ಯಾರೇ ಕೂಗಾಡಲಿ

ಗೀತ ರಚನೆ : ಚೀ।। ಉದಯಶಂಕರ್
ಹಾಡು: ಡಾ।। ರಾಜ್ ಕುಮಾರ್
ಸಂಗೀತ: ಜಿ. ಕೆ ವೆಂಕಟೇಶ್

ಯಾರೇ ಕೂಗಾಡಲಿ ಊರೇ ಹೋರಾಡಲಿ ನಿನ ನೆಮ್ಮದಿಗೆ ಭಂಗವಿಲ್ಲ ಎಮ್ಮೆ ನಿನಗೆ ಸಾಟಿ ಇಲ್ಲ

ಬಿಸಿಲು-ಮಳೆಗೆ ಬಿರುಗಾಳಿ-ಚಳಿಗೆ ನೀ ಅಳುಕದೆ ಮುಂದೆ ಸಾಗುವೆ
ಅರೆ ಹೊಯ್ ! ಅರೆ ಹೊಯ್ ! ಅರೆ ಹೊಯ್ ! ಅರೆ ಹೊಯ್ ! ಟುರ್ರಾ …..

ಯಾರೇ ಕೂಗಾಡಲಿ ಊರೇ ಹೋರಾಡಲಿ…

ಗುಣದಲ್ಲಿ ನೀ ಉಪಕಾರಿ ಮಾನವಗೆ ನೀ ಸಹಕಾರಿ !
ಗುಣದಲ್ಲಿ ನೀ ಉಪಕಾರಿ ಮಾನವಗೆ ನೀ ಸಹಕಾರಿ
ಕಸವನ್ನೇ ತಿಂದರು ಕೊನೆಗೆ ಹಾಲನ್ನೇ ನೀಡುವೆ ನಮಗೆ
ಹಾಲನ್ನು ಕುಡಿದಾ ಜನರು ವಿಷವನ್ನೇ ಕಕ್ಕುತಲಿಹರು !
ಹಾಲನ್ನು ಕುಡಿದಾ ಜನರು ವಿಷವನ್ನೇ ಕಕ್ಕುತಲಿಹರು
ಸದಾ ರೋಷ ಸದಾ ದ್ವೇಷ ಅದಕ್ಕೆ ಹೀಗಿದೆ ಈ ದೇಶ…

ಯಾರೇ ಕೂಗಾಡಲಿ ಊರೇ ಹೋರಾಡಲಿ ನಿನ ನೆಮ್ಮದಿಗೆ ಭಂಗವಿಲ್ಲ ಎಮ್ಮೆ ನಿನಗೆ ಸಾಟಿ ಇಲ್ಲ
ಬಿಸಿಲು-ಮಳೆಗೆ ಬಿರುಗಾಳಿ-ಚಳಿಗೆ ನೀ ಅಳುಕದೆ ಮುಂದೆ ಸಾಗುವೆ
ಅರೆ ಹೊಯ್ ! ಅರೆ ಹೊಯ್ ! ಅರೆ ಹೊಯ್ ! ಅರೆ ಹೊಯ್ ! ಟುರ್ರಾ …..

ಯಾರೇ ಕೂಗಾಡಲಿ ಊರೇ ಹೋರಾಡಲಿ…

ಪ್ರಾಣಿಗಳೇ ಗುಣದಲಿ ಮೇಲು ಮಾನವನದಕಿಂತ ಕೀಳು …
ಪ್ರಾಣಿಗಳೇ ಗುಣದಲಿ ಮೇಲು ಮಾನವನದಕಿಂತ ಕೀಳು …
ಉಪಕಾರ ಮಾಡಲಾರ ಬದುಕಿದರೆ ಸೈರಿಸಲಾರ
ಸತ್ಯಕ್ಕೆ ಗೌರವವಿಲ್ಲ! ವಂಚನೆಗೆ ಪೂಜ್ಯತೆಯೆಲ್ಲ !

ಇದೇ ನೀತಿ! ಇದೇ ರೀತಿ! ಇನ್ನೆಲ್ಲೀ ಗುರು-ಹಿರಿಯರ ಭೀತಿ..

ಯಾರೇ ಕೂಗಾಡಲಿ ಊರೇ ಹೋರಾಡಲಿ ನಿನ ನೆಮ್ಮದಿಗೆ ಭಂಗವಿಲ್ಲ ಎಮ್ಮೆ ನಿನಗೆ ಸಾಟಿ ಇಲ್ಲ
ಬಿಸಿಲು-ಮಳೆಗೆ ಬಿರುಗಾಳಿ-ಚಳಿಗೆ ನೀ ಅಳುಕದೆ ಮುಂದೆ ಸಾಗುವೆ
ಅರೆ ಹೊಯ್ ! ಅರೆ ಹೊಯ್ ! ಅರೆ ಹೊಯ್ ! ಅರೆ ಹೊಯ್ ! ಟುರ್ರಾ …..

ಯಾರೇ ಕೂಗಾಡಲಿ ಊರೇ ಹೋರಾಡಲಿ…

Leave a Reply

Your email address will not be published. Required fields are marked *