಯಕ್ಕೆ ವಾಪಸ್ಸಾದರು.ಈ ಸಂಭಾಷಣೆಯಲ್ಲಿ (ಸಹಜವಾಗಿ ಅದು ಏಕಪಕ್ಷೀಯವಾಗಿತ್ತು) ಪ್ರಶಾಂತ ತಾನು ಮಾತನಾಡಿದ ಹೊರಗಿನ ವ್ಯಕ್ತಿ ಆಟೋರಿಕ್ಷಾ ಚಾಲಕ ಎಂದು ತಿಳಿಯುವಷ್ಟರಲ್ಲಿ ಅವನ ಕೋಪಕ್ಕೆ ಬಲಿಯಾಗಿದ್ದ. (ಅದು ಕೋಪವಲ್ಲ, ಕ್ರೌರ್ಯ 🙂 ) ಪ್ರಶಾಂತ ಒಬ್ಬ ಮೂರ್ಖನಂತೆ ಕಾಣುತ್ತಿದ್ದ, ತಾನು ತಿರುಗಿ ಪ್ರತಿಕ್ರಿಯಿಸದೆ ಹಿಂದೆ ಸರಿದದ್ದನ್ನು ನೆನೆದು ತನ್ನ ದಡ್ಡತನವನ್ನು ತಾನೇ ಪ್ರಶ್ನಿಸುತ್ತಿದ್ದ.ಪ್ರಶಾಂತನಿಗೆ ಕಾಪಾಳಮೋಕ್ಷ ಮಾಡಿದ ವ್ಯಕ್ತಿಯ ಆಟೋರಿಕ್ಷಾ ಚಾಲಕ, ಅವನ ಆಟೋರಿಕ್ಷಾ ಚಾಲನೆಯನ್ನು ನೋಡಿ ಜೋರಾಗಿ ಕರ್ಕಶವಾಗಿ ಹಾರ್ನ್ ( honk ) ಮಾಡಿದ್ದಾನೆ, ಅದು ಪ್ರಶಾಂತ ಮಾಡಿರುವ ಕೆಲಸ ಎಂದು ತಿಳಿದು ಆಟೋರಿಕ್ಷಾ ಚಾಲಕ ಪ್ರಶಾಂತನ ಕೆನ್ನೆಗೆ ಹೊಡೆದಿದ್ದಾನೆ! ತಾನು ಮಾಡದೇಇರುವ ತಪ್ಪಿಗೆ ಸುಮ್ಮನೆ ಹೊಡೆಸಿಕೊಂಡ ಪ್ರಶಾಂತ ಮಂಗನಾಗಿದ್ದಾನೆ, ಇದೆಲ್ಲವನ್ನು ಪೂರ್ಣವಾಗಿ ತಿಳಿಯುವಷ್ಟರಲ್ಲಿ ಕಾಲ ಮಿಂಚಿದೆ !ಯಾರೋ ಮಾಡಿತ ಹಾರ್ನ್’ಗೆ ( honk ) ಯಾರೋ ಬಲಿ !ವ್ಯಂಗವೇನೆಂದರೆ, ಪ್ರಶಾಂತನಿಗೆ ಅವನ ಗೆಳೆಯರು, ಬಂಧುಮಿತ್ರರು, ಹೆಂಡತಿ ಇವರೆಲ್ಲರೂ ಅವನು ಗಾಡಿ ಓಡಿಸುವಾಗ ದಾರಿಯಲ್ಲಿ ಯಾರಾದರೂ ಅಡ್ಡಬಂದರೂ ‘ನೀನು ಹಾರ್ನ್ ( honk ) ಮಾಡುವುದಿಲ್ಲ’ ಎಂದು ಬಹಳ ಸಲ ಹೇಳಿದ್ದರು, ಪಾಪ ಈ ರೀತಿಯಾದ ಫಜೀತಿಗೆ ಪ್ರಶಾಂತ ಸಿಲುಕಿಕೊಳ್ಳುತ್ತಾನೆ ಎಂದು ಕನಸಿನಲ್ಲೂ ಅವನು ಎಣಿಸಿರಲಿಲ್ಲ ! 🙂 🙂( ನಾನು ಯಾರಿಗಾದರೂ ನಮ್ಮದು ತಾಳ್ಮೆಯುತ, ತಾಳ್ಮೆಯುಳ್ಳ ಸಮಾಜ ಎಂದು ಹೇಳುವಾಗ ನಿಜವಾಗಲೂ ಯೋಚಿಸುವಂತೆ, ಚಿಂತಿಸುವಂತೆ, ಆಲೋಚಿಸುವಂತೆ ಮಾಡುತ್ತದೆ. ಇಲ್ಲಿ ಯಾರಾದರೂ, ಹೇಗಾದರೂ, ಎಲ್ಲಿಯಾದರೂ ತಾಳ್ಮೆ ಕಳೆದುಕೊಳ್ಳಬಹುದು, ಕ್ರೌರ್ಯದಿಂದ ವರ್ತಿಸಬಹುದು, ಯುದ್ಧಕ್ಕೆ ನಿಲ್ಲಬಹುದು 🙂 )ಪ್ರಶಾಂತ ಒಬ್ಬ ಅಪ್ಪಟ ಕನ್ನಡಿಗ (ಇಲ್ಲಿಯೇ ಹುಟ್ಟಿ, ಬೆಳೆದು ಯಾರಿಗೆ ಗೊತ್ತು ಇಲ್ಲಿಯೇ ಸಾ***) ಆದರೆ ನಿಜವೆಂದರೆ, ಅಸಹಿಷ್ಣುತೆಗೆ, ಅಸಹನೆಗೆ, ಸಹಿಸದಿರುವಿಕೆಗೆ, ಸೈರಿಸದಿರುವಿಕೆಗೆ ಜಾತಿಯ, ಮತದ, ದೇಶದ, ಜಾಗದ ಯಾವ ಕಟ್ಟಳೆಯೂ ಇಲ್ಲ. ನೋವಾಗುತ್ತದೆ ಆದರೆ ಬೇರೆ ದಾರಿ ಎದೆಯೆ?ಇದೆಲ್ಲದರ ನಡುವೆ ಸೂರ್ಯ ಮಿರ-ಮಿರ ಮಿಂಚುತ್ತಿದ್ದ, ತಣ್ಣನೆಯಗಾಳಿ ಬೆಳಗಿನ ಬೆಂಗಳೂರಿನ (Outer Ring Road) ರಸ್ತೆಯಲ್ಲಿ ನಮ್ಮ ಟ್ರಾಫಿಕ್ ಹೇಗೆ ಹರಡಿರುತ್ತದೋ ಹಾಗೆ ಎಲ್ಲಕಡೆ ಸುಳಿದಾಡುತ್ತಿತ್ತು. ಈ ನಿಜ ಕಥೆಯಲ್ಲಿರುವ ಪ್ರಶಾಂತ ನಾನೆ 🙂 🙂 🙂 | ‘Can you please bring down your car window (slide down the glass), a man with an unshaven beard with fair complex asked politely. Prashanth did not hear a bit what is happening outside because his car was sound proof for outside noise.At that moment Prashanth obviously without any hesitation slid down the glass thinking that the other person was seeking help. With a polite gesture, he said Hi to the person outside the car.‘Slap was the sound Prashanth heard, and even before he realized, his right cheek was hurt, with pain, shock, and agony. Prashanth was trying to close his window, but the guy from outside was trying to yell and pull Prashanth out of the car’. Lucky! the window closed fast, while the other man was withdrawing his hands.The crowd from outside was building up, but because it was a Rush Hour, the person who slapped Prashanth had to move away. They temporarily blocked the entire stretch of the road.During the conversation (One-sided, obviously ) with the Auto driver, Prashanth realized that he was just a victim of the driver’s belligerence. Prashanth was questioning himself as he was looking like a fool and did not react immediately. (Maybe Prashanth was fool 😐 …. )When Prashanth realized that the driver was irritated by someone else honking at him, driver mistook and thought that it was Prashanth honking at him and slapped him, it was too late.The irony is, in the past Prashanth was criticized by his co-passengers, his friends and others for not honking at people on roads, but never realized that he will have to face like this one day. (I am laughing but at the same time not 🙂(If I were to say we are a tolerant community, this makes me think, and makes me deliberate :), anyone can become intolerant, bellicose any time 🙂 ).Prashanth is a Kannadiga (born, raised, maybe going to d** in Karnataka), intolerance has no language, no cast, no creed, no religion 😉Then the Sun was shining bright and there was a cool breeze on Bangalore roads and the Prashanth in this story was me 🙂 🙂 🙂 |