ಬಹಳ ಜನ ಜೀವನದಲ್ಲಿ ಸಾಕಷ್ಟು ಅನುಭವವನ್ನು ಒಂದು ಸಣ್ಣ ವಾಖ್ಯದಲ್ಲಿ ಅಥವಾ ಒಂದು ಸಾಲಿನ ಮಾತಿನಲ್ಲಿ ಯಾವುದಾದರೊಂದು ಸಂದರ್ಭದಲ್ಲಿ ಬಳಸಿರುತ್ತಾರೆ.
ಆ ಮಹಾನುಭಾವರ ಮಾತು ಜೀವನದ ಮಾರ್ಗವನ್ನೋ, ಸರಳ ಯೋಚನೆಯನ್ನೋ, ಮನುಷ್ಯನ ಬದುಕಿನ ಉದ್ದೇಶವನ್ನೋ ಹೇಳುವುದೆಂದು ನನ್ನ ನಂಬಿಕೆ. ಈ ರೀತಿಯ ಸಾಲುಗಳಲ್ಲಿ ದಿಟವಾದ ಅರ್ಥವಿರುತ್ತದೆ.
ತಕ್ಷಣಕ್ಕೆ ಒಪ್ಪದಿದ್ದರೂ ನಿಧಾನವಾಗಿ ತಾಳ್ಮೆಯಿಂದ ಯೋಚಿಸಿದಾಗ ಈ ಮಾತಿನ ತಿರುಳು ತಿಳಿಯುತ್ತದೆ.
ಈ ಮಾತುಗಳನ್ನು / ಸಾಲುಗಳನ್ನು ಬರೆದವರ / ಸೃಷ್ಠಿಸಿದವರ ನೆನಪು ನನಗೆ ಇಲ್ಲವಾದರೂ, ಬೇರೆಯವರರಿಂದ ಕೇಳಿರುವುದನ್ನು ಬರೆಯುತ್ತಿದ್ದೇನೆ.
- ಕಾಲ ಎಲ್ಲದಕ್ಕೂ(ಎಲ್ಲ ಪ್ರಶ್ನೆಗಳಿಗೂ) ಉತ್ತರ ಕೊಡುತ್ತದೆ?
- ಸಮಯ ಬಹಳ ದೊಡ್ಡ ಶಿಕ್ಷಕ / ಸರಿಯಾಗಿ ಪಾಠ ಕಲಿಸುತ್ತದೆ
- ಯಾವುದನ್ನೂ ನೋಡಿದ ತಕ್ಷಣವೇ ನಿರ್ಣಯಿಸಬಾರದು ಅಥವಾ ನಿರ್ಧರಿಸಬಾರದು !
- ಕಷ್ಟಗಳು ಮನುಷ್ಯನನ್ನು ಗಟ್ಟಿ ಮಾಡುತ್ತವೆ
- ಮನುಷ್ಯರು ತಮ್ಮೊಂದಿಗೆ ಸ್ಪರ್ಧಿಸಬೇಕು(ಪೈ-ಪೋಟಿ ಮಾಡಬೇಕು) ಬೇರೆಯವರೊಂದಿರೆ ಅಲ್ಲ !
- ಸಣ್ಣ-ಪುಟ್ಟ ಕೆಲಸದಲ್ಲಿ ಸಿಗುವ ತೃಪ್ತಿಯೂ ದೊಡ್ಡ ಕೆಲಸದಲ್ಲಿ ಸಿಗುವ ತೃಪ್ತಿಯಷ್ಟೇ ಮಹತ್ವದ್ದಾಗಿರುತ್ತದೆ, ತೃಪ್ತಿಯಲ್ಲಿ ಭೇದವಿಲ್ಲ !
- ಸಮರಸವೇ ಜೀವನ !
- ಪ್ರೀತಿ ! ದೇಶ, ಭಾಷೆ, ಜಾತಿ, ಮತ, ಅಂತಸ್ತು, ಲಿಂಗ, ವಯಸ್ಸು, ಪಾಂಡಿತ್ಯ ಎಲ್ಲವನ್ನೂ ಮೀರಿ ನಿಂತಿದೆ !
- ತನ್ನನ್ನು ತಾನು ಗೌರವಿಸದವನು ಬೇರೆಯವರನ್ನು ಗೌರವಿಸುವುದಿಲ್ಲ.
- ಮಾತಿನಲ್ಲಿ ಹಿಡಿತವಿಲ್ಲದನ ವಿಚಾರ ಪ್ರಯೋಜನವಿಲ್ಲದ ನೀರಿನಂತೆ!
