ಜೀವದಾತ ಗೂರ್ಖಾ (Gūrkhā)

ಗೋಕರ್ಣದ ನಾಯಿ(ಗೂರ್ಖಾ), ಮೈಸೂರಿನ ನಾಯಿಯನ್ನು (ಕಾಳ) ಬದುಕಿಸಿದ ನಿಜದ ಪ್ರಸಂಗ,  ಜೀವಂತ ಘಟನೆಗೆ ನಾನು ಸಾಕ್ಷಿ.

(ನಮ್ಮಲ್ಲಿ ಈ  ಅನುಭವ ಕಡಿಮೆ.  ಈ ಅನುಭವನ್ನು ನಾನು ಹಚ್ಚಿಕೊಳ್ಳಲು ಬಯಸುತ್ತೇನೆ, ರಕ್ತದಾನ ಬರಿ ಮನುಷ್ಯನಿಗೆ ಮಾತ್ರ ಸೀಮಿತವಲ್ಲ, ಪ್ರಾಣಿಗಳಲ್ಲಿಯೂ ರಕ್ತದಾನ ಸಾಧ್ಯ !.  ಈ ಅರಿವು ಎಲ್ಲರಿಗೂ ತಿಳಿಯಬೇಕು)

ನನ್ನ ಕಣ್ಣಮುಂದೆ ಕುಸಿದುಬಿದ್ದ ಕಾಳನನ್ನು Dr. ಮದನ್ (Dr. Madan) ಬಳಿ ಕರೆದುತಂದಾಗ ನನ್ನ ಅಂತರಾಳ ಕುಂದಿತ್ತು. ನನ್ನ ೧೦ (10) ವರ್ಷದ ಮಗ ಕಾಳನನ್ನೇ ನೋಡುತ್ತಾ, ಅಪ್ಪ ನಮ್ಮ ಕಾಳನಿಗೆ ಏನಾಗಿದೆ? ಸತ್ತುಹೋಗುತ್ತಾನಾ ಕಾಳ ? ಎಂದಾಗ ನನ್ನ ಬಳಿ ಉತ್ತರವಿರಲಿಲ್ಲ.

Dr. ಮದನ್ ತಮ್ಮ ಪಶು ಆಸ್ಪತ್ರೆಗೆ  (Leela Veterinary Hospital) ಬಂದಕೂಡಲೆ ಕಾಳನ ರಕ್ತ ಪರೀಕ್ಷೆ ಮಾಡಿ, ಕಾಳನ ರಕ್ತ ಪ್ಲೇಟ್ಲೆಟ್ಗಳು (Blood Platelets) ಬಹಳ ಕಡಿಮೆ ಯಾಗಿದೆ, ತಕ್ಷಣ ರಕ್ತ ಕೊಡಬೇಕು, ಇಲ್ಲದಿದ್ದರೆ ಜೀವಕ್ಕೆ ಅಪಾಯ ಎಂದು ಸೂಚಿಸಿದರು.  ಪ್ರಾಣಿಗಳಿಗೆ ರಕ್ತದಾನ ಮಾಡಲಾಗುತ್ತದೆ ಎಂದು ಮೊಟ್ಟಮೊದಲ ಬಾರಿಗೆ ತಿಳಿದ ನಾನು ಏನುಮಾಡಬೇಕು ಎಂದು ತಿಳಿಯಲಿಲ್ಲ.

Dr. ಮದನ್ ‘ತಬ್ಬಿಬಾಗಿ ನಿಂತಿದ್ದ ನನ್ನ ಬಳಿಬಂದು ‘ನಿಮಗೆ ಯಾವುದಾದರೂ ಗೊತ್ತಿರುವ ಆರೋಗ್ಯಕರವಾಗಿರುವ ನಾಯಿ ಸಾಕಿರುವವರ ಪರಿಚಯವಿದ್ದರೆ ಅವರನ್ನು ನಿಮ್ಮ ನಾಯಿಗೆ ರಕ್ತ ಬೇಕಿದೆ ಎಂದು ಒಮ್ಮೆ ಕೇಳಿ’ ಎಂದರು.  ಯಾರನ್ನು ಹೇಗೆ ಕೇಳಲಿ? ಒಂದೊಮ್ಮೆ ಸಿಕ್ಕರೂ ಅವರನ್ನು ಹೇಗೆ ಕೇಳಲಿ?, ಪ್ರಾಣಿಗಳಿಗೆ ರಕ್ತದಾನ ಮಾಡಬಹುದು ಎಂದು ಎಷ್ಟು ಜನಕ್ಕೆ ಗೊತ್ತಿದೆ? ಮಗನ ಕಡೆ ನೋಡಿ ಕಾಳ ಉಳಿಯುವುದಿಲ್ಲ ಎಂದು ಮುಖದಭಾವ ಮಾಡಿದೆ.  ಅವನು ನನ್ನನೇ ನೋಡುತ್ತಾ ‘ಅಪ್ಪ, ಅಮ್ಮನಿಗೆ ಒಮ್ಮೆ ಫೋನ್ ಮಾಡು’ ಎಂದ.

