ನಮಾಮಿ ಗಂಗೆ

ಬರಹ : ಕೆ. ಆರ್. ಚಂದ್ರಶೇಖರ್
ಪ್ರಕಾಶನ : ಮೈಲಾಂಗ್ ಬುಕ್ಸ್ ಡಿಜಿಟಲ್ ಪ್ರೈವೇಟ್ ಲಿಮಿಟೆಡ್, ಬೆಂಗಳೂರು


ವಿಸ್ಕಿ (ಸಾಕು ನಾಯಿ) ಕೊಳಚೆಯಲ್ಲಿ ಬಿದ್ದು ಎದ್ದು ಯಾತನೆ ಪಟ್ಟರೂ ತನ್ನ ಪಾಡಿಗೆ ತನ್ನ ಮನೆಯವರು, ತನ್ನ ಬಾಲ, ತನ್ನ ಆಟದ ಚೆಂಡು ಹಾಗು ತನ್ನ ನಿಲುಕಿಗೆ / ಧೃಷ್ಟಿಗೆ ಸಿಗುವಂತೆ ನಡೆದುಕೊಂಡು ಹೋಗುವುದನ್ನು ನನ್ನ ಅಭಿಪ್ರಾಯದಲ್ಲಿ ಈ ಬರಹದಲ್ಲಿ ಲೇಖಕರು ಮನುಷ್ಯನ / ಜನರ ನಡವಳಿಕೆಗೆ ಹೋಲಿಸಿ ತಿಳಿಯಾಗಿ ಮನವರಿಕೆ ಮಾಡಿದಂತಿದೆ.
ವಿಷಯಕ್ಕೆ ಸಂಬಂಧಿಸಿದಂತೆ (ವಿಶೇಷವಾಗಿ ಜಲ ಮಾಲಿನ್ಯ ಕುರಿತು ) ಹಲವಾರು ಪ್ರಶ್ನೆಗಳನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿರುವ ಜೊತೆಗೆ ಸಮಾಜವೆಂಬ ವೇಧಿಕೆಯಲ್ಲಿ ಈ ವಿಷಯವಾಗಿ ಓದುಗರಲ್ಲಿ ಖಂಡಿತವಾಗಿ ಚರ್ಚೆಗೆ ಎಡೆಮಾಡಿಕೊಡುತ್ತದೆ ಎಂಬುದು ನನ್ನ ಭಾವನೆ. ಭರವಸೆಯೊಂದಿಗೆ ಮುಗಿವ ಕಥೆ ಒಂದು ಮಹಾಕಾದಂಬರಿಯ ಹೋಲಿಕೆಗೆ ನಿಲ್ಲದಿದ್ದರು ಕಿರು-ಕಾದಂಬರಿಯ ರೂಪದಲ್ಲಿ ಮಂಥನ ಶಕ್ತಿಯನ್ನು ವಿವೇಚನಾ ಶಕ್ತಿಯುಳ್ಳ ಓದುಗರ ಮನಸ್ಸಿನಲ್ಲಿ ಮೂಡಿಸುತ್ತದೆ.

Leave a Reply

Your email address will not be published. Required fields are marked *