ಒಂದಿಷ್ಟು ಸುತ್ತಿದಾಗ

ಇದು ನನ್ನ ಅನುಭವ ಮಾತ್ರ, ಇಲ್ಲಿ ಹೇಳುವ ಎಲ್ಲ ಸನ್ನಿವೇಶಗಳು ನನ್ನ ಅಭಿಪ್ರಾಯವಷ್ಟೇ.

ನಮ್ಮ ರಾಜ್ಯವನ್ನು ಬಿಟ್ಟು ಎಲ್ಲ ರಾಜ್ಯಗಳನ್ನು ಸುತ್ತಿದ್ದಾಗಿದೆ, ಇತರ ರಾಷ್ಟ್ರಗಳನ್ನು ನೋಡಿದ್ದಾಗಿದೆ. ಹೊಸ ನೆಲ, ಹೊಸ ನೀರು, ಹೊಸ ಜನ, ಹೊಸ ಉಡುಪು, ಹೊಸ ಭಾಷೆ, ಹೊಸ ನಡೆ, ಹೊಸ ಊಟ/ಆಹಾರ, ಹೊಸ ಪದ್ದತಿಗಳು, ಹೊಸ ನೀತಿ, ಹೊಸ ಯೋಚನೆಗಳು. ಆರಾಮಿನ / ಸವಲಿತ್ತಿನ ಜೀವನ ಶೈಲಿ, ಕೈ ನೀಡಿದರೆ ಸಿಗುವ ವಸ್ತುಗಳು, ಯಾವ ಲೌಕಿಕ ಸುಖ-ಭೋಗ ಗಳಿಗೂ ಕೊರತೆಯೇ ಇಲ್ಲದ ಜೀವನ. ಇಷ್ಟ ಬಂದಂತೆ, ಮನಸ್ಸಿಗೆ ತಿಳಿದದ್ದನ್ನು ಮಾಡಬಹುದಾದ ಸೌಕರ್ಯ… ಅಬ್ಬ ಒಂದೇ-ಎರಡೇ ನಾನಾ ರೀತಿಯ ಸವಲತ್ತುಗಳು.

ಮನಸ್ಸಿನ ಯಾವುದೋ ಮೂಲೆಯಲ್ಲಿ ತನ್ನದೇಆದ ಕೀರಲು ದ್ವನಿಯಲ್ಲಿ, ‘ನನ್ನ ಆಸೆ ಇದಲ್ಲ!! ನನ್ನ ದಾಹ ಈಗ ನನ್ನ ಬಳಿ ಇರುವ ವಸ್ತುಗಳಿಂದ ನೀಗುವುದಿಲ್ಲ!!’ ಎಂದು ಹೇಳುತ್ತಿರುತ್ತದೆ ಅಲ್ಲವೇ? ನನಗೆ ಮತ್ತೆ ಮತ್ತೆ ಜಿ.ಸ್.ಸ್ ಅವರ ‘ಇದಾವ ರಾಗ‘ ಹಾಡು ಕಾಡುತ್ತಿರುತ್ತದೆ.

ಬಹುಷ: ಮನುಷ್ಯನೇ ಹೀಗೆ…

ಎಷ್ಟೋ ಜನಕ್ಕೆ ಭೂಮಿಯ ಕೆಲ ಭಾಗ ಸಮತಟ್ಟಾಗಿದೆ ಎಂದರೆ ನಂಬುವುದೇಇಲ್ಲ !. ಮುಗ್ಧ ಜನರನ್ನು ಮರೆತಿರುವ ಸಮಾಜ ಒಂದುಕಡೆಯಾದರೆ ಮತ್ತೊಂದು ಕಡೆ ಎಲ್ಲರೂ ತಮ್ಮ ಹಕ್ಕಿನಿಂದ ಬದುಕಲಿ ಎಂದು ತ್ಯಾಗ ಮಾಡುವ ಮಹಾನುಭಾವರು. ಸತ್ಯ ಮತ್ತು ಆದರ್ಶದಲ್ಲಿ ಬದುಕುವ ಜನ, ಅವರನ್ನು ಅಣಕಿಸುವ ಬುದ್ಧಿವಂತರು ! ಸುಳ್ಳು ಗರಿಮೆಗಳಿಂದ ಮುಂದಿನ ದಿನಗಳಿಗೆ ಕಿವಿಕೊಡದ ‘ವಿವೇಕಿಗಳು‘ ಒಂದುಕಡೆಯಾದರೆ ಎಲ್ಲವನ್ನೂ ತ್ಯೆಜಿಸಿ ಜೇವನದ ಉದ್ದೇಶವನ್ನು ಹೇಳಲು ಹೊರಟ ಸಿದ್ದರು ! ತಮ್ಮ ಧರ್ಮ ಮಾತ್ರ ‘ಸರಿಯಾದ ಧರ್ಮ‘, ಇತರರ ನಂಬಿಕೆ, ಇತರ ಧರ್ಮ ‘ನೀಚ-ಸರಿಯಲ್ಲದ ಮಾರ್ಗ‘ ಎಂದು ಮನುಷ್ಯರನ್ನೇ ಕೊಂದು ಅಟ್ಟಹಾಸ ಮಾಡುತ್ತಿರುವ ‘ಕಡು-ಧರ್ಮ‘ ನಿಷ್ಟರು!

