ಮನೋ-ದೈಹಿಕ ರೋಗಗಳು

ಮನೋ-ದೈಹಿಕ ರೋಗಗಳು (Psychosomatic disease) ಮನೋ ದೈಹಿಕ ಎಂದರೆ ಮನಸ್ಸಿನ ಮೇಲೆ ಆಗುವ ಪರಿಣಾಮದಿಂದ ದೇಹದಮೇಲೆ ಆಗುವ ಪಪರಿಣಾಮಗಳೆಂದು ಪರಿಗಣಿಸಿದ್ದಾರೆ. ಮಾನಸಿಕ ಆರೋಗ್ಯ ಸರಿಯಾಗಿದ್ದರೆ ದೈಹಿಕವಾಗಿ ಆರೊಗ್ಯವಾಗಿರುತ್ತೇವೆ. ಇದು ಈಗಿನ ಮಾತಲ್ಲ!.. ನೂರಾರು ವರ್ಷಗಳ ಹಿಂದೆಯೇ ನಮ್ಮ ರುಷಿ-ಮುನಿಗಳು ಅರಿತಿದ್ದರು. ಇದು ಸುಳ್ಳಲ್ಲ, ನಮ್ಮ ಆಯುರ್ವೇದ ಶಾಸ್ತ್ರವೇ ಇದಕ್ಕೆ ಉದಾಹರಣೆಯಾಗಿದೆ. ಅದು ಹಾಗಿರಲಿ, ಈ ಮನೋ-ದೈಹಿಕ ರೋಗಗಳು ಹೇಗೆ ಬರುತ್ತವೆ ಎಂದು ತಿಳಿಯೋಣ. ಈಗಿನ ಜೀವನ ಶೈಲಿ, ಆಹಾರ, ವಿಹಾರ, ಸಮಾಜ ಮತ್ತು ನಮ್ಮ ತಪ್ಪು ಕಲ್ಪನೆಗಳು

Psychosomatic ಗೆ ಚಿತ್ರಗಳ ಫಲಿತಾಂಶಗಳು

Image Courtesy from https://www.onsurity.com

ಮನೋ ದೈಹಿಕ ಎಂದರೆ ಮನಸ್ಸಿನ ಮೇಲೆ ಆಗುವ ಪರಿಣಾಮದಿಂದ ದೇಹದಮೇಲೆ ಆಗುವ ಪರಿಣಾಮಗಳೆಂದು ಪರಿಗಣಿಸಿದ್ದಾರೆ.
ಮಾನಸಿಕ ಆರೋಗ್ಯ ಸರಿಯಾಗಿದ್ದರೆ ದೈಹಿಕವಾಗಿ ಆರೊಗ್ಯವಾಗಿರುತ್ತೇವೆ. ಇದು ಈಗಿನ ಮಾತಲ್ಲ!.. ನೂರಾರು ವರ್ಷಗಳ ಹಿಂದೆಯೇ ನಮ್ಮ ರುಷಿ-ಮುನಿಗಳು ಅರಿತಿದ್ದರು. ಇದು ಸುಳ್ಳಲ್ಲ, ನಮ್ಮ ಆಯುರ್ವೇದ ಶಾಸ್ತ್ರವೇ ಇದಕ್ಕೆ ಉದಾಹರಣೆಯಾಗಿದೆ.

ಅದು ಹಾಗಿರಲಿ, ಈ ಮನೋ-ದೈಹಿಕ ರೋಗಗಳು ಹೇಗೆ ಬರುತ್ತವೆ ಎಂದು ತಿಳಿಯೋಣ.
ಈಗಿನ ಜೀವನ ಶೈಲಿ, ಆಹಾರ, ವಿಹಾರ, ಸಮಾಜ ಮತ್ತು ನಮ್ಮ ತಪ್ಪು ಕಲ್ಪನೆಗಳು ಶೇಕಡಾ ೯೦% ರಷ್ಟು ಪಾತ್ರ ವಹಿಸಿದರೆ ಇನ್ನು ೧೦% ನಮ್ಮ ಅಜಾಗರೂಕತೆ ಕಾರಣವಾಗಿದೆ. ನಮಗೆ ಬೆಳ್ಳಗಿರುವುದೆಲ್ಲ ಹಾಲೇ !!