ಫೋನ್ ಮಾಡಿ ನನ್ನ ಹೆಂಡತಿಯನ್ನು ಕರೆಸಿದ್ದಾಯಿತು, ಬರುತ್ತಲೇ ಅಳುತ್ತಾ ಬಂದ ಅವಳು ‘ಏಕೆ ಎಲ್ಲ ನಮ್ಮ ಮನೆಯವರಿಗೆ ಆಗುತ್ತದೆ?’, ಮೊನ್ನೆ ನಮ್ಮ ಅಮ್ಮನ ಮನೆ ನಾಯಿ ‘ರಾಣಿ ಸತ್ತಳು, ಈಗ ಕಾಳ ಈ ಪರಿಸ್ಥಿತಿಯಲ್ಲಿ,…. ಏನಾಗುತ್ತಿದೆ ನಮಗೆ?

ಇಷ್ಟರಲ್ಲಿ Dr. ಮದನ್ ಅವರ ಸ್ನೇಹಿತ ಅಮಿತ್ (Amit) ಅಲ್ಲಿಗೆ ಬಂದಿದ್ದರು, ಅವರು ನನ್ನ ಬಳಿಬಂದು ಯೋಚನೆ ಮಾಡಬೇಡಿ, ಯಾವುದಾದರೊಂದು ದಾರಿ ತಿಳಿಯುತ್ತದೆ ಎಂದರು.  ಅಮಿತ್ ತಮ್ಮ ಎಲ್ಲ ಪ್ರಯತ್ನವನ್ನು ಮಾಡುತ್ತಿದ್ದರು, ಆದರೇ ಕಾಳನ ಅದೃಷ್ಟ ಚೆನ್ನಾಗಿರಲಿಲ್ಲ , ಅಮಿತ್ ಪ್ರಯತ್ನಿಸುತ್ತಿದ್ದ ಎಲ್ಲ ರಕ್ತ ಕೊಡುವ ನಾಯಿಗಳು ‘Tick Fever’ ನಿಂದ ಬಳಲುತ್ತಿದ್ದವು. 

ಅಷ್ಟರಲ್ಲಿ ಅಲ್ಲಿಗೆ  ಬಂದದ್ದೇ ‘ರವಿ ಕುಮಾರ್‘ (Ravi Kumar),  ಅವರು ನನ್ನ ಹೆಂಡತಿ ಅಳುತ್ತಿದ್ದನ್ನು ಕಂಡು ‘ಏನಾಯಿತು’ ಎಂದು ವಿಚಾರಮಾಡಿದರು.  ಎಲ್ಲವನ್ನು ಆಗ ವಿಚಾರಮಾಡಿ ತಿಳಿದುಕೊಂಡ ಅವರು ಸ್ವಲ್ಪ ಕಾಲ ಆಸ್ಪತ್ರೆಯ ಹೊರಗೆ ಹೋಗಿ ತಮಗೆ ಗೊತ್ತಿದ್ದರವ ಬಳಿ ಮಾತಾಡಿ ಬಂದರು, ಬಂದು ಹೇಳಿದರು ‘ಚಿಂತಿಸಬೇಡಿ ಎಲ್ಲವು ಸರಿಹೋಗುತ್ತಿದೆ ಬರುತ್ತಿದ್ದಾನೆ ನಿಮ್ಮ ಕಾಳನನ್ನು ಉಳಿಸಲು ಒಬ್ಬ ಆಪತ್ಬಾಂಧವ !! ‘.   ಎಲ್ಲರಿಗೂ ಆಶ್ಚರ್ಯ !!

