ಬೀಸೋಕಲ್ಲಿನ ಪದ

ಚಿತ್ರ ಕೊಡುಗೆ : Image Courtesy

ಕಲ್ಲಮ್ಮ ತಾಯಿ ಮೆಲ್ಲಮ್ಮ ರಾಗಿಯ
ಜಲ್ಲ ಜಲ್ಲಾನೆ ಉದುರಮ್ಮ
ಜಲ್ಲ ಜಲ್ಲಾನೆ ಉದುರಮ್ಮ ನಾ ನಿನಗೆ
ಬೆಲ್ಲದಾರತಿಯ ಬೆಳಗೇನು, ಬೆಲ್ಲದಾರತಿಯ ಬೆಳಗೇನು

ಅಂದುಳ್ಳ ಅಡಿಗಲ್ಲು ಚಂದುಳ್ಳ ಮೇಗಲ್ಲು
ಚಂದ್ರಮತಿಯೆಂಬ ಹಿಡಿಗೂಟ
ಚಂದ್ರಮತಿಯೆಂಬ ಹಿಡಿಗೂಟ ಹೀಡುಕೊಂಡು
ತಂದೆ-ತಾಯಿಗಳ ನೆನೆದೇನ, ತಂದೆ-ತಾಯಿಗಳ ನೆನೆದೇನ

ರಾಗಿಯು ಮುಗಿದಾವು ರಾಜನ್ನ ಹೆಚ್ಚ್ಯಾವು
ನಾನ್ ಹಿಡಿದ ಕೆಲಸ ವದಗ್ಯಾವು
ನಾನ್ ಹಿಡಿದ ಕೆಲಸ ವದಗ್ಯಾವು ರಾಗಿಕಲ್ಲೇ
ನಾ ತೂಗಿ ಬಿಡುತೀನಿ ಬಲದೋಳು, ನಾ ತೂಗಿ ಬಿಡುತೀನಿ ಬಲದೋಳು

ಕಲ್ಲು ಬಿಟ್ಟೇನೆಂದು ಸಿಟ್ಟ್ಯಾಕೆ ಸರಸತಿಯೇ
ಕುಕ್ಕೇಲಿ ರಾಗಿ ಬೆಳೆಯಾಲಿ
ಕುಕ್ಕೇಲಿ ರಾಗಿ ಬೆಳೆಯಾಲಿ, ತಕ್ಕೊಂಡು
ಮತ್ತೆ ರಾತ್ರಿಗೆ ಬರುತೀನಿ, ಮತ್ತೆ ರಾತ್ರಿಗೆ ಬರುತೀನಿ

ಕಲ್ಲಮ್ಮ ತಾಯಿ ಮೆಲ್ಲಮ್ಮ ರಾಗಿಯ
ಜಲ್ಲ ಜಲ್ಲಾನೆ ಉದುರಮ್ಮ
ಜಲ್ಲ ಜಲ್ಲಾನೆ ಉದುರಮ್ಮ ನಾ ನಿನಗೆ
ಬೆಲ್ಲದಾರತಿಯ ಬೆಳಗೇನು, ಬೆಲ್ಲದಾರತಿಯ ಬೆಳಗೇನು

Leave a Reply

Your email address will not be published. Required fields are marked *