- ನಾವು ಯಾವುದನ್ನು ತೋರೆದು(ಬಿಟ್ಟು) ಹೋಗುತ್ತೇವೋ ಅದರ ಹಿಂದೇ ನಮ್ಮ ಜೀವನದ ಪೂರ್ತಿ ಓಡುತ್ತಿರುತ್ತೇವೆ.
- ನೀವೇನಾದರೂ ಇತ್ತೀಚಿಗೆ ಉಪಯೋಗಕ್ಕೆ ಬರುವುದನ್ನು ಮಾಡಿದ್ದೀರಾ? ಎಂದು ನಮ್ಮನ್ನೇ ನಾವು ಪ್ರಶ್ನೆ ಮಾಡಬೇಕು.
- ನಿಮಗೆ ವಯಸ್ಸಾದಾಗ ನೀವು ಏನನ್ನು(ಯಾವುದನ್ನು) ನೀರೀಕ್ಷಿಸುತ್ತೀರ?
- ಸಮಯದ ಮೌಲ್ಯ ಹಣದಿಂದ ಕಟ್ಟಲಾಗುವುದಿಲ್ಲ.
- ಕೆಲವೊಮ್ಮೆ ಜೀವನ, ಸುಲಭ ಮತ್ತು ಸಮಾನ ಎನಿಸುವುದಿಲ್ಲ; ಆದರೂ ಜೀವನ ಅತ್ಯಂತ ಸುಂದರ (ಜೀವನವೇ ಹೀಗೆ, ಕಷ್ಟವಿದ್ದರೆಮಾತ್ರ ಸುಖದ ಅನುಭವ)
- ಗೊಂದಲ ಅಥವಾ ಸುಂಶಯದಲ್ಲಿದ್ದಾಗ, ಮುಂದಿನ ಪುಟ್ಟ ಪುಟ್ಟ ಹೆಜ್ಜೆಯನ್ನು ಆಯ್ದುಕೊಳ್ಳಬೇಕು.
- ಜೀವನದ ಮಧುರ ಕ್ಷಣಗಳನ್ನು ಆನಂದಿಸದಿರಲು (ಅನುಭವಿಸದಿರಲು) ಜೀವನ ಬಹಳ ಚಿಕ್ಕದು.
- ನೀವು ಅನಾರೋಗ್ಯದಿಂದ ಬಳಲುವಾಗ ನಿಮ್ಮ ಕೆಲಸ ನಿಮ್ಮನ್ನು ಕಾಯುವುದಿಲ್ಲ ! ಕಾಯುವುದು ನಿಮ್ಮ ಗೆಳೆಯರು ಮತ್ತು ಕುಟುಂಬದವರು ಮಾತ್ರ !
- ನಿಮಗೆ ಬೇಡದಿರುವುದನ್ನು ಕಂಡುಕೊಳ್ಳುವುದರಲ್ಲಿ ಅರ್ಥವಿಲ್ಲ, ನಿಮ್ಮ ಅಂತರಾಳ ಕೆಳಿದರೆ ಮಾತ್ರ ಪ್ರಯತ್ನಿಸಿ !
- ನೀವು ಎಲ್ಲ ಜಗಳದ ಮಾತುಗಳನ್ನು ಗೆಲ್ಲಬೇಕಿಲ್ಲ, ನಿಮಗೆ ನೀವು ಸತ್ಯವಾಗಿದ್ದರೆ ಸಾಕು ! ನಿಮಗೆ ನೀವು ಸತ್ಯವಾಗಿರಿ (ನಿಜವಾಗಿರಿ)
- ಬೇರೆಯವರೊಂದಿಗೆ ನಿಮ್ಮ ದುಃಖವನ್ನು ಹಂಚಿಕೊಳ್ಳಿ ! ಒಬ್ಬರೆ ಅಳುವುದಕ್ಕಿಂತ / ದುಃಖಿಸುವುದಕ್ಕಿಂತ ಸಾಂತ್ವನಕಾರಿಯಾಗಿರುತ್ತದೆ (ಸಮಾದಾನಕರವಾಗಿರುತ್ತದೆ)
- ದೇವರು ಮಾತ್ರ ನಿಮ್ಮ ಕೋಪವನ್ನು ಸಹಿಸಿಕೊಳ್ಳುತ್ತಾನೆ, ಮನುಷ್ಯರಿಂದಾಗುವುದಿಲ್ಲ, ಮನುಷ್ಯರು ತಿರುಗಿಬೀಳುತ್ತಾರೆ.
