ಮಕ್ಕಳು ದೊಡ್ಡವರನ್ನು ನೋಡಿ ಕಲಿಯುತ್ತವೆ

ಇದನ್ನು ನೋಡಿದರೆ ತುಂಬಾ ದುಃಖವಾಗುತ್ತದೆ. ನಾನು ಎಷ್ಟೋ ಸಲ ಈ ರೀತಿಯಾದ ಪರಿಸ್ಥಿತಿಯನ್ನು ಬಹಳ ಹತ್ತಿರದಿಂದ ನೋಡಿದ್ದೇನೆ.

ಹೇಳಲಾಗದೆ ನೋಡಲಾಗದೆ ಅಸಹಾಯಕನಾಗಿ ವರ್ತಿಸಿದ್ದೇನೆ. ಒಬ್ಬ ತಾಯಿ ತನ್ನ ೮(8) ವರ್ಷ ಮತ್ತು ೪(4) ವರ್ಷದ ಮಕ್ಕಳನ್ನು ಇಲ್ಲಿ ಕೆಳಗೆ ಬಳಸಿದ ಶಬ್ದಗಳನ್ನು ಉಪಯೋಗಿಸಿ ಬಯ್ಯುವುದನ್ನು ನೋಡಿದ್ದೇನೆ.

  1. ನಾನು ಸತ್ತರೆ ಸ್ಮಶಾನದಲ್ಲಿ ಬಂದು ಬೆಂಕಿ ಹಚ್ಚಿ ಸುಡು ನನ್ನನ್ನು
  2. ನಾನು ಸತ್ತರೆ ನನ್ನ ತಿಥಿ ಮಾಡಬೇಡ
  3. ನಾನು ಸತ್ತರೆ ನೆಮಗೆಲ್ಲಾ ಸಂತೋಷ, ಸ್ವಲ್ಪ ಎಳ್ಳು ನೀರು ಬಿಟ್ಟುಬಿಡಿ
  4. ಬೋಳಿಮಗನೆ ನಿನ್ನ ಸಾಯಿಸಿ ಬಿಡುತ್ತೇನೆ
  5. ಬೋಳಿಮಗನೆ ನಾನು ಸತ್ತರೆ ನನ್ನ ಹೆಣ ನೋಡಲು ಬರಬೇಡ
  6. ಯಾವ ಬೋಳಿಮಗ ಹೇಳಿದ್ದು ನಿನಗೆ
  7. ನಾಳೆಯಿಂದ ನಿನ್ನ ತಿಥಿ ಮಾಡುತ್ತೇನೆ

ಹೀಗೆ ಹಲವಾರು ಕೆಟ್ಟ ಕೆಟ್ಟ ಮಾತುಗಳಿಂದ ನಿಂದನೆ ಮಾಡುವುದನ್ನು ಏನೂ ಮಾಡಲಾಗದೆ ನೋಡಿದ್ದೇನೆ.
ಮಕ್ಕಳಿಗೆ ಬೋಳಿಮಗ, ಸೂಳೆಮಗ, ತಿಥಿ, ಸ್ಮಶಾನ, ಸಾವು ಎಂದರೆ ಹೇಗೆ ತಿಳಿವುದು? ಇಷ್ಟು ಚಿಕ್ಕ ವಯಸ್ಸಿನಲ್ಲೇ ಈ ರೀತಿಯಾದ ಮಾತುಗಳನ್ನು ಕಲಿಸುವ ತಾಯಿ-ತಂದೆಯರು ಮುಂದೆ ಎನನ್ನು ಬಯಸುತ್ತಾರೆ. ಮಕ್ಕಳು ಸುಸಂಸ್ಕೃತವಾದ ನಡತೆ ಹೇಗೆ ಪಡೆಯುವರು?.. ಸಾಧ್ಯವೇಇಲ್ಲ

ತಾಯಿ .. ಮಗುವನ್ನು ಹೀಗೆ ಬಯ್ಯುವುದನ್ನು ಖಂಡಿಸಲು ಬಂದ ೭೦(70) