ಮಕ್ಕಳು ಬೆಳೆಯುವ ಪರಿಸರ

“ಕೆಲ ದಿನಗಳ ಹಿಂದೆ ನನ್ನ ಮನೆಗೆ ಯೆನ್.ಜಿ.ಓ ಸಂಸ್ಥೆಇಂದ ನನ್ನ ಮಕ್ಕಳು ಬೆಳೆಯುತ್ತಿರುವ ಪರಿಸರ / ಪರಿಸ್ಥಿತಿ ಗಳ ಬಗ್ಗೆ ತಿಳಿದುಕೊಳ್ಳಲು ಕೆಲವರು ಬಂದಿದ್ದರು”. ಮಕ್ಕಳಿಗೆ ಸರಿಯಾದ ರೀತಿಯ ಪರಿಸರ ಸಿಗುತ್ತಿಲ ಎಂದು ನಿಖರವಾದ ದೂರಿರುವುದರಿಂದ ಬಂದಿದ್ದರೆಂದು ತಿಳಿದುಬಂತು. ಈ ವಿಚಾರವಾಗಿ ನನ್ನ ಮನೆಯವರ ಮನದಲ್ಲಿ ರುದ್ರತಾಂಡವವೇ ನಡೆದ ವಿಚಾರ ಹಾಗಿರಲಿ, ಆದರೆ ತಕ್ಷಣ ನನಗೆ ಹೊಳೆದದ್ದು ನಾನು ಹಿಂದೆ ಬರೆದುಕೊಂಡ ಈ ಕೆಳಗಿನ ಸಾಲುಗಳನ್ನು ಈ ದಿನ(21-02-2016) ಈ ತಾಣದಲ್ಲಿ ಪ್ರಕಟಿಸುತ್ತಿದ್ದೇನೆ.

ಈ ಮಾತುಗಳು ನನ್ನವಲ್ಲ. ಕೇಳಿದ್ದನ್ನು ನೋಡಿದ್ದನ್ನು ಸಂಗ್ರಹಿಸಿದ್ದೇನೆ. ಈ ಕೆಳಗಿನ ಪರಿಸ್ಥಿತಿಯಲ್ಲಿ ಬದುಕಿರುವ ಎಲ್ಲ ಮಕ್ಕಳನ್ನು ಅತ್ಯಂತ ಹತ್ತಿರದಿಂದ ನೋಡಿದ್ದೇನೆ.

ಮಗುವು ವಿಮರ್ಶೆ ಮತ್ತು ಟೀಕೆಗಳ ನುಡುವೆ ಬೆಳೆದರೆ,
ಎಲ್ಲ ವಿಷಯಗಳನ್ನು / ಎಲ್ಲವನ್ನೂ ತಿರಸ್ಕಾರ ಮನೋಭಾವದಿಂದ ನೋಡುತ್ತವೆ ಮತ್ತು ತಿರಸ್ಕಾರ ಮನೋಭಾವ ಬೆಳೆಸಿಕೊಂಡು ಎಲ್ಲವನ್ನೂ ತಿರಸ್ಕಾರ ಮಾಡುತ್ತವೆ.

ಮಗುವು ಪ್ರೀತಿ ಸ್ನೇಹವಿಲ್ಲದ ಒರಟು ಪರಿಸರದಲ್ಲಿ ಬೆಳೆದರೆ, ಎಲ್ಲರ ಸಂಗಡ ಜಗಳವಾಡುವುದನ್ನು ಕಲಿಯುತ್ತವೆ.

ಮಗುವು ಭಯವಿರುವ ವಾತಾವರಣದಲ್ಲಿ ಬೆಳೆದರೆ,
ಅವು ಮಾನಸಿಕ ಸಂತುಲನೆ ಇಲ್ಲದೇ, ಭಯದಿಂದ ಅಪಾಯಕರವಾಗಿ ಎಲ್ಲರಿಗೂ ಹಾನಿಉಂಟುಮಾಡುವ ರೀತಿಯಲ್ಲಿ ಬದುಕುತ್ತವೆ.

ಮಗುವು ಮರುಕ ಪಡುವ ವಾತಾವರಣದಲ್ಲಿ ಬೆಳೆದರೆ,
ಅವು ತನ್ನನ್ನು ತಾನು ಪಾಪ (ಅಯ್ಯೋ ನನಗೆ ಮಾತ್ರ ಹೀಗಾಯಿತು) ಎಂದು ತಿಳಿದು ಬದುಕುತ್ತವೆ.

ಮಗುವು ತಾನು ಒರಟು ಭಾಷೆ ಮಾತಾಡುವವರ ಸಂಗಡ, ಹೀಯಾಳಿಸುವವರ ಮಧ್ಯೆ ಬೆಳೆದರೆ,
ಅವು ಸಂಕುಚಿತವಾಗಿ ವರ್ತನೆ ಮಾಡುವುದು ಕಲಿಯುತ್ತವೆ.

ಮಗುವು, ಅಸೂಯೆಯ ಪರಿಸರದಲ್ಲಿ ಬೆಳೆದರೆ
ಅವು ಎಲ್ಲರನ್ನೊ, ಎಲ್ಲರಲ್ಲಿಯೂ ತಪ್ಪು ಕಂಡುಹಿಡಿದು ಶತ್ರುಗಳಂತೆ ನೋಡುತ್ತವೆ.

ಮಗುವು ಪಶ್ಚಾತಾಪ ಪಡುವ ವಾತಾವರಣದಲ್ಲಿ ಅಥವಾ ಕಳ್ಳ ಬುದ್ಧಿಯವರ ನಡುವಣ ಬೆಳೆದರೆ,
ಅವು ಅಳುಕಿನ ರೀತಿಯಲ್ಲಿ ಬದುಕುತ್ತವೆ.

Leave a Reply

Your email address will not be published. Required fields are marked *