ಸಿಟ್ಟಿನ ಸಂದರ್ಭವನ್ನು ನಿಭಾಯಿಸಿ

ಸಿಟ್ಟು ಎನ್ನುವುದು ಒಂದು ಭಾವನೆ ! ಹೇಗೆ ಸಂತೋಷ, ದುಃಖ, ಆನಂದ ಎನ್ನುವುದು ಭಾವನೆಗಳೋ ಹಾಗೆಯೇ ‘ಸಿಟ್ಟು’ ಕೂಡ ಒಂದು ಭಾವನೆ.

  1. ನೀವು ಸಿಟ್ಟು ಪಡುವುದಕ್ಕಿಂತ ಮುನ್ನ ನಿಮ್ಮ ಸಿಟ್ಟಿನ ಕಾರಣವನ್ನು ಮಾತನಾಡಿ. ನೀವು ಅಥವಾ ನಿಮ್ಮ ಜೊತೆಗಾರರಲ್ಲಿ ಸಿಟ್ಟಿನ ಕಾರಣವನ್ನು ಮುಂದಿಟ್ಟು ಮಾತಾಡಿದಾಗ, ಸುರಕ್ಷಕವಾಗಿ ಪರಿಹಾರ ದೊರಕುತ್ತದೆ. ಅದು ವಾದ-ವಿವಾದ ಅಥವಾ ವ್ಯರ್ಥ-ಚರ್ಚೆಗೆ ಎಡೆ ಮಾಡಿಕೊಡುವುದಿಲ್ಲ. ಕೆಲವೊಮ್ಮೆ ಸಮಸ್ಯೆಯನ್ನು ‘ಮಾತಾಡಿ ವಿವರಿಸಿದರೆ’ ಅಲ್ಲೇ ಸಮಸ್ಯೆಯ ಪರಿಹಾರ ಸಿಗುತ್ತದೆ. ಮುಂದಿನ ಅನಾಹುತವನ್ನು ಅಲ್ಲೇ ತಡೆಗಟ್ಟಬಹುದು. ಈ ಸಂದರ್ಭದಲ್ಲಿ ಬೇರೆಯವರನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ.
  2. ನಿಮ್ಮ ಧ್ವನಿಯನ್ನು ಎತ್ತರಿಸಬೇಡಿ, ಸಮಾಧಾನ ತಂದುಕೊಳ್ಳಿ. ನಿಮಗೆ ಆಶ್ಚರ್ಯವಾಗಬಹುದು, ಮೆಲ್ಲಗೆ ವ್ಯವಹರಿಸುವುದರಲ್ಲಿ ಬಹಳಷ್ಟು ಸಮಸ್ಯೆಗಳನ್ನು ನಿಭಾಯಿಸಬಹುದು. ನೋವಿನ ಭಾವನೆಯನ್ನು ಹಾಗು ನೋವಿಗೆ ಕಾರಣವಾದ ಕ್ರಿಯೆ-ಪ್ರಕ್ರಿಯೆಗಳನ್ನು ಮತ್ತು ಭಿನ್ನಾಭಿಪ್ರಾಯವನ್ನು ಸರಿಪಡಿಸಬಹುದು. ಇದು ನಮಲ್ಲಿನ ಸಂಭಂದಗಳನ್ನು ಉತ್ತಮಪಡಿಸುತ್ತದೆ ಹಾಗು ನಮಲ್ಲಿನ ಭಿನ್ನಾಭಿಪ್ರಾಯವನ್ನು ನಿಭಾಯಿಸುತ್ತದೆ.
  3. ನಿಮ್ಮ ಸಂಬಂಧವನ್ನು ಮುಂದಿಟ್ಟು ಹೆದರಿಸಬೇಡಿ ಹಾಗು ನಿಮ್ಮ ಎಲ್ಲ ಸಿಟ್ಟಿನ ಮಾತುಗಳು ನಿಮ್ಮ ಸಂಬಂಧವನ್ನು ಕಡಿದುಬಿಡುತ್ತದೆ ಎಂದು ತಿಳಿಯಬೇಡಿ. ಯಾವುದೇ ರೀತಿಯಾದ ಭಾವನಾತ್ಮಕ ಬೆದರಿಕೆಯಿಂದ ಅಥವಾ ಬೆದರಿಕೆಯ ಮಾತುಗಳಿಂದ ಕಟ್ಟಬೇಡಿ. ಇದು ನಿಮ್ಮ ಜೊತೆಯವರನ್ನು ಗಾಬರಿಮಾಡಿ ದಿಗಿಲುಹುಟ್ಟಿಸಿ ಅಧೀರರನ್ನಾಗಿ ಮಾಡುತ್ತದೆ ಅದು ಸರಿಯಲ್ಲ. ನೀವು ‘ಸಾಯುತ್ತೇನೆಯೋ’ / ‘ಮನೆ-ಬಿಟ್ಟುಹೋಗುತ್ತೇನೆಯೋ’ / ‘ಸಂಬಂಧ ಕಡಿದುಕೊಳ್ಳುತ್ತೇನೆಯೋ’ ಅಂದು ನುಡಿದಾಗ, ಇನ್ನೊಬ್ಬರು ಆ ಕ್ಷಣದಲ್ಲಿ ಅದೇ ಸತ್ಯವೆಂದು ನಂಬಿ ಅದರ ಬಗ್ಗೆ ಯೋಚಿಸಿ ಮುಂದಿನ ನಡಿಗೆಗಳನ್ನು ಯೋಚಿಸುತ್ತಿರುತ್ತಾರೆ. ಹಾಗು ಸಂಪೂರ್ಣ ನಿರುತ್ಸಾಹಕ್ಕೆ ಹೋಗುವ ಹೆಚ್ಚಿನ ಸಾಧ್ಯತೆಗಳಿರುತ್ತವೆ. ನೀವು ಆಗ ನಿಮ್ಮ ಸಿಟ್ಟಿನ ಕಾರಣಕ್ಕೆ ಪರಿಹಾರವಾಗಿ ಏನು ಅಪೇಕ್ಷಿಸುತ್ತೀರೋ ಅದು ಸಿಗುವುದಿಲ್ಲ ಮತ್ತು ಅಪೇಕ್ಷಿಸಿದ ರೀತಿಯಲ್ಲಿ ನಡೆಯುವುದಿಲ್ಲ.
  4. ಹಳೆಯದನ್ನು ಎತ್ತಾಡಬೇಡಿ, ಹಳೆಯ ತಪ್ಪುಗಳನ್ನು ಪುನಃ ನೆನೆದು ಅದನ್ನು ಸುತ್ತಿಗೆಮಾಡಿಕೊಂಡು ಹೊಡೆಯುವುದರಿಂದ ಮನಸ್ಸು ಛಿದ್ರ-ಛಿದ್ರವಾಗುತ್ತದೆ. ಈಗಿರುವ ಸಮಸ್ಯೆಯನ್ನು ಮೊದಲು ಬಗೆಹರಿಸಿ ನಂತರ ಬೇರೆಯ ಸಮಯದಲ್ಲಿ ಹಳೆಯ ವ್ಯತ್ಯಾಸವನ್ನು ಸರಿಪಡಿಸಬಹುದು.
  5. ನಿಮ್ಮ ಸಿಟ್ಟನ್ನು / ಆಸಮಾಧಾನವನ್ನು ಸರಿಯಾದರೀತಿಯಲ್ಲಿ ವ್ಯಕ್ತಪಡಿ, ಎಲ್ಲರಿಗೂ ತಮ್ಮನ್ನು ತಾವು ಸಮರ್ಥಿಸಿಕೊಳ್ಳುವ ಅಧಿಕಾರ ಇರುತ್ತದೆ. ಸಮರ್ಥನೆ ವಾದ-ವಿವಾದಕ್ಕೆ ತಿರುಗುತ್ತದೆ, ಇದನ್ನು ತರ್ಕಬದ್ಧವಾಗಿ ವಿಚಾರಮಾಡಿ. ನೆನಪಿಡಿ ನಿಮ್ಮ ಸಮಸ್ಯೆ ಸರಿಪಡಿಸಲಾಗದಿದ್ದ ಪಕ್ಷದಲ್ಲಿ ತಲೆಕೆಡಿಸಿಕೊಳ್ಳಬೇಡಿ. ಕೆಲವೊಂದು ಸಮಸ್ಯೆಗಳಿಗೆ ತಕ್ಷಣ ಪರಿಹಾರ ಸಿಗುವುದಿಲ್ಲ.
  6. ಬೈಗುಳಗಳಿಗೆ ಯಾವ ಅವಕಾಶವಿಲ್ಲ. ಯಾವುದೇ ಸಂದರ್ಭದಲ್ಲಿ ಕೆಟ್ಟ ಬೈಗುಳಗಳಿಂದ / ಅವಾಚ್ಯ ಶಬ್ದಬಳಕೆ ಮಾಡಬಾರದು. ಯಾವುದೇ ಅಹಿಂಸಾತ್ಮಕ ಕ್ರಿಯೆಗಳಿಗೆ ಅವಕಾಶವಿಲ್ಲ, ಉದಾಹರಣೆಗೆ, ಬಾಗಿಲನ್ನು ಜೋರಾಗಿ ಬಡಿಯುವುದು, ಪುಸ್ತಕಗಳನ್ನು ಎಸೆಯುವುದು, ತಟ್ಟೆ-ಲೋಟಗಳನ್ನು ಎಸೆಯುವುದು, ಕೈ ಮಾಡುವುದು, ಹೊಡೆಯುವುದು ಹೀಗೇನಾದರೂ ನಡೆದರೆ ತಕ್ಷಣ ಪೊಲೀಸರಿಗೆ ದೂರು ಮಾಡಿ. ಅನಂತರ ಮಾನಸಿಕ ಸಮಸ್ಯೆಗಳನ್ನು ಸರಿಪಡಿಸುವ ವೈದ್ಯರನ್ನು ಭೇಟಿ ಮಾಡಿ.
  7. ಸಿಟ್ಟು ಬಂದಾಗ, ನಿಮ್ಮ ದೇಹವನ್ನೊಮ್ಮೆ ಗಮನಿಸಿ !, ಕೋಪಮಾಡಿಕೊಂಡಾಗ ನಿಮ್ಮ ದೇಹ, ಹಲವಾರು ರಾಸಾಯನಿಕಗಳನ್ನು ಬಿಡುಗಡೆ ಮಾಡುತ್ತದೆ. ನಿಮ್ಮ ಉಸಿರಾಟ ಜೋರಾಗುತ್ತದೆ, ಎದೆಬಡಿತ ಜಾಸ್ತಿಯಾಗುತ್ತದೆ, ಮುಖಕ್ಕೆ ಹಾಗು ತಲೆಗೆ ರಕ್ತ ಉಕ್ಕುತ್ತದೆ, ಉದ್ರಿಕ್ತ ಸ್ಥಿತಿಯಲ್ಲಿ ಕೈ-ಕಾಲುಗಳಿಗೆ ಬಹಳ ಶಕ್ತಿ ಬರುತ್ತದೆ. ಬುದ್ದಿ ಸ್ಥಿಮಿತ ಕಳೆದುಕೊಳ್ಳುತ್ತದೆ, ನಿಮ್ಮ ಸಿಟ್ಟನ್ನು ನಿಬಾಯಿಸದಿದ್ದರೆ ಅನಾಹುತ ಖಚಿತ. ಸಿಟ್ಟು ಎನ್ನುವುದು ಒಂದು ಭಾವನೆ ! ಹೇಗೆ ಸಂತೋಷ, ದುಃಖ, ಆನಂದ ಎನ್ನುವುದು ಭಾವನೆಗಳೋ ಹಾಗೆಯೇ ‘ಸಿಟ್ಟು’ ಕೂಡ ಒಂದು ಭಾವನೆ.
  8. ಸಿಟ್ಟು ಪಡುವುದರಿಂದ ಏನು ಹಾನಿಯಿಲ್ಲ, ಆದರೆ ಸಿಟ್ಟನ್ನು ನಿಭಾಯಿಸದೇ ಇರುವುದು ಹಾನಿಕಾರಕ. ಯಾರಾದರೂ ಸಿಟ್ಟು ಮಾಡಿಕೊಂಡಾಗ ಅವರು ತಮ್ಮ ಭಾವನೆಯನ್ನು ತೋರಿಸುತ್ತಾರೆ, ವ್ಯಕ್ತಪಡಿಸುತ್ತಾರೆ. ಇದರಿಂದ ಸಂಬಂಧ ಕಡಿದುಕೊಳ್ಳುವುದಿಲ್ಲ, ಅಲ್ಲದೆ ಒಂದುವೇಳೆ ಕಟುವಾಗಿ ಮಾತಾಡಿದರೆ ಅದು ಕ್ರೋಧವನ್ನು ಬಿಂಬಿಸುತ್ತದೆ, ಆಕ್ರೋಶವನ್ನು ವ್ಯಕ್ತಪಡಿಸುತ್ತದೆ. ಸಿಟ್ಟು ಕ್ರೋದ ಮತ್ತು ಆಕ್ರೋಶಕ್ಕೆ ತಿರುಗಬಾರದು. ಕ್ರೋಧದ ನಡವಳಿಕೆ ಸಂಧರ್ಭವನ್ನು ಹಾಗು ಸಂಭಂದವನ್ನು ಹಾಳುಮಾಡುತ್ತದೆ.

ಆಯ್ಕೆ ನಿಮ್ಮದು !

Leave a Reply

Your email address will not be published. Required fields are marked *