ಮಕ್ಕಳು

ನಿಜವಾದ ಜೀವಂತ ದೇವರುಗಳನ್ನು / ದೇವರನ್ನು ನೋಡಬೇಕು ಎಂದರೆ, ಎಲ್ಲಿ? ಎಂದು ಯಾರಾದರು ಕೇಳಿದಾಗ ತಿಳಿದವರು ಹೇಳುವುದು ಒಂದೇ ಜವಾಬು(ಉತ್ತರ), “ಮಕ್ಕಳನ್ನು ನೋಡಿ !” ಎಂದು.

ನಿಜ!! ಪ್ರತ್ಯಕ್ಷ ದೇವರುಗಳು ಎಂದರೆ ಮಕ್ಕಳೇ!! ನನ್ನ ಪ್ರಕಾರ ಹೊಸದಾಗಿ ರೂಪುಗೊಂಡಿತುವ ಮುಗ್ಧ ಸ್ವರೂಪದ ಪುಟ್ಟ ಚೇತನಾ ಶಕ್ತಿಗಳು. ಎಷ್ಟು ಶುದ್ಧವಾದ ಮನಸ್ಸು! ಸ್ವಲ್ಪವೂ ಕಲ್ಮಷ ಇಲ್ಲದ, ಚೂರೂ ಕೆಟ್ಟಬುದ್ಧಿ ಇಲ್ಲದ, ಅನಂತದಿಂದ ಆಗತಾನೇ ಇಳಿದುಬಂದ ಜೀವಗಳು. ಅದ್ಭುತವಾಗಿ ಹೆಣೆದಂತಹ ಹಗುರವಾದ ನೂಲಿನ ಬಟ್ಟೆಗಳಂತೆ. ಮುಗ್ಧತೆಯ ತಾಣಗಳಿದ್ದಂತೆ!  ನೇರ ನುಡಿ, ಕಂಡದ್ದನ್ನು ಕಂಡಂತೆ ಹೇಳುವುದು, ತೊದಲು ನುಡಿ, ಏನು ಮಾಡಿದರೆ ಏನಾಗುವುದು ಎಂಬ ಅರಿವೇ ಇಲ್ಲದ, ಇನ್ನೊಬ್ಬರು ಹೇಳುವುದನ್ನು ಕೇಳಿ ನಕಲು ಮಾಡುವ, ಮತ್ತೆ-ಮತ್ತೆ ಕೇಳಿದ ಪ್ರಶ್ನೆಗಳನ್ನೇ ಕೇಳುವ, ನಿಂತಕಡೆ ನಿಲ್ಲದ ಅದ್ಭುತ ಜೀವಗಳು.

ಮಕ್ಕಳು ಎಷ್ಟು ಸುಂದರ ಮನಸ್ಸುಳ್ಳವರಾಗಿರುತ್ತಾರೆ ಎಂದರೆ, ಅವರ ಬಳಿ ಎಲ್ಲರಿಗೂ ಒಂದೆ ರೀತಿಯ ಉತ್ತರ! ಮೇಲು-ಕೀಳು, ದ್ವೇಷ-ಮತ್ಸರ, ಜಾತಿ-ಮತ, ಹಿರಿಯರು-ಕಿರಿಯರು, ಮನುಷ್ಯ-ಪ್ರಾಣಿ ಹೀಗೆ ಯಾವ ಭೇದವೂ ಇಲ್ಲದೆ ಧೈರ್ಯದಿಂದ ಉತ್ತರಿಸುವ ರೀತಿ, ಹಾನಿ ಮಾಡದ, ನೋವು ಮಾಡದ ಮಾತುಗಳು ಇವೆಲ್ಲವೂ ಎಷ್ಟು ಚಂದ.

ಮಕ್ಕಳ ಮನಸ್ಸನ್ನು ಅರಿಯದವರು, ಅವರ ಮುಗ್ದತೆಯನ್ನು ಗೌರವಿಸದವರು ಇದ್ದರೂ ಇಲ್ಲದಂತೆ!