ಎಲ್ಲ ಪಾಪಿಗಳನ್ನು ಇಲ್ಲದಂತೆ ಮಾಡುವೆ ಎಂದು ಪಣತೊಟ್ಟಿ ನಿಂತಿರುವ ಯೋಧರು !.. ಇವೆಲ್ಲದರ ನುಡುವೆ ಸದ್ದಿಲ್ಲದೇ ‘ಮತಾಂತರ’ ಮಾಡುತ್ತಿರುವ ‘ಮಹಾಪುರುಷರು‘ !

ಕೆಲ ದೇಶಗಳಲ್ಲಿ ‘ತನ್ನ ಪರಿವಾರ’ ಮತ್ತು ಮುಂದಿನ ಪೀಳಿಗೆಗಾಗಿ ದುಡಿಯುತ್ತಿರುವ ಜನರಾದರೆ, ‘ನನ್ನ ಈ ದಿನದ ಬದುಕಾದರೆ’ ಸಾಕು ನನಗೆ ಯಾವ ‘ಮನುಷ್ಯನ ಸಂಬಂಧವೇ ಬೇಡ’ ಎಂದು ಜೀವಿಸುತ್ತಿರುವ ಜನ! ಕೆಲವು ದೇಶದ ಜನರಂತೂ ‘ನಾವೇ ಸರ್ವ ಶ್ರೇಷ್ಠರು’ ನಮ್ಮಿಂದಲೇ ಬೆಳಕಾಗುವುದು ಎಂದು ಬದುಕುತ್ತಿದ್ದಾರೆ.

ಸರಳ ಜೀವನದ ಅರ್ಥವೇ ಬದಲಾಗಿದೆ! ಅಥವಾ
ಸರಳಜೀವನ ಯಾರಿಗೂ ಬೇಕಾಗಿಲ್ಲವೇ ?

ಎಂತಹ ಚಕ್ರ …
ಹುಟ್ಟಿದ ಕ್ಷಣದಿಂದ ಬೆಳೆಯ ಬೇಕು
ಬೆಳೆಯಲು ಆಶ್ರಯ ಬೇಕು,
ಆಶ್ರಯ ಪಡೆವಾಗ ನಲಿವು-ನೋವು,
ಸಜ್ಜನರು / ಸತ್ಯವಂತರು ಸಿಕ್ಕರೆ ಹೋರಾಟದ ಬದುಕು..
ತಪ್ಪು ತಿಳಿವಳಿಕೆ / ಕೆಟ್ಟ ಸಹವಾಸವಾದರೆ ಹೀನಾಯ / ನೆಮ್ಮದಿ ಇಲ್ಲದ ಬದುಕು,
ಇವೆರಡಕ್ಕೂ ಹಣದ ಅವಶ್ಯಕತೆ,
ಜ್ಞಾನ ಸಂಪಾದನೆಗಾಗಿ ಓದಬೇಕು, ಓದಲು ಹಣ ಬೇಕು,
ಮಕ್ಕಳಿಗೆ ಓದಿಸಲು ತಾಯಿ-ತಂದೆಯರು ದುಡಿಯಬೇಕು.. ಮುಂದೆ ತಾನು-ತನ್ನ ಮಕ್ಕಳು ಮತ್ತು ಅವರ ‘ಆಗು-ಹೋಗು’ ಗಳ ಹೊಣೆ ,
ಈಗಿನ ದಿನಗಳಲ್ಲಿ ಬಂಧು-ಬಳಗ ಮನೆಗೆ ಬಂದರೆ ‘ಹೊಸ-ಖರ್ಚು’,
ನಡುವಯಸ್ಸಿನ ‘ಮಾನಸಿಕ ಹಾಗೂ ದೈಹಿಕ ಸಮಸ್ಯೆಗಳು’ ಇವಲ್ಲವನ್ನು ಸರಿಪಡಿಸಲು ‘ಹೊಸ ಉತ್ತರ’ಕ್ಕಾಗಿ ಹುಡುಕಾಟ !
ಅಷ್ಟರಲ್ಲಿ ಮುದಿತನ .. ಮತ್ತೆ ‘ಆಶ್ರಯಕ್ಕಾಗಿ ಅಳಲು’…
ಮುಂದೆ ಸಾವು .. ಸಾವಿನ ನಂತರ …. ????

ಇದು ಎಲ್ಲ ರಾಜ್ಯದ / ರಾಷ್ಟ್ರಗಳ ಜನರ ಹೋರಾಟ !!!
ಇದು ಹಿಂದೂ ಇತ್ತು, ಇಂದೂ ಇದೆ, ಮುಂದೂ ನಡೆವುದು 🙂

ಇದನ್ನು ನನ್ನ ಗೆಳೆಯನಿಗೆ ಹೇಳಿದಾಗ ಅವನು ಹೇಳಿದ

‘ಈಷ್ಟ್ ಹೇಳಕ್ಕೆ ನೀನೊಬ್ನೆಬೇಕಾ’ 🙂

Leave a Reply

Your email address will not be published. Required fields are marked *