ನಾವುಗಳು ಕೆಲಸ ಮಾಡದ್ದಿದ್ದಾಗ ಏಕೆ ನೆಪ ಹೇಳುತ್ತೇವೆ? ೧೦೦ಕ್ಕೆ ೯೦ ಸಲ ಸೋಮಾರಿತನದಿಂದ, ಇದು ಎಲ್ಲರಿಗೂ ತಿಳಿದ ವಿಷಯ, ಆದರೂ ನಮ್ಮದೇ ಸರಿ ನಮ್ಮದೇ ನಿಜ.
ಈ ದಿನಗಳಲ್ಲಿ IT ಬಿದ್ದಿದೆ, ಎಲ್ಲರಿಗೂ ಒಂದೇ ಚಿಂತೆ, “ಕೆಲಸ ಹೋದರೆ??”. ಹೋದರೆ ಹೋಗಲಿ, … ಇದೊಂದೇ ಜೀವನವಲ್ಲ, ಇದರಾಚೆಗೂ ಜೀವನವಿದೆ. ಸಾವಿರಾರು ಜನ IT ಇಲ್ಲದೆ ಬದುಕುತ್ತಿಲ್ಲವೇ?
ಸ್ವತಂತ್ರವಾಗಿ ಬದುಕಲು ಹಲವು ಮಾರ್ಗಗಳಿವೆ, ವಿಶಾಲವಾದ ಭೂಮಿ ನಮ್ಮನ್ನು ಸಾಕಿ ಸಲಹಲೆಂದೆ ತಳೆದಿದ್ದಾಳೆ.
ಪ್ರಗತಿ ಓದಿನಿಂದ ಮಾತ್ರವಲ್ಲ, ಸರಿಯಾದ ರೀತಿಯಲ್ಲಿ ಬುದ್ಧಿ ಬಳಕೆಯಾದರೆ ಮಾತ್ರ ವಿಕಾಸ. ನಮ್ಮನ್ನು ಬೆಳೆಸುತ್ತಿರುವ ಸಮಾಜವನ್ನೇ ನೋಡದ ನಾವು, ಕಷ್ಟ ಪಡದೇ ಕುಳಿತಲ್ಲೇ ಸಾಕಷ್ಟು ದುಡಿಯಬೇಕೆಂದು ಬಯಸುವ ನಾವು ಸೋಮಾರಿಗಲ್ಲವೆ ??
ಸೋಮಾರಿತನದ ನಷ್ಟ ಹೀಗಿರಬಹುದು ಅಲ್ಲವೇ?