ಮಗನಾಗಿ ಬರೆಯುತ್ತಿದ್ದೇನೆ ಎಂದು ತಿಳಿದುಕೊಳ್ಳುವುದಕ್ಕಿಂತ ‘ಸಾಮಾನ್ಯವಾಗಿ ಈ ರೀತಿಯಾದ ಅನುಭವ ನಾವೆಲ್ಲರೂ ನೋಡಿರುತ್ತೇವೆ’ ಎಂದು ತಿಳಿದು ಬರೆಯುತ್ತೀದ್ದೇನೆ ಅದೇ ಅರ್ಥದಲ್ಲಿ ಓದಿದರೆ ನನ್ನ ಉದ್ದೇಶ ಸಾರ್ಥಕವೆಂದು ತಿಳಿಯುತ್ತೇನೆ. ಇಲ್ಲಿ ಹಿರಿಯರ ಸ್ವಾಭಿಮಾನ ಮತ್ತು ಆತ್ಮಗೌರವವನ್ನು ಒಮ್ಮೆ ನೋಡೋಣ!
ಅಪ್ಪ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಮುಖ್ಯ ಉಪಾಧ್ಯಾಯರಾಗಿದ್ದರು. ಮೂಲತಃ ಗ್ರಾಮ್ಯ ಕುಟುಂಬದಿಂದ ಬಂದಿದ್ದರಿಂದ ಕಷ್ಟಸಹೀಷ್ಣುತೆ, ಸರಳತೆ, ಹೆದರಿಕೆಯ ಮನೋಭಾವ ಸಹಜವಾಗಿತ್ತೆಂದು ನನ್ನ ನಂಬಿಕೆ. ಪರಾವಲಂಬನೆಯಲ್ಲಿ ಅರ್ಥವಿಲ್ಲ ಎಂದು ಗಾಢವಾಗಿ ನಂಬಿದ ವಕ್ತಿಯಲ್ಲಿ ನಾನು ನೋಡಿರುವುದು, ನೋಡುತ್ತಿರುವುದು ಒಬ್ಬಮಗನಾಗಿ, ಮೂರನೆಯವನಾಗಿ.
೧೯೯೭ (ಸಾವಿರದ ಒಂಬೈನೂರ ತೊಂಬತ್ತೇಳು) ನಿವೃತ್ತಿಯಾದಾಗಿನಿಂದ ಈವರೆವಿಗೂ ಅಪ್ಪ ತಾವು ಮಾಡುತಿದ್ದ ಕೆಲಸವನ್ನು (ಮಕ್ಕಳಿಗೆ ಪಾಠ ಹೇಳುವುದು) ಈಗ ಮಾಡಲು ಆಗುತ್ತಿಲ್ಲವಲ್ಲ (ಕೆಲಸ ಹೀನತೆ) ಎಂದು ಬೇಸರಗೊಳ್ಳುತ್ತಾರೆ.
ಸರ್ಕಾರ ಪಿಂಚಣಿ (pension) ಇನ್ನೂಕೂಡಾ ಕೊಡುತ್ತಿದೆ, ತಮ್ಮ ದುಡ್ಡಿನಲ್ಲೇ ಇನ್ನು ಸಹ ಮನೆಗೆ ಸಹಾಯ ಮಾಡುತ್ತಿದ್ದಾರೆ.
ಹಾಲು-ಮೊಸರು, ಪೇಪರ್, ಹಣ್ಣು, ಮಕ್ಕಳ ತಿಂಡಿಗಳು, ಅಡುಗೆ ಸಾಮಗ್ರಿಗಳು, ಅಡುಗೆ ಅನಿಲ (Coocking GAS), ತಮ್ಮ ಓಷಧಗಳು, ಅವರ ಓಡಾಟದ ಖರ್ಚು, ಮನೆಯ ಬಾಡಿಗೆ !! ಒಂದೇ ಎರಡೇ ? ನಾನು ಕಂಡಹಾಗೆ ತಾವು ಸರ್ಕಾರದ ಕೆಲಸದಲ್ಲಿದ್ದಾಗ ೩ ಕುಟುಂಬವನ್ನು ಯಾವ ಅಪೇಕ್ಷೆಯೂ ಇಲ್ಲದೆ ಸೇವೆ ಮಾಡಿದ್ದಾರೆ ! (ಮನುಷ್ಯ ಗುಣವನ್ನು ಮಾತ್ರ ಹೇಳುತ್ತಿದ್ದೇನೆ, ಅವರ ಹೊಗಳಿಕೆಯಲ್ಲ). ಇಲ್ಲಿ ಮೂರು ಕುಟುಂಬವನ್ನು ಬದುಕಿಸಿದ್ದಾರೆ ಎಂದರ್ಥವಲ್ಲ! ಸಹಾಯ ಮನೋಭಾವ, ನಿರಪೇಕ್ಷತೆ, ಆದರ್ಶ, ಸಮಾಜ ಸೇವೆ, ಜನರ ಮೇಲಿನ ಗೌರವ ಇವೆಲ್ಲವೂ ಆಗಿನ ಸಮಕಾಲೀನರಲ್ಲಿ ಸರ್ವೇಸಾಮಾನ್ಯವಾಗಿತ್ತು ಎಂದು ನನ್ನ ನಂಬಿಕೆ.
ಏಕೆ ಹೇಳುತ್ತಿದ್ದೇನೆ ಎಂದರೆ, ಅವರು ನನ್ನ ಜೊತೆ ಇರಲು ಶುರುಮಾಡಿ ೧೮ (ಹದಿನೆಂಟು) ವರ್ಷಗಳಾಗಿವೆ ಅವರಮನಸ್ಸಿನಲ್ಲಿ ಮಗನ ಮನೆಯಲ್ಲಿ ಜೀವಿಸುತ್ತಿದ್ದೇನೆ ಅವನಿಗೆ ಹೊರೆಯಾಗಬಾರದು ಎಂದು! ಬೇರೆ ಇರುತ್ತೇನೆಂದು ಹೊರಟರೆ ಮಗ ಬಿಡುವುದಿಲ್ಲ, ತಾವು ಇನ್ನೊಬ್ಬರ ಹಂಗಿನಲ್ಲಿ ಬದುಕಲು ಇಷ್ಟ ಪಡುವುದಿಲ್ಲ ಎಂಥ ಪರದಾಟ ಅಲ್ಲವೇ? ಅವರ ಮೂಲ ಸ್ವಬಾವ ಹೊರಗಿನಿಂದ ನೋಡಿವವರಿಗೆ ಅರ್ಥವಾಗುವುದಿಲ್ಲ. ಅವರ ಮೂಲ ಸ್ವಭಾವ-ಸಹಜತೆ ಬೇರೆಯವರಿಗೇಕೆ? 🙂 🙂
ಅವರು ಮಾಡುವ ಎಲ್ಲ ಕೆಲಸವು ಸರಿಎಂದಲ್ಲ ! ಆದರೆ ಮಾನುಷ್ಯ ತಾನು ನೋಡಿದ ಪ್ರಪಂಚ, ತನ್ನ ಅನುಭವವನ್ನು ಮಾತ್ರ ನೋಡಬಲ್ಲ. ತಮ್ಮ ನೋಟ, ತಮ್ಮ ಅನುಭವಕ್ಕೆ ಮಾತ್ರ ಹೋಲಿಕೆ ಮಾಡುತ್ತಿರುತ್ತಾರೆ. ಹಾಗಾಗಿ ತಮ್ಮ ಅನುಭವಕ್ಕೆ ಮೀರಿರುವುದನ್ನು ತಪ್ಪು ಅಥವಾ ನಿರ್ಲಕ್ಷ್ಯ ಮಾಡುತ್ತಾರೆ. ಹಾಗೆ ನೋಡಿದರೆ ಆಗಿನ ತಲೆಮಾರು, ಈಗಿನ ತಲೆಮಾರಿಗಿಂತ ಬಹಳ ಭಿನ್ನ ! ಎಲ್ಲರ ಅನುಭವನ್ನು ಗೌರವಿಸುವ ನಾವು, ಹಿರಿಯರ ಅನುಭವವನ್ನು ಕಡೆಗಣಿಸುವುದೇ? ನಾವು ಇನೂಬ್ಬರ ಸಂದರ್ಭವನ್ನು, ಸನ್ನಿವೇಶವನ್ನು ಅರ್ಥಮಾಡಿಕೊಳ್ಳದೆ ದೂರುವುದು ಎಲ್ಲಿಯ ನ್ಯಾಯ? (ಯಾರು ದೂರುತ್ತಾರೆ ಎನ್ನುತ್ತೀರಾ? 🙂 )
ಸಹಜವಾಗಿ ಮಕ್ಕಳು, ಮೊಮ್ಮಕ್ಕಳು ತಮ್ಮ ಮಾತು ಕೇಳುವುದಿಲ್ಲವಲ್ಲ ಎಂದು ಸಿಡಿ-ಮಿಡಿ ಗೊಳ್ಳುತ್ತಾ, ತಾವು ಕಂಡ ಪ್ರಚಂಚ ಬೇರೆಯವರಿಗೆ ಹೇಳಲಾಗದೆ, ಆದರ್ಶದ ಕೊರತೆಯಿರುವ ಜಗತ್ತನ್ನು ದಿನ-ದಿನ ನೋಡುತ್ತಾ, ಅನುಭವಿಸುತ್ತ ಜೀವನ ಕಳೆಯುತ್ತಿದ್ದಾರೆ. ತಮ್ಮ ಸ್ವಾತಂತ್ರವನ್ನು ಕಳೆದುಕೊಂಡಿದ್ದೇನೆ ಎಂದು ಅವರ ಮನಸ್ಸು ಪದೇ ಪದೇ ಪೀಡಿಸುತ್ತಿರುತ್ತದೆ. ಈಗಲೂ ಕೂಡ ಮಗನ ಮನೆಯಲ್ಲಿ ಬಾಡಿಗೆಗೆ ಇದ್ದಾರೆ ೮೦ ವರ್ಷದ ಹಿರಿಯ ಜೀವಿ ಎಂದರೆ ತಪ್ಪಾಗುವುದಿಲ್ಲ ಅಲ್ಲವೇ ?
ಇಂದು ಅವರು, ನಾಳೆ ನಾವು!
ಮಕ್ಕಳ ಹುಟ್ಟಿನಿಂದ, ತಾವು ಕಣ್ಮುಚ್ಚುವವರೆಗೂ ಮಕ್ಕಳ ಪಾಲನೆಯಲ್ಲೇ ತೊಡಗಿರುವ ಇಂಥವರನ್ನು, ಇವರ ಸಮಕಾಲೀನರನ್ನು ನೋಡಿದಾಗ ಮನಸ್ಸಿಗೆ ಇವರ ತ್ಯಾಗ, ಇವರ ಸೇವೆ ಮನ ಮುಟ್ಟುತ್ತದೆಯಲ್ಲವೇ? ಕಣ್ಣಂಚಿನಲ್ಲಿ ನೀರು ತುಂಬುತ್ತದೆ ಕೂಡ.
ನಾನು ಈ ವಿಚಾರವನ್ನು ನನ್ನ ಗೆಳೆಯರೊಂದಿಗೆ ಹಂಚಿಕೊಳ್ಳುತ್ತಿದ್ದೇನೆ !