ನೀರಬಿಟ್ಟು ನೆಲದ ಮೇಲೆ ದೋಣಿ ಸಾಗದು..

ಗೀತ ರಚನೆ : ಗೀತಪ್ರಿಯ
ಹಾಡು : ಎಸ್. ಪಿ. ಬಾಲಸುಬ್ರಮಣ್ಯಂ(SPB)
ಸಂಗೀತ : ರಾಜನ್-ನಾಗಂದ್ರ

ಏ… ಹೇ… ಹೆ… ಹೇ…
ಓ… ಹೋ… ಹೊ… ಹೋ..
ಹಾ ಹಾ ಹಾ ಹಾ .. ಹಾ ಅ…

ನೀರಬಿಟ್ಟು ನೆಲದ ಮೇಲೆ ದೋಣಿ ಸಾಗದು..
ನೆಲವಬಿಟ್ಟು ನೀರ ಮೇಲೆ ಬಂಡಿ ಹೋಗದು..
ನಿನ್ನಬಿಟ್ಟು ನನ್ನ… ನನ್ನ ಬಿಟ್ಟು ನಿನ್ನ…
ಜೀವನಾ ಸಾಗದು.. ಜೀವನಾ ಸಾಗದು..
ನೀರಬಿಟ್ಟು ನೆಲದ ಮೇಲೆ ದೋಣಿ ಸಾಗದು..

ಸೂರ್ಯ ಬರದೆ ಕಮಲವೆಂದು ಅರಳದು ..
ಚಂದ್ರನಿರದೆ ತಾರೆಯೆಂದು ನಲಿಯದು..
ಸೂರ್ಯ ಬರದೆ ಕಮಲವೆಂದು ಅರಳದು ..
ಚಂದ್ರನಿರದೆ ತಾರೆಯೆಂದು ನಲಿಯದು..
ಒಲವು ಮೂಡದಿರಲು ಮನವು ಅರಳದು
ಮನವು ಅರಳದದಿರಲು ಗೆಲುವು ಕಾಣದು..
ಮನವು ಅರಳದದಿರಲು ಗೆಲುವು ಕಾಣದು…….

ನೀರಬಿಟ್ಟು ನೆಲದ ಮೇಲೆ ದೋಣಿ ಸಾಗದು..
ನೆಲವಬಿಟ್ಟು ನೀರ ಮೇಲೆ ಬಂಡಿ ಹೋಗದು..
ನಿನ್ನಬಿಟ್ಟು ನನ್ನ… ನನ್ನ ಬಿಟ್ಟು ನಿನ್ನ…
ಜೀವನಾ ಸಾಗದು.. ಜೀವನಾ ಸಾಗದು..
ನೀರಬಿಟ್ಟು ನೆಲದ ಮೇಲೆ ದೋಣಿ ಸಾಗದು..

ಲೋಕದಲ್ಲಿ ಗಂಡು ಹೆಣ್ಣಿಗಾಸರೆ…
ಆದರಿಲ್ಲಿ ನಾನು ನಿನ್ನ ಕೈಸೆರೆ..
ಕೂಡಿನಲಿವ ಆಸೆ ಮನದಿ ಕಾದಿರೆ..
ಹಿತವು ಎಲ್ಲಿ ನಾವು ದೂರವಾದರೆ ?
ಹಿತವು ಎಲ್ಲಿ ನಾವು ದೂರವಾದರೆ ?

ನೀರಬಿಟ್ಟು ನೆಲದ ಮೇಲೆ ದೋಣಿ ಸಾಗದು..
ನೆಲವಬಿಟ್ಟು ನೀರ ಮೇಲೆ ಬಂಡಿ ಹೋಗದು..
ನಿನ್ನಬಿಟ್ಟು ನನ್ನ… ನನ್ನ ಬಿಟ್ಟು ನಿನ್ನ…
ಜೀವನಾ ಸಾಗದು.. ಭಾವನಾ ಆಗದು..
ಹಾ ಹಾ ಹಾ .. ಆ ಹ ಹಾ ..
ಅಂ ಹಂ ಹಂ… ಅಂ ಹಂ ಹಂ…

Leave a Reply

Your email address will not be published. Required fields are marked *