ವೇದ ಸುಳ್ಳಾದರು.. ಗಾದೆ ಸುಳ್ಳಾಗದು!!
ಗಾದೆಗಳು ಜೀವನ ಅನುಭವದಿಂದ ಬರುವ ಮಾತುಗಳು! ಗಾದೆಗಳು ಜನರ ದಿನ-ನಿತ್ಯದ ಬದುಕಿನಲ್ಲಿ ಬಳಸುವಂತಹ ನಯವಾದ ಮತ್ತು ಚೂಪಾದ ಮಾತುಗಳು.
- ಕಳ್ಳನ ನಂಬಿದರು ಕುಳ್ಳನ ನಂಬಬಾರದು !
- ಹಳೇ ಗಂಡನ ಪಾದವೇ ಗತಿ !
- ಒಲ್ಲದ (ಬೇಡದ) ಗಂಡನಿಗೆ ಮೊಸರಲ್ಲಿ ಕಲ್ಲಿತ್ತಂತೆ !
- ಕುಂಬಳಕಾಯಿ ಕಳ್ಳ ಅಂದ್ರೆ ಹೆಗಲು ಮುಟ್ಟಿ ನೋಡಿಕೊಂಡರಂತೆ !
- ಗಂಡ-ಹೆಂಡತಿ ಜಗಳಲದಲ್ಲಿ ಕೂಸು ಬಡವಾಯ್ತು !
- ಕಳ್ಳನಿಗೊಂದು ಪಿಳ್ಳೆ ನೆಪ (ನೆವ) !
- ತಾನು ಕಳ್ಳ ಪರರ ನಂಬ !
- ಕಬ್ಬು ಡೊಂಕಾದ್ರು ಸಿಹಿಯಾಗಿರುತ್ತೆ !
- ಹಾವು ಎಷ್ಟೇ ವಯಸ್ಸಾದರೂ ವಿಷ ಹಳೇದಲ್ಲ !
- ಬಿಸಿ ಬಾಣಲೆ ಇಂದ ಬೆಂಕಿಗೆ !
- ಹಿರಿಯಕ್ಕನ ಚಾಳಿ ಮನೆ-ಮಂದಿಗೆಲ್ಲಾ !
- ಹುಲಿಗೆ ತನ್ನ ಕಾಡೇನು ಪರರ ಕಾಡೇನು?
- ಆಡು ಬೆಳೆದರೆ ಆನೆಯಾದೀತೇ?
- ಜಟ್ಟಿ ಬಿದ್ದರು ಮೀಸೆ ಮಣ್ಣಾಗಲ್ಲ !
- ಆನೆ ಹೊಟ್ಟೆಗೆ ಅಂಬಲಿ ಬಿಟ್ಟ ಹಾಗೆ !
- ರಾವಣಾಸುರನ ಹೊಟ್ಟೆಗೆ ಆರೆ ಕಾಸಿನ ಮಜ್ಜಿಗೆ! (ಸಾಕೇ?)
- ಆನೆ ಹೋದಲ್ಲೇ ದಾರಿ,ಶಟ್ಟಿ ಬಿಟ್ಟಲ್ಲೇ ಪಟ್ಟಣ !
- ಆಯ್ಕೊಂಡ್ ತಿನ್ನೋ ಕೋಳಿ ಕಾಲು ಮುರಿದ ಹಾಗೆ !
- ಅಂಕೆ ಇಲ್ಲದ ಕಪಿ ಲಂಕೆ ಸುಟ್ಟಿತು.
- ಅಳಿಲು ಏರಿದರೆ ಅರಳಿಮರ ಅಲ್ಲಾಡೇತೆ?
- ಎತ್ತು ಏರಿಗೆ ಎಳೆದರೆ ಕೋಣ ನೀರಿಗೆ ಎಳೀತಂತೆ !
- ಕೋಳಿ ಕೇಳಿ ಖಾರ ಅರೆಯಲ್ಲ !
- ತೋಳ ಹಳ್ಳಕ್ಕೆಬಿದ್ರೆ ಆಳಿಗೊಂದು ಕಲ್ಲು !
- ಮಾರಿಕಣ್ಣು ಹೋರಿಮೇಲೆ, ಕಟುಕನ ಕಣ್ಣು ಕುರಿ ಮೇಲೆ !
- ಉಪ್ಪು ತಿಂದವನು ನೀರು ಕುಡಿಯಲೇ ಬೇಕು !
- ಕೆರೆ ನೀರಿಗೆ ದೊಣ್ಣೆ ನಾಯಕನ ಅಪ್ಪಣೆನಾ ?
- ಕಳೆ ಇದ್ದಲ್ಲಿ ಬೆಳೆಇಲ್ಲ (ಕಳೇಇದ್ದಲ್ – ಬೆಳೆಇಲ್ಲ ) !
- ಕುಂಬಳ ಬಳ್ಳಿಗೆ ಕಾಯಿ ಭಾರವೇ ?
- ಬಡ ದೇವರ ಕಂಡರೆ ಬಿಲ್ಪತ್ರೆ ಕೂಡ ಬುಸ್ಸ್ ಎಂನ್ತಂತೆ!
- ಬಡವ ನೆಂಟನಲ್ಲ, ಬಾಳೇಕಾಯಿ ತರಕಾರಿಯಲ್ಲ !
- ಹೆಂಡ ಕುಡಿಯೋನ್ಗೆ ಯಾರ ಹಂಗು?
- ಅತ್ತೆಗೆ ಒಂದು ಕಾಲ ಆದರೆ, ಸೊಸೆಗೂ ಒಂದು ಕಾಲ!
- ಕುರಿ ಕೊಬ್ಬಿದಷ್ಟು ಕುರುಬನಿಗೆ ಲಾಭ !
- ಪಟ್ಟಣ ಆಳೋ ತಂದೆ ಇದ್ದರು ಕೊಟ್ಟಣ ಕುಟ್ಟೋಕ್ಕೆ ನೀನು ಬೇಕು ( ಪಟ್ಟಣ ಆಳೋ ತಂದೆ ಇದ್ದರು ಕೊಟ್ಟಣ ಕುಟ್ಟೋ ತಾಯಿ ಬೇಕು)