- ಯಾವುದು ನಿಮಗೆ ಸರಿಹೊಂದುತ್ತದೆಯೋ, ಬೇಕಾಗಿದೆಯೋ, ಅವಶ್ಯಕವೋ ಅದಕ್ಕಾಗಿ ಮಾತ್ರ ಉಳಿಸಿ.
- ನಿಮ್ಮ ಹಿಂದಿನ ದಿನಗಳಲ್ಲಿ ನಡೆದ ಘಟನೆಗಳ ಬಗ್ಗೆ ಶಾಂತಿಯುತವಾಗಿ ವರ್ತಿಸಿ! ಹಳೆಯದ್ದನ್ನು ನೆನೆಯುತ್ತಾ ಈ ಕ್ಷಣವನ್ನು ಹಾಳುಮಾಡಿಕೊಳ್ಳಬೇಡಿ !
- ನೀವು ನಿಮ್ಮ ಮಕ್ಕಳ ಮುಂದೆ ಅಳುವುದರಿಂದ ಯಾವ ತೊಂದರೆಯೂ ಇಲ್ಲ !
- ನೀವು ನಿಮ್ಮ ಜೀವನವನ್ನು ಬೇರೆಯವರ ಜೀವನದ ಜತೆ ಹೋಲಿಕೆ ಮಾಡಬೇಡಿ, ಅವರ ಜೀವನದ ದಾರಿಯ ಬಗ್ಗೆ ಅವರ ಕಷ್ಟಗಳ ಬಗ್ಗೆ ನಿಮಗೆ ಯಾವ ಅರಿವೂ ಇರುವುದಿಲ್ಲ !
- ಯಾವುದೇ ಸಂಬಂಧ ಗೌಪ್ಯವಾಗಿಡಬೇಕಾಗಿ ಬಂದ ಸಂದರ್ಭದಲ್ಲಿ ಅತ್ಯುತ್ತಮವೆಂದರೆ, ಅಂತಹ ಸಂಬಂಧ ಗಳಿಂದ ದೂರ ನಿಲ್ಲಿ.
- ಈ ಪ್ರಕೃತಿಯಲ್ಲಿ ಎಲ್ಲವೂ ಕಣ್ಣುಮುಚ್ಚಿ ಕಣ್ತೆರೆಯುವುದರಲ್ಲಿ ಬದಲಾಗಬಹುದು ಅದರೆ ಸತ್ಯ ಮಾತ್ರ ಬದಲಾಗುವುದಿಲ್ಲ.
- ಒಂದು ಧೀರ್ಘ ಉಸಿರು, ಮನಸ್ಸಿನ್ನ ಎಲ್ಲ ಒತ್ತಡಗಳನ್ನು ಅಡಗಿಸುತ್ತದೆ (ನೆಮ್ಮದಿ ನೀಡುತ್ತದೆ)
- ಯಾವುದು ಉಪಯೋಗವಿಲ್ಲವೋ, ಪ್ರಯೋಜನವಿಲ್ಲವೋ ಅದನ್ನು ಬುಡದಿಂದ ಕಿತ್ತು ಬಿಸಾಡಿ (ಗೋಜಲುಗಳು, ಗಲಿಬಿಲಿ ಮನುಷ್ಯನ ಭಾರವನ್ನು ಹೆಚ್ಚಿಸುತ್ತದೆ)
- ಯಾವುದು ನಿಮನ್ನು ಕೊಲ್ಲುವುದಿಲ್ಲವೋ, ಅದೇ ನಿಮ್ಮನ್ನು ಗಟ್ಟಿ ಮಾಡುವುದು.
- ಖುಷಿಯಾಗಿರುವುದಕ್ಕೆ ಇನ್ನು ಕಾಲ ಮಿಂಚಿಲ್ಲ ! ಖುಷಿಯಾಗಿರಲು ನಿಮ್ಮಲ್ಲಿ ಮಾತ್ರ ಅಡಗಿದೆ ಬೇರಿಯವರಲಿಲ್ಲ, ಖುಷಿಯಾಗಿರುವುದು ಅಥವಾ ದುಃಖದಲ್ಲಿರುವು ನಿಮಗೆ ಮಾತ್ರ ಬಿಟ್ಟದ್ದು.
- ಜೀವನದಲ್ಲಿ ಯಾವುದನ್ನು ನೀವು ಪ್ರೀತಿಸಿ ಹೊಂದಬಯಸುತ್ತೀರೋ ಅದನ್ನು ತಮ್ಮದಾಗಿಸಿಕೊಳ್ಳಲು ಪ್ರಯತ್ನಿಸಿ, ಪ್ರಯತ್ನವಿಲ್ಲದೆ ಯಾವುದೂ ದೊರಕುವುದಿಲ್ಲ.
