ನೋಟದಾಗೆ ನಗೆಯಾ ಮೀಟಿ

ಹಾಡು: ಎಸ್. ಪಿ. ಬಾಲಸುಬ್ರಮಣ್ಯಂ
ಸಂಗೀತ: ರಾಜನ್-ನಾಗೇಂದ್ರ
ಸಾಹಿತ್ಯ: ಪ್ರೊ: ದೂಡ್ಡ ರಂಗೇಗೌಡ

ನೋಟದಾಗೆ ನಗೆಯಾ ಮೀಟಿ… ಮೋಜಿನಾಗೆ ಎಲ್ಲೆಯದಾಟಿ ಹಾ:..
ಮೋಡಿಯ ಮಾಡಿದೊಳ ಪರಸಂಗ ಐತೇ .. ಪರಸಂಗ ಐತೇ
ಆಹಾ! ಮೊಹಾವ ತೋರಿದೊಳ ಪರಸಂಗ ಐತೇ.. ಪರಸಂಗ ಐತೇ…

ಬರಡಾದ ಬದುಕಿಗೆ ಹೊಸ ನೇಸ್ರು ಅರಳೈತೆ!
ಮನಸ್ನಾಗೆ ವಸ ಆಸೆ, ವಸ ಭಾಸೆ ಬೆಳೆದೈತೆ !
ಕುಂತ್ರೂ, ನಿಂತ್ರೂ ನನ್ನ ಚೆಲುವಿ ಚೆಲುವೆ ಕಾಡೈತೆ !
ಮೈಯಾಗೆ ಸಂತೋಸದ ಮಲ್ಲಿಗೆ ಬಿರಿದೈತೆ !
ಮೈಯಾಗೆ ಸಂತೋಸದ ಮಲ್ಲಿಗೆ ಬಿರಿದೈತೆ !

ನೋಟದಾಗೆ ನಗೆಯಾ ಮೀಟಿ… ಮೋಜಿನಾಗೆ ಎಲ್ಲೆಯದಾಟಿ ಹಾ:..
ಮೋಡಿಯ ಮಾಡಿದೊಳ ಪರಸಂಗ ಐತೇ .. ಪರಸಂಗ ಐತೇ ಹ್ಹೆ ಹ್ಹೆ ಹೆ ಹ್ಹೆ ..
ಮೊಹಾವ ತೋರಿದೊಳ ಪರಸಂಗ ಐತೇ.. ಪರಸಂಗ ಐತೇ…

ಕಡುಬಾಳ ಹಾದ್ಯಾಗೆ ನನ್ನಪರಂಜಿ ವೊಳದೈತೆ !
ಹಗಲಾಗೆ ಇರುಳಾಗೆ ಆ ನಿಲುವೇ ಸೆಳೆದೈತೆ !
ಬಲವಾದ ಹಂಬಲಕೆ ನಗೆ ಬಿಲ್ಲೆ ಮಿನುಗೈತೆ !
ನನ್ನಾ ಉಡಿಗಿ ತನಿ ಬೆಡಗು ಮಿಂಚೂತ ಮೆರೆದೈತೆ !
ನನ್ನಾ ಉಡಿಗಿ ತನಿ ಬೆಡಗು ಮಿಂಚೂತ ಮೆರೆದೈತೆ !

ಹೈ … ನೋಟದಾಗೆ ನಗೆಯಾ ಮೀಟಿ… ಮೋಜಿನಾಗೆ ಎಲ್ಲೆಯದಾಟಿ
ಮೋಡಿಯ ಮಾಡಿದೊಳ ಪರಸಂಗ ಐತೇ .. ಪರಸಂಗ ಐತೇ
ಮೊಹಾವ ತೋರಿದೊಳ ಪರಸಂಗ ಐತೇ.. ಪರಸಂಗ ಐತೇ…

ಕೊರಳಾಗೆ ಇನಿದನಿ ಕೋಗಿಲೆ ಸರವೈತೆ ! ಹಾ :
ನಡೆಯಾಗೆ ತುಳುಕುವ ಹಂಸದಾ ಬಳುಕೈತೆ !
ಮುಖದಾಗೆ ತಾವರೆಯ ಒಳಪೇ ಚೆಲ್ಲೈತೆ !
ನನ್ರಾಣಿ ನಿಜರೂಪು ರಂಗನ್ನೇ ಹಣಿಸೈತೆ !
ನನ್ರಾಣಿ ನಿಜರೂಪು ರಂಗನ್ನೇ ಹಣಿಸೈತೆ ! ಆಹಾ!

ನೋಟದಾಗೆ ನಗೆಯಾ ಮೀಟಿ… ಮೋಜಿನಾಗೆ ಎಲ್ಲೆಯದಾಟಿ
ಮೋಡಿಯ ಮಾಡಿದೊಳ ಪರಸಂಗ ಐತೇ .. ಪರಸಂಗ ಐತೇ
ಮೊಹಾವ ತೋರಿದೊಳ ಪರಸಂಗ ಐತೇ.. ಪರಸಂಗ ಐತೇ…

ಅ ಹ ಹ ಹಹ್ಹ ! ಮ್ ಮ್ ಮ್ ಮ್ !
ಅ ಹ ಹ ಹಹ್ಹ ! ಮ್ ಮ್ ಮ್ ಮ್ !

Leave a Reply

Your email address will not be published. Required fields are marked *