ಸುಳ್ಳು ಹೇಳಿ

ಬೆಳಗ್ಗೆ ೭:೩೦ ರ ಬಸ್ಸಿಗೆ ಹೊರಡಬೇಕಿತ್ತು. ನನ್ನ ಸೋಮಾರಿತನದಿಂದ ಹೊರಡಲಾಗಲಿಲ್ಲ. ಮೀರಾಳ ತಂದೆ ಬಸ್ ಸ್ಟ್ಯಾಂಡ್ ಗೆ ಡ್ರಾಪ್ ಮಾಡಿದ ಕಾರಣ ಬೇಗ ಹೊರಟೆ. ನಾನೇ ಹೊರಟಿದ್ದರೆ ಇನ್ನೂ ಲೇಟ್ ಆಗುತಿದ್ದೆ. ಬಹಳ information ಸಿಗುತ್ತದೆ ಎಂದು ಎಲ್ಲ ಕನ್ನಡ ದಿನ ಪತ್ರಿಕೆಗಳನ್ನು ಕಡೆಗಣಿಸಿ ‘ಡೆಕ್ಕನ್ ಹೆರಾಲ್ಡ್’ ದಿನ ಪತ್ರಿಕೆಯನ್ನು ಕೊಂಡದ್ದಾಯಿತು. ವಾಯುವ್ಯ ಕರ್ನಾಟಕ ಸಾರಿಗೆ ಬಸ್ ಹಿಡಿದು ಮೈಸೂರಿನಿಂದ ಶಿವಮೊಗ್ಗ ಮಾರ್ಗವಾಗಿ ಅರಸೀಕೆರೆಗೆ ಹೋಗುವ ಬಸ್ ಬಳಿಬಂದೆ. ಈ ಬಸ್ ಅರಸೀಕೆರೆಗೆ ಹೋಗುತ್ತದಾ ಎಂದು ಪ್ರಶ್ನಿಸಿದಾಗ ಬಂದ ಉತ್ತರ ‘ಹೂ! Sir, ಬೇಗ ಹತ್ತಿ’ ಎಂದು. ಆಹಾ! Sir ಎಂದರಲ್ಲ ಎಂಬ ಗರ್ವ ಮನಸ್ಸಿನಲ್ಲಿ. ಮೀರಾಳ ಮನೆಯಲ್ಲಿ ತಿಂಡಿ ತಯಾರಿದ್ದರೂ ನಾನು ತಿನ್ನದೇ ಸುಮ್ಮನೆ ಹಾಗೆ ಬಂದಿದ್ದೆ, ಹೊಟ್ಟೆ ಹಸಿವು ಶುರುವಾಗಿತ್ತು ಆದರೆ ನಾನು ಗಮನ ಕೊಡಲಿಲ್ಲ.

‘Sir’ ಎಂದು ಅತಿ-ವಿನಯ ತೋರಿದ್ದ ಕಂಡಕ್ಟರ್ ಬಸ್ ಒಳಗೆ ಬಂದ ತಕ್ಷಣ (ಬಸ್ ಹೊರಟ ತಕ್ಷಣ) ಗರಂ. “ಟಿಕೆಟ್ ತಗಳ್ರೀ……” ಎಂದು ಕಡುವಾಗಿ ಕೇಳಿದ. ಸರಿಯಪ್ಪ ೧ ಟಿಕೆಟ್ ಅರಸೀಕೆರೆಗೆ ಎಂದೆ. ೮೪/- ರು, ಬರೀ ಚಿಲ್ಲರೆ ಕೊಡಬೇಕು ಎಂದ. ನನ್ನ ಕಡೆ ೪/- ರು ಚಿಲ್ಲರೆ ಇಲ್ಲ ಆದರೆ ನೀವು ೧/- ರು ಕೊಡಿ ನಾನು ೫/- ರು ಕೊಡುತ್ತೇನೆ ಎಂದೆ. ೧೦೫/- ರು ಕೊಟ್ಟದ್ದಕ್ಕೆ ೨೦/- ರು ವಾಪಸ್ ಬಂತು, ಇನ್ನು ೧/- ರು ಕಂಡಕ್ಟರ್ ಗೆ. ಹೀಗೆ, ಒಬ್ಬೊಬ್ಬರ ಕಡೆ ೧/- ರು ಪಡೆದರೆ ೧೦೦ ಪ್ರಯಾಣಿಕರಿಂದ ೧೦೦/- ರು ದಿನಕ್ಕೆ. ಹಾಗೆ ೩೦೦೦/- ರು ತಿಂಗಳಿಗೆ.

ಡೆಕ್ಕನ್ ಹೆರಾಲ್ಡ್ ನಲ್ಲಿ ‘ಹಂದಿ ಜ್ವರ’ ದ ಬಗ್ಗೆ ಓದಿದೆ, ಸ್ವಲ್ಪ ಭಯವಾಯಿತು, ಆದರೂ ನಮ್ಮಲ್ಲಿ ಸಾಕಷ್ಟು Medicine ಇರುವುದರಿಂದ ಪರವಾಗಿಲ್ಲ ನಮ್ಮ ಸರ್ಕಾರ ಎಲ್ಲರನ್ನು ಕಾಪಾಡುತ್ತದೆಎನಿಸಿತು. ಹಾಗೆ ಇದರ ಜೊತೆ ‘ಸಾರ್ಸ್’ (SAARS) ಬಗ್ಗೆ ಬರೆದಿದ್ದಿದ್ದರು. SAARS ಹರಡುತ್ತಿದ್ದಾಗ ನಾನು ಮಲೇಶಿಯಾ ದಲ್ಲಿ ಕೆಲಸ ಮಾಡುತ್ತಿದೆ. ನಮ್ಮನ್ನು ರೈಲ್ವೆ ಸ್ಟೇಷನ್ ನಲ್ಲಿ quarantine ಮಾಡಿದ್ದು ನೆನಪಿಗೆ ಬಂತು. ೩ ಜನ ಕೂರುವ ಸೀಟಿನಲ್ಲಿ ನಾನು first seat ನಲ್ಲಿ (ಕಿಟಕಿಯಲ್ಲದ seat) ಕುಳಿತ್ತಿದ್ದೆ, ಮದ್ಯದ ಸೀಟ್ ಖಾಲಿಇತ್ತು. ನನ್ನ ಬಯಕೆ ಯಾರಾದರು ‘ಸುಂದರ’ ವ್ಯಕ್ತಿ ಬಂದು ಕೂತರೆ ಚೆಂದ ಎಂದು. ನಿಜವಾಗಿಯೂ ಸುಂದರವಾಗಿ ಸೀರೆಯುಟ್ಟ, ಯಾವುದೂ ಮದುವೆಗೆ ಹೊರಟ ವ್ಯಕ್ತಿ ಬಂದು ಕೂತಾಗ ನನ್ನ ಇಂಗ್ಲಿಷ್ ಪೇಪರ್ ಓದುವ ಗತ್ತು ಮಂಚೂಣಿಯಲಿತ್ತು. ಒಂದು ವೇಳೆ ಈ ವ್ಯಕ್ತಿ ನನ್ನ Blog ಓದಿದರೆ…………? ನನ್ನನ್ನು ಏನೆಂದು ತಿಳಿದಾರು ??