- ಹೊಸ ಹೊಸ ವಸ್ತುಗಳನ್ನು ಈಗಲೇ ಉಪಯೋಗಿಸಿ, ನಾಳೆಗೆಂದು ಇಡಬೇಡಿ, ಯಾವುದೋ ಮುಖ್ಯವಾದ ಸಂದರ್ಭಕ್ಕಾಗಿ ಕಾಯಬೇಡಿ. ಈ ಕ್ಷಣ ಅಮೂಲ್ಯ, ಈ ಕ್ಷಣ ಮುಖ್ಯ.
- ಯಾವುದೇ ವಿಚಾರವಿರಬಹುದು, ಯಾವುದೇ ಕೆಲಸವಿರಬಹುದು, ಬಹಳ ಚೆನ್ನಾಗಿ ಸಿದ್ಧರಾಗಿ. ನಿಖರವಾದ ಮತ್ತು ವಿವರವಾದ ಸಿದ್ಧತೆಯೊಂದಿಗೆ ಕೆಲಸ ಮಾಡಿ.
- ಮಧುರ ಕ್ಷಣಗಳನ್ನು ಇಂದೇ ಅನುಭವಿಸಿ, ಮುದಿತನದಲ್ಲಿ ಅನುಭವಿಸುತ್ತೇನೆ ಎಂದು, ವಯಸ್ಸಾದಮೇಲೆ ಅನುಭವಿಸುತ್ತೇನೆ ಎಂದು ಕಾಯಬೇಡಿ.
- ಬಹಳ ಮುಖ್ಯವಾದ ಅಂಗವೆಂದರೆ ನಿಮ್ಮ ಮೆದುಳು !! ಇದನ್ನು ಆರಿಯಿರಿ ಅರಿತು ಬಾಳಿರಿ.
- ಜೀವನದಲ್ಲಿ ಬರುವ ಎಲ್ಲ ವಿಪತ್ತುಗಳಿಗೆ(ಕಷ್ಟ) ತಲೆಕೆಡಿಸಿಕೊಳ್ಳದೆ ಈ ಪ್ರಶ್ನೆಯನ್ನು ನಮಗೆ ನೀವೇ ಕೇಲಿಕೊಳ್ಳಿರಿ ‘ಐದು ವರ್ಷಗಳಲ್ಲಿ ಈ ವಿಪತ್ತು(ಕಷ್ಟ) ನಮಗೆ ಏನು ಮಾಡೀತು?’.
- ಜೀವನವನ್ನು ನೀವುಮಾತ್ರ ಆಯ್ದುಕೊಳ್ಳಬೇಕು…ನೀವು ಮಾತ್ರ ! ನೀವು ಮಾತ್ರ ಆಯ್ದುಕೊಳ್ಳಲು ಸಾಧ್ಯ !!
- ಎಲ್ಲವನ್ನು ಎಲ್ಲರನ್ನು ಕ್ಷಮಿಸಿ ಆದರೆ ಮರೆಯಬೇಡಿ.
- ಬೇರೆಯವರು ನಿಮ್ಮ ಬಗ್ಗೆ ಏನು ಅಂದುಕೊಳ್ಳುತ್ತಾರೆ ಎಂದು ಯೋಚಿಸಬೇಡಿ, ಅದು ನಿಮ್ಮ ಕೆಲಸವಲ್ಲ.
- ಸಮಯ/ಕಾಲ ಎಲ್ಲವನ್ನು ಮಾಯಿಸುತ್ತದೆ / ವಾಸಿಮಾಡುತ್ತದೆ. ಎಲ್ಲದಕ್ಕೂ ಸಮಯ ಕೊಡಿ.
- ಸಂದರ್ಭ ಎಷ್ಟೇ ಒಳ್ಳೆಯದಿದ್ದರು ಕೆಟ್ಟದಿದ್ದರೊ ಬದಲಾಗಲೇಬೇಕು ಆದ ಬಾಳಿನ ನಿಮಯ. ಬದಲಾಗೇಆಗುತ್ತದೆ.
- ನಿನ್ನನು ನೀನು ತುಂಬಾ ಗಂಭೀರವಾಗಿ ಪರಿಗಣಿಸಬೇಡ, ನಿನ್ನ ಬಗ್ಗೆ ಬೇರೆಯವರು ತಲೆ ಕೆಡಿಸಿಕೊಳ್ಳುವುದಿಲ್ಲ.