ಮನೋ-ದೈಹಿಕ ತೊಂದರೆಗಳಲ್ಲಿ ಸಾಮಾನ್ಯವಾಗಿ ಕಾಣುವಂತಹ ತೊಂದರೆಗಳಲ್ಲಿ
೧. ಜನಗಳಿಂದ ತೊಂದೆರೆ
೨. ಮಳೆ ನೀರಿನಿಂದ ತೊಂದರೆ
೩. ನೀರಿನಿಂದ ತೊಂದರೆ
೪. ಧೂಳಿನಿಂದ ತೊಂದರೆ
೫. ಹೂವುಗಳಿನಿಂದ ತೊಂದರೆ
೬. ಗಿಡ-ಮರ ಗಳಿಂದ ತೊಂದರೆ

ಹೀಗೆ ಹಲವಾರು ಅಲರ್ಜಿಗಳಿಂದ ಬಳಲುತ್ತಾರೆ.

ಮಾನಸಿಕ ಒತ್ತಡಗಳಿಂದ ಎಲ್ಲ ರೀತಿಯ ತೊಂದರೆಗಳು ಶುರುವಾಗುತ್ತವೆ. ಬಹಳ ರೀತಿಯ, ಬಹಳ ಬಗೆಯ ಮನ್ನಸ್ಸಿನ ಮೇಲೆ ಒತ್ತಡ ಹೇರುವ ತೊಂದರೆಗಳು ಮನೊ-ದೈಹಿಕ ರೋಗಗಳಿಗೆ ತಿರುಗುತ್ತವೆ. ಮನೋರೋಗ ತಜ್ಞನರುಗಳು ಹೇಳುವ ಹಾಗೆ, ನಾವು ಪೂರ್ವಾಗ್ರಹವಾಗಿ (ಅಂದರೆ, ಮೊದಲೇ ನಿರ್ಧಾರ ಮಾಡಿಕೊಂಡಿರುವ ಸ್ಥಿತಿ) ನಮಗೆ ಇದು ಆಗುವುದಿಲ್ಲ, ಈ ಆಹಾರ ಸರಿಯಾಗುವುದಿಲ್ಲ, ಈ ಜನ ನನ್ನ ನಡವಳಿಕೆಗೆ ಸರಿಯಾಗುವುದಿಲ್ಲ, ಈ ವಾತಾವರಣ ನನಗೆ ಸರಿ ಹೊಂದುವುದಿಲ್ಲ, ಇದು ನಮಗಲ್ಲ ಎಂದು ಅಂದುಕೊಂಡು ಬದುಕುತ್ತೆವೆ.
ಈ ರೀತಿಯಾದ ಯೋಚನೆ ಸರಿಯಲ್ಲ. ಯಾವುದೂ ಕೂಡ ಅತಿಯಾದರೆ ಅಮೃತವೂ ವಿಷವಾಗುತ್ತದೆ. ಸರಿಯಾದ ರೀತಿಯಲ್ಲಿ ಮನಸ್ಸನ್ನು ಒಪ್ಪಿಸಿದರೆ ಎಲ್ಲವೂ ನಮಗೆ ಒಗ್ಗುತ್ತವೆ, ಸರಿ ಹೊಂದುತ್ತವೆ.

ಈ ನಿಟ್ಟಿನಲ್ಲಿ, ಯೋಗವು ಗತಕಾಲದಿಂದಲೇ ಮನುಷ್ಯನ ಮನಸ್ಸನ್ನು ನಿಯಂತ್ರಿಸುವುದರಲ್ಲಿ ಪ್ರಥಮ ಸ್ಥಾನದಲ್ಲಿ ನಿಂತು ಸಹಾಯ ಮಾಡುತ್ತಿದೆ.

ನಿಜ!! ’ಯೋಗದಿಂದ ಎಲ್ಲ ಸಾದ್ಯ’!! ಯೋಗ ಒಂದು ಜೀವನ ಶೈಲಿ!

ಯೋಗಲ್ಲಿ ಬರುವ ಉಸಿರಾಟದ ನಿಯಮ/ನಿಯಂತ್ರಣಗಳಿಂದ ಸಾಕಷ್ಟು ತೊಂದರೆಗಳನ್ನು ನಿವಾರಿಸಬಹುದು.