ಆಗ ಬಂದ ನಮ್ಮ ಧೀರ ಜೀವದಾತ ಗೂರ್ಖಾ (Gūrkhā).  ಅಲ್ಲಿದ್ದ ಎಲ್ಲ ಜನ, ಎಲ್ಲ ಪ್ರಾಣಿಗಳು ಗೂರ್ಖಾನನ್ನೇ ನೋಡುತ್ತಿದ್ದವು!.  ಏಕೆ ನೋಡಬಾರದು ಅವನು ನಡೆದುಬಂದ ಠೀವಿ ಹಾಗಿತ್ತು. ಗೂರ್ಖಾ ಆಸ್ಪತ್ರೆಯ ಒಳಗೆ ಬಂದ, ಬಂದು ಕೆಳಗೆ ತಲೆಯೆತ್ತಲಾರದೆ ಮಲಗಿದ್ದ ಕಾಳನನ್ನು ಕಂಡ.  ತನ್ನ ಭಾಷೆಯಲ್ಲಿ ‘ತಲೆಕೆಡಿಸಿಕೊಳ್ಳಬೇಡ, ನಾನು ನಿನಗೆ ರಕ್ತ ಕೊಡುತ್ತೇನೆ’ ಎಂದು ಹೊರಗೆ ಹೋದ. ಕಾಳನಿಗೆ ಜೀವ ಬಂದಂತಾಗಿರಬೇಕು.

ಇಲ್ಲಿ ನಿಜವಾದ ಧೀರರಾದವರು ‘ದರ್ಶನ್ ಹೆಗ್ಡೆ’, ಹೌದು ಅವರೇ ಗೂರ್ಖಾ’ನ ಒಡೆಯ. ಅವರು ಮನಸ್ಸುಮಾಡದಿದ್ದರೆ ಗೂರ್ಖಾ ಬರುತ್ತಿರಲಿಲ್ಲ ! ಕಾಳನಿಗೆ ರಕ್ತ ಸಿಗುತ್ತಿರಲಿಲ್ಲ !.  

ಹೇಗಿದೆ ನೋಡಿ, ಗೂರ್ಖಾ ಮೈಸೂರಿನವನಲ್ಲ, ಅವನು ಗೋಕರ್ಣದವನು, ಮೈಸೂರಿಗೆ ಕಾಲ ನಿಮಿತ್ತವಾಗಿ ಬಂದವನು. ಇಂತಹ ಸೋಜಿಗ ನಾನು ನೋಡಿಲ್ಲ, ಎಲಿಯ ಕಾಳ, ಎಲ್ಲಿಯ ಗೂರ್ಖಾ!, ಎಲ್ಲಿಯ ರವಿ ಕುಮಾರ್, ಎಲ್ಲಿಯ ದರ್ಶನ್ ಹೆಗ್ಡೆ, ಎಲ್ಲಿಯ Dr. ಮದನ್, ಎಲ್ಲಿಯ ಅಮಿತ್, ಯಾವ ಸಂಬಂಧ ನಮ್ಮೆಲ್ಲರನ್ನೂ ಬೆಸೆದಿತ್ತೋ ದೇವರಿಗೇ ಗೊತ್ತು !

Dr. ಮದನ್, ವಿಶಾಲ ಮನಸ್ಸಿನ ದರ್ಶನ್ ಹೆಗ್ಡೆ ಯವರ ಗೂರ್ಖಾನಿಂದ ರಕ್ತ ವರ್ಗಾವಣೆ (Blood Transfusion) ಮಾಡಿಸಿದರು!, ಆ ಹೊತ್ತಿಗೆ ರಾತ್ರಿ ೧೨ (12) ಗಂಟೆಯಾಗಿತ್ತು.  ದರ್ಶನ್ ಹೆಗ್ಡೆಯವರ ಪತ್ನಿ ಕೂಡ ಅಲ್ಲಿಗೆ ಬಂದಿದ್ದರು, ರಕ್ತ ದಾನ ಮಾಡಿದ ಗೂರ್ಖಾ, ತನ್ನ ನೋವಿನಿಂದ ಚೇತರಿಸಿಕೊಂಡು ಮೆಲ್ಲಗೆ ಮೇಲೆ ಎದ್ದು ಎಲ್ಲರನ್ನೂ ನೋಡಿದ. ತಾನು ನೋವನ್ನು ಅನುಭವಿಸಿ ಕಾಳನನ್ನು ಬದುಕಿಸಿದ ಗೂರ್ಖಾ, ಎಲ್ಲರ ಪ್ರಶಂಸೆಗೆ ಪಾತ್ರನಾದ, ಚರಿತ್ರೆಯಲ್ಲಿ ಭಾಗವಾದ, ನಾನು ಕಂಡ ಪ್ರಪಂಚದ ಇತಿಹಾಸದಲ್ಲಿ ಹೆಸರು ಬರೆದ.  ರಕ್ತ ಪಡೆದ ಕಾಳ, ಮೆಲ್ಲಗೆ ಚೇತರಿಸಿಕೊಳುತ್ತಿದ್ದ.  