ಚೆನ್ನರಾಯಪಟ್ಟಣದಲ್ಲಿ ತಿಂಡಿಗೆಂದು ಬಸ್ ನಿಲ್ಲಿಸಿದಾಗ ನಾನು ಎರಡು ಮ್ಯಾಂಗೋ ಡ್ರಿಂಕ್ ಕೊಂಡುಕೊಂಡೆ. ನನ್ನ ಮುಂದಿನ seat ಖಾಲಿಯಾಯಿತು. ಇಬ್ಬರು ಮಕ್ಕಳನ್ನು ಕರೆದುಕೊಂಡು, ಇನ್ನೊಬ್ಬ ಹಿರಿಯ ಹೆಂಗಸಿನೊಂದಿಗೆ ಒಬ್ಬ ಮಹಿಳೆ ಚೆನ್ನರಾಯಪಟ್ಟಣದಿಂದ ಹತ್ತಿದರು(ಒಟ್ಟು ೪ ಜನ). ಸುಮಾರು ೭ ವರ್ಷದ ಹುಡುಗ ೩.೫ ವರ್ಷದ ಪುಟ್ಟ ಹುಡುಗಿ. ಬಸ್ ಹತ್ತಿದ ಕೂಡಲೇ ೭ ವರ್ಷದ ಹುಡುಗ ಬಸ್ ಡ್ರೈವರ್ ಹತ್ತಿರದ ಸೀಟಿಗೆ ಹಾರಿದ. ಇದನ್ನು ಕಂಡ ಅಮ್ಮ ಅವನನ್ನು ಕರೆದರು, ತಡೆಯಲೆತ್ನಿಸಿದರು. ಅವನು ಜಗ್ಗಲಿಲ್ಲ, ಅಲ್ಲೇ ಕುಳಿತುಬಿಟ್ಟ . ಬಸ್ ಇನ್ನು ಹೊರಟಿರಲಿಲ್ಲ ನಿಂತ್ತಿತ್ತು, ಅಮ್ಮನಿಗೆ ಮಗ ಅಲ್ಲಿ ಡ್ರೈವರ್ ಸೀಟಿನ ಹತ್ತಿರ ಇರುವುದು ಸಮಾಧಾನ ತರುತ್ತಿರಲಿಲ್ಲ. ಅವಳ ಜೊತೆ ಬಂದಿದ್ದ ಹಿರಿಯ ಹೆಂಗಸನ್ನು (ಅವರ ಅತ್ತೆ ಇರಬಹುದು) ಮಗನನ್ನು ಕರೆಯಲು ಕಳುಹಿಸಿದಳು. ಮಗ ಜಗ್ಗಲೇ ಇಲ್ಲ! ಅವರು ಸುಮ್ಮನೆ ಬಂದರು. ಕಡೆಗೆ ಅಮ್ಮನೇ ಎದ್ದು ಮಗನನ್ನು ಕರೆಯಲು ಹೊರಟರು. ಅವರು ಎದ್ದುನಿಂತ ರೀತಿ ನೋಡಿ, ಆ ಹುಡುಗನಿಗೆ ಪೆಟ್ಟು ಕೊಟ್ಟು ಕರೆತರುತ್ತಾರೆ ಎನಿಸಿತು. ಆ ಹುಡುಗ ಮಣಿಯಲಿಲ್ಲ, ಒಳ್ಳೆಯ ಮಾತಿಗೆ ಜಗ್ಗದ ಅವನನ್ನು ಹೇಗೆ ತಾಯಿ Negotiate ಮಾಡುತ್ತಾಳೆ ಎಂದು ನಾನು ಕುತೂಹಲದಿಂದ ನೋಡುತ್ತಿದೆ.

ಮುಂದೆ ನಡೆದದ್ದನ್ನು ನೋಡಿ ಶಾಕ್ ಆಯಿತು. ಆ ಹುಡುಗನ ಅಮ್ಮ ಸುಮ್ಮನೆ ಪರ್ಸ್ ಗೆ ಕೈ ಹಾಕಿ ೧೦ /- ರು ತೆಗೆದು ಈ ಹುಡುಗನ ಕೈಯಲ್ಲಿಟ್ಟಳು. ಇದೇನು ನಡೆಯುತ್ತಿದೆ ಎನ್ನುವಷ್ಟರಲ್ಲಿ, ಹುಡುಗ ಲಂಚ ಪಡೆದು ಅಮ್ಮನು ಕರೆದಾ ಸೀಟಿಗೆ ಹಾರಿ ಬಂದ. ಅಬ್ಬಾ! ಎಂಥ ಕಲಿಕೆ. ಇಷ್ಟು ಚಿಕ್ಕ ವಯಸ್ಸಿನಲ್ಲೇ ದುಡ್ಡು ಪಡೆದು ಕೆಲಸ ಮಾಡುತ್ತಿರುವ ಈ ಹುಡುಗ ಮುಂದೆನಾಗುವನು. ಈಗಾಗಲೇ ಈ ಹುಡುಗನ ಮೇಲೆ ಸಾಕಷ್ಟು ಪರಿಣಾಮವಾಗಿದೆ ಇದರ ಜೊತೆಗೆ ಪಬ್ಲಿಕ್ ನಲ್ಲಿ ಲಂಚ. ೧೦ /- ರು ಲಂಚ ಪಡೆದ ಅಣ್ಣನನ್ನು ನೋಡಿದ ತಂಗಿ ನನಗೂ ಬೇಕೆಂದು ಅತ್ತಳು. ಅವಳಿಗೂ ೧೦/- ಬಂತು. ಆಗ ನಾಲ್ಕೂ ಮಂದಿಗೆ ನೆಮ್ಮದಿ.

ಮುಂದಿನ ಶಾಕ್ ಇನ್ನೂ ಜೋರಾಗಿತ್ತು. ಕಂಡಕ್ಟರ್ ಬಂದ, ಬಂದು ಎಲ್ಲಿಗೆ ಅಂದ. ೨ ಫುಲ್, ೨ ಹಾಫ್ ತರೀಕೆರೆಗೆ ಎಂದಳು ಅಮ್ಮ. ಈ ಹುಡುಗನಿಗೆ ಎಷ್ಟು ವರ್ಷ ಎಂದ ಕಂಡಕ್ಟರ್,೪ ವರ್ಷ ಎಂದಳು ಅಮ್ಮ. ಈ ಹುಡುಗನನ್ನು ಎದ್ದು ನಿಲ್ಲಿಸಿ ಇವನಿಗೆ ಖಂಡಿತಾ ೪ ವರ್ಷ ಅಲ್ಲ ಎಂದ ಕಂಡಕ್ಟರ್. ಆಗ ಅಮ್ಮ ೫ ವರ್ಷ ಎಂದಳು. ಕಂಡಕ್ಟರ್, ನನಗೆ ಗೊತ್ತು ಈ ಹುಡುಗನಿಗೆ ೬ ವರ್ಷದ ಮೇಲೆ ಆಗಿದೆ ಆದರೂ ನಾನು ಸುಮ್ಮನೆ ಬಿಡುತ್ತಿದ್ದೇನೆ checking ಗೆ ಬಂದರೆ ೪.೫ ವರ್ಷ ಎಂದು ಸುಳ್ಳು ಹೇಳಿರಿ ಎಂದು ೪ ಜನಕ್ಕೆ ೩ ಜನರ ಟಿಕೆಟ್ ಕೊಟ್ಟು ಚಿಲ್ಲರೆ ಆಮೇಲೆ ಪಡೆಯಿರಿ ಎಂದು ಹೋರಟು ಬಿಟ್ಟ.

ಇದೆಲ್ಲ ನಡೆದದ್ದು ಮೇ ೧೦ ೨೦೦೯.

ಮಗನಿಗೆ ಲಂಚ ಕೊಟ್ಟು, ಸುಳ್ಳು ಆಡಿದ ತಾಯಿಗೆ ಸರ್ಕಾರಿ ಕಂಡಕ್ಟರನ ಬೆಂಬಲ ‘ಸುಳ್ಳು ಹೇಳಿ’ ಎಂದು……. ಅಬ್ಬಬ್ಬ!!!!

Leave a Reply

Your email address will not be published. Required fields are marked *