ಸಾಕರ್ ಆಟವನ್ನು ಮೊದಲಿಗೆ ಎಲ್ಲಿ ಆಡಲಾಯಿತು ?

ಸಾಕರ್ ಪದವು ಅಸೋಸಿಯೇಷನ್ ಎಂಬ ಇಂಗ್ಲೀಷ್ ಪದದಿಂದ ಬಂದಿದೆ. ೧೮೬೩ (1863) ನಲ್ಲಿ ಇಂಗ್ಲೆಂಡ್ ನ ಫುಟ್ಬಾಲ್ ಸಂಘವು ಈಗಿರುವ ಸಾಕರ್ ಕ್ರೀಡೆಯ ನಿಯಮಗಳನ್ನು ಘೋಪಿಸಿತು. ಪುರಾತನ ,ಚೀನಿಯರು, ಗ್ರೀಕರು, ಹಾಗು ರೋಮನ್ನರು ಚೆಂಡನ್ನು ಒದೆಯುವಂತಹ ವಿವಿದ ಆಟಗಳನ್ನು ಆಡುತ್ತಿದ್ದರು. ೧೬ನೇ(16th) ಶತಮಾನದ ಹೊತ್ತಿಗೆ ಹಲವು ವಿಧಗಳ ಕಾಲ್ಚೆಂಡಾಟಗಳು ಜನಪ್ರಿಯವಾಗಿದ್ದವು. ಕೆಲವು ವಿಧಗಳಲ್ಲಂತೂ ನೂರಾರು ಪಟುಗಳು ಆಡುತ್ತಿದ್ದರು.

ಮಧ್ಯಯುಗದಲ್ಲಿ ಇಂಗ್ಲೆಂಡ್ನಲ್ಲಿ ಕಾಲ್ಚೆಂಡಾಟವು ಬಹಳ ಜನಪ್ರಿಯತೆಯನ್ನು ಗಳಿಸಿದಾಗ  ಇಂಗ್ಲೆಂಡ್ ನ  ರಾಜನು, ದೇಶದ ರಕ್ಷಣೆಗೆ ಅಗತ್ಯವಿರುವ ಧನುರ್ವಿಧ್ಯೆಯನ್ನು ಕಲಿಯದೇ ಕಾಲ್ಚೆಂಡಾಟವನ್ನು ಆಡುತ್ತಿದ್ದರೆ ಎಂದು ಕಾಲ್ಚೆಂಡಾಟವನ್ನೇ ನಿಷೇಧಿಸಿದನು.  ಆದರೆ ಇಂಗ್ಲೆಂಡ್ ನ ಶಾಲೆಯಲ್ಲಿ ಸಾಕರ್ ಜನಪ್ರಿಯತೆಯನ್ನು ಗಳಿಸಿ ಇಂದು ಜಗತ್ತಿನ ಎಲ್ಲೆಡೆ ಅದರಲ್ಲೂ, ವಿಶೇಷವಾಗಿ ಯುರೋಪ್ ಮತ್ತು ದಕ್ಷಿಣ ಅಮೇರಿಕಗಳಲ್ಲಿ ಹೆಚ್ಚು ಜನಪ್ರಿಯ ಕ್ರೇಡೆಯಾಗಿದೆ.

Leave a Reply

Your email address will not be published. Required fields are marked *