ಇವೆಲ್ಲದರ ನಡುವೆ ಎಲೆ ಮರೆಯ ಕಾಯಿಯಹಾಗೆ ಎಲ್ಲ ಪ್ರಾಣಿಗಳಿಗೆ ಜೀವತುಂಬುತ್ತಿರುವ ಶ್ರೀನಿಧಿ ಮತ್ತು ಕೃಷ್ಣ ಇವರ ಸಹಾಯವಿಲ್ಲದಿದ್ದರೆ ಕಾಳ ಕಷ್ಟದಲ್ಲಿ ಸಿಲುಕಿಕೊಳ್ಳುತ್ತಿದ್ದ. 

ಹಾಗಾದರೆ ಈ ನಿಜವಾದ ಜ್ವಲಂತ ಅನುಭವದಿಂದ ಕಲಿತದ್ದೇನು ?

  • ತಜ್ಞ ರೋಗ ಪರೀಕ್ಷೆ, ತಜ್ಞ ತಪಾಸಣೆ, ನಿಖರವಾದ ಸಲಹೆ, ಸಮಯಕ್ಕೆ ತಕ್ಕಂತಹ ಸಲಹೆ ಕೊಡುವ ಕೌಶಲ್ಯ : Dr. ಮದನ್
  • ಇತರರಿಗೆ ಸಹಾಯ ಬೇಕಾದ ಸಮಯದಲ್ಲಿ ತನ್ನ ಸ್ವಾರ್ಥ ನೋಡದೇ ಸಹಾಯ ಮಾಡುವ ಮನೋಭಾವ  : ಅಮಿತ್
  • ಪ್ರಾಣಿಯ ಜೀವ, ಮನುಷ್ಯರ ಜೀವದಷ್ಟೇ ಮೌಲ್ಯವಾದದ್ದು, ಯಾವ ಅಪೇಕ್ಷೆಯಿಲ್ಲದೇ ಸಹಾಯ ಮಾಡುವ ಗುಣ : ರವಿ ಕುಮಾರ್
  • ತಮ್ಮ ಶಕ್ತಿಮೀರಿ ಸಹಾಯ ಮಾಡಲು ಮುಂದೆಬರುವ ಗುಣ : ವಿಠ್ಠಲ್ ಸರ್
  • ನಿಸ್ವಾರ್ಥ ಸೇವೆ ಮೆಲ್ಲಗೆ ತೆರೆಮರೆಯಲ್ಲಿ ಸೇವೆ ಸಲ್ಲಿಸುತ್ತಿರುವ ವ್ಯಕ್ತಿಗಳು : ಶ್ರೀನಿಧಿ ಮತ್ತು ಕೃಷ್ಣ
  • ವಿಶಾಲ ಹೃದಯವುಳ್ಳ, ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ಪ್ರಾಣಿಯಾಗಲಿ, ಮನುಷ್ಯನಾಗಲಿ ಜೀವದಾನ ಮಾಹಾದಾನ ಎಂದು ಹಿರಿತನ ತೋರಿದ ವ್ಯಕ್ತಿ : ದರ್ಶನ್ ಹೆಗ್ಡೆ
  • ಗೋಕರ್ಣದಿಂದ ಬಂದು ತನ್ನ ರಕ್ತ ಕೊಟ್ಟು ಮೈಸೂರಿನ ಕಾಳನನ್ನು ಬದುಕಿಸಿದ ಜರ್ಮನ್ ಶೆಫರ್ಡ್ ನಾಯಿ : ಗೂರ್ಖಾ

ಇವೆಲ್ಲವೂ ನಡೆದದ್ದು ಈ ಪಶು ಆಸ್ಪತ್ರೆಯಲ್ಲಿ

Leave a Reply

Your email address will not be published. Required fields are marked *