ಯಾವ ದೇವಸ್ಥಾನದಲ್ಲಿ / ದೇಗುಲದಲ್ಲಿ ಈ ರೀತಿಯಾದ ನಿಜ ದೇವರುಗಳನ್ನು ಕಾಣಲು ಸಾಧ್ಯ? ಇದು ನಿಜವಾದ ಪ್ರೀತಿ-ಪ್ರೇಮ ತುಂಬಿಕೊಂಡಿರುವ, ಪ್ರಪಂಚವನ್ನೇ ಪಸರಿಸುರುವ, ಬ್ರಮ್ಮ್ಹಾಂಡವನ್ನೇ ಬಂಧಿಸಿರುವ, ನಿಜ-ಪ್ರೆಮದ ಸತ್ಯ ಅನುಭವದ ಮೂಲ.

ಕಷ್ಟ ಪ್ರಯಾಸದ ವಿಷಯವೆಂದರೆ, ಮಕ್ಕಳ ಜೊತೆಗಿನ ಅನುಭವವನ್ನು ಹೇಳಲು / ಬಣ್ಣಿಸಲು ಯಾರಿಂದಲೂ ಸಾಧ್ಯವಿಲ್ಲ ಎಂಬುದು (ನನ್ನ ನಂಬಿಕೆ). ತಮ್ಮದೇ ಪ್ರಪಂಚದಲ್ಲಿರುವ ಪುಟ್ಟ-ಪುಟ್ಟ ಮನಸ್ಸುಗಳ ಬಗ್ಗೆ ಹೇಗೆ ಬರೆಯಲು ಸಾಧ್ಯ? ಬಹುಷ: ಈ ರೀತಿಯಾದ ನಿಸ್ವಾರ್ಥ ಪ್ರೀತಿ-ಪ್ರೇಮ ಬಿಂಬಿಸುವ, ಮುಗ್ಧ ಮನಸ್ಸುಳ್ಳ ನಮ್ಮ ಅಂತರಾಳವನ್ನು ಕೆದಕಿ ಅದನ್ನು ಸ್ಪರ್ಶಿಸಿದರೆ ಎಲ್ಲರ ಜೀವನವೂ ಸಾರ್ಥಕವಾದಂತೆ! ಸತ್ಯವಲ್ಲವೇ? !!!

ವಿಪರ್ಯಾಸವೆಂದರೆ, ಇದೇ ಮಕ್ಕಳು ಮುಂದೆ ಜನರ ಜತೆ ಕೂಡಿ-ಬೆಳೆದು ಸಮಾಜದ ಜತೆ ಹೊಂದಿಕೊಂಡು ತಮ್ಮ ಮುಗ್ಧತೆಯನ್ನು ಕಳೆದುಕೊಂಡು ತೊಳಲಾಟಕ್ಕೆ ಗುರಿಯಾಗುವುದಲ್ಲದೇ, ತಮ್ಮ ಜೀವನದ ಉದ್ದೇಷವನ್ನೇ ಮರೆಯುತ್ತಾರೆ! ಇದು ತಲ-ತಲಾಂತರದಿಂದ, ಯುಗ-ಯುಗಾಂತರದಿಂದ ನಡೆದು ಬಂದಿದೆಯಾದರು ಇದರ ನಡುವೆಯೇ ಬೆಳೆದು ನಿಜವಾದ ಪ್ರೀತಿ-ಪ್ರೇಮ ಅರಿತವರು ಕೆಲವರು ಮಾತ್ರ.

ಅವರೇ ಉಳಿವನ್ನು ಗೆದ್ದವರು, ಬದುಕನ್ನು ಅರಿತವರು, ಬದುಕಲು ತಿಳಿದವರ

Leave a Reply

Your email address will not be published. Required fields are marked *