- ಪವಾಡದಲ್ಲಿ ನಂಬಿಕೆ ಇರಲಿ.
- ನಿನ್ನಲ್ಲೇ ದೇವರು ದೇವರಲ್ಲೇ ನೀನು
- ಜೀವನವನ್ನು ಪರೀಕ್ಷಿಸಬೇಡ ಬದಲಾಗಿ ಜೀವನವನ್ನು ಪ್ರೀತಿಸು. ಬದುಕನ್ನು ಪ್ರೀತಿಸು.
- ನಿಮ್ಮ ಮಕ್ಕಳಿಗೆ ಒಂದೇ ಬಾಲ್ಯ ದೊರೆಯುವುದು..
- ಪ್ರತಿದಿನ ಹೊರಗೆ ಹೋಗಿ ಪ್ರಕೃತಿಯನ್ನು ಅನುಭವಿಸಬೇಕು. ಆಶ್ಚರ್ಯ ಅನುಭವಿಸಿದರೆ ಮಾತ್ರ.
- ನಾವು ನಮ್ಮ ಕಷ್ಟಗಳನ್ನು ಒಂದು ರಾಶಿಯಾಗಿಮಾಡಿ, ಬೇರೆಯವರ ಕಷ್ಟಗಳ ರಾಶಿರಳನ್ನು ನೋಡಿದಾಗ, ನಮ್ಮ ಕಷ್ಟಗಳ ರಾಶಿಯನ್ನು ಮತ್ತೆ ಬಾಚಿಕೊಳ್ಳುತ್ತೇವೆ.
- ಅಸೂಯೆ ಬರಿಯ ಸಮಯ ಹಾಳು. ನಮ್ಮಲ್ಲಿ ಯಾವುದು ಈಗಾಗಲೇ ಇರುವುದೋ ಅದನ್ನು ಒಪ್ಪಿಕೊಳ್ಳೋಣ, ಯಾವುದು ನಮಗೆಬೇಕೋ ಅದನ್ನು ಮಾತ್ರವಲ್ಲ !. ಇಲ್ಲದಿರುವುದನ್ನು ಸಂಪಾದಿಸೋಣ, ಕಿತ್ತುಕೊಳ್ಳುವುದು ಬೇಡ!
- ಉತ್ತಮವಾದದ್ದನ್ನು ಪಡೆಯುವುದಕ್ಕೆ ಸತತ ಸುಧಾರಣೆ ಬೇಕು.
- ಜೀವನ ಸುಂದರವಾದ ಆಕರ್ಷಕ ಡಬ್ಬಿಯಲ್ಲಿಲ್ಲ.
- ನಾವು ಪ್ರಪಂಚವನ್ನು ಅದು ಹೇಗೆ ಇರುವುದೋ ಹಾಗೆ ನೋಡುವುದಿಲ್ಲ, ನಾವು ಹೇಗೆ ಇರುವುವೆವೋ ಹಾಗೆ ನೋಡುತ್ತೇವೆ.
– ಅನೈಸ್ ನಿನ್ - ಸಕಾರಾತ್ಮಕ ಮನಶ್ಶಕ್ತಿ ಇರುವವರು ಹೇಗೆ ಕೆಲಸವನ್ನು ಮಾಡಬಹುದು ಎಂದು ಕೇಳುತ್ತಾರೆ ವಿನಃ ಏಕೆ ಅದನ್ನು ಮಾಡಲಾಗುವುದಿಲ್ಲ ಎಂದು ಹೇಳುವುದಿಲ್ಲ.
ಹೇಗೆ ಕೆಲಸವನ್ನು ಸಾಧಿಸಬಹುದು ಎನ್ನುವುದು, ಏಕೆ ಕೆಲಸವನ್ನು ಮಾಡಲಾಗುವುದಿಲ್ಲ ಎನ್ನುವುದಕ್ಕಿಂತ ಮಿಗಿಲಾಗಿರುತ್ತದೆ ! - ಸಕಾರಾತ್ಮಕವಾಗಿ ಯೋಚಿಸುವವರು ಒಮ್ಮೊಂಮ್ಮೆ ತಪ್ಪು ಯೋಚಿಸುವುದು, ಯಾವಾಗಲೂ ನಕಾರಾತ್ಮಕವಾಗಿ ಯೋಚಿಸುವವರು ಒಮ್ಮೊಂಮ್ಮೆ ಸರಿಯಾಗಿ ಯೋಚಿಸುವುದಕ್ಕಿಂತ ತರ್ಕಬದ್ಧವಾಗಿರುತ್ತದೆ.