ಯೋಗ ಎಂದರೆ: ಎಲ್ಲವನ್ನು ಹೊಂದಿರುವಂತಹ, ಎಲ್ಲವೂ ಕೂಡಿರುವಂತಹ – ಸೇರಿರುವಂತಹ ಎಂದು. ಎಂದರೆ, ಎಲ್ಲದರ ಮೂಲ ಎಂದು. ಮೂಲದಲ್ಲಿ ಸರಿಮಾಡುವಂತಾದರೆ ಅದಕ್ಕಿಂತ ಇನ್ನೇನು ಬೇಕು? ಹಾಗದರೆ, ಯೋಗ ಮೂಲವಾದ್ದರಿಂದ ಇಲ್ಲಿ ಎಲ್ಲದಕ್ಕೂ ಪರಿಹಾರವಿದೆ. ಇದು ನೂರಕ್ಕೆ ನೂರರಷ್ಟು ಸತ್ಯ! ಯೋಗದಿಂದ ಎಲ್ಲರೀತಿಯ ಖಾಯಿಲೆಗಳನ್ನು ದೂರಮಾಡಬಹುದು.

ಪ್ರಾಣಾಯಾಮದಿಂದ ಪ್ರಾಣ ಶಕ್ತಿಯನ್ನು ಹೆಚ್ಚಿಸಬಹುದು. ಉಸಿರಾಟ ಕ್ರಿಯೆಯಲ್ಲಿ ಹಲವಾರು ಬಗೆಗಳಿವೆ.

೧. ಹುಲಿ-ಉಸಿರಾಟ (೨ ಕೈಗಳ ಹಾಗು ಮಂಡಿಯ ಮೇಲೆನಿಂತು, ತಲೆಯನ್ನು ಕೆಳಗಿಂದ ಮೇಲೆ ಮಾಡಿ ಉಸಿರಾಡುವುದು)
೨. ಶ್ವಾನ-ಉಸಿರಾಟ (ನಾಲಿಗೆಯನ್ನು ಹೊರತೆಗೆದು ಬಾಯಿಯ ಮೂಲಕ ಉಸಿರಾಡುವುದು)
೩. ಮೊಲದ ಉಸಿರಾಟ (ಮೊಲದಂತೆ ಕುಳಿತು ವೇಘವಾಗಿ ಉಸಿರಾಡುವುದು)
೪. ಉರಗ ಅಥವಾ ಹಾವಿನ – ಉಸಿರಾಟ (ಹಾವಿನ ಹೇಡೆಯಂತೆ ತಲೆ ಎತ್ತಿ ಉಸಿರಾಡುವುದು)

ಉಸಿರಾಟದಿಂದ ಮನುಷ್ಯನಿಗೆ ಆ ಕ್ಷಣದಲ್ಲಿ ಬದುಕುವಂತಹ, ಇರುವಂತಹ ಅವಕಾಶ ಸಿಗುತ್ತದೆ. ಹಿಂದಿನ ನಿನಪಿಲ್ಲದೇ, ಮುಂದಿನ ಯೋಚನೆಇಲ್ಲದೆ ಆ ಕ್ಶಣದಲ್ಲಿ ಇರುವುದು ತುಂಬಾಮುಖ್ಯ.

ಯೋಗದಿಂದ, ಮನಸ್ಸು ಶುದ್ಧವಾಗುತ್ತದೆ
ಮನಸ್ಸಿನಿನ ಶುದ್ಧಿಇಂದ ದೇಹ ಶುದ್ದಿಯಾಗುತ್ತದೆ
ಮನಸ್ಸು + ದೇಹ ಶುದ್ಧಿಯಾದರೆ, ಬುದ್ಧಿ ಶುದ್ಧಿಯಾಗುತ್ತದೆ. ಇದು ಎಲ್ಲ ಕಾಲಕ್ಕೂ ಪರಮ ಸತ್ಯ!

ಹಾಗಾದರೆ ಆರೊಗ್ಯ ಕೆಟ್ಟರೆ ಅಲೋಪತಿ ಬೇಡವೆ?
ಬೇಕು, ಅಲೋಪತಿ ತಕ್ಷಣಕ್ಕೆ ಸಿಗಬಹುದಾದ ಅತ್ಯಂತ ಉಪಯುಕ್ತ ಓಷದ, ಆದರೆ ಧೀರ್ಘ ಕಾಲಕ್ಕೆ ಆಯುರ್ವೇದ ಮತ್ತು ಯೋಗ ಬಹಳ ಪರಿಣಾಮಕಾರಿ.

ಮನೋ-ದೈಹಿಕ ತೊಂದರೆಗಳನ್ನು ನಿವಾರಿಸುವ ಎಲ್ಲರೀತಿಯ ಉಪಾಯಗಳು ನಮ್ಮಲ್ಲಿದೆ, ಅದನ್ನು ನಾವು ಕಟ್ಟು-ನಿಟ್ಟಿನಿಂದ ಬಳಸಿಕೊಳ್ಳಬೇಕು.

Leave a Reply

Your email address will not be published. Required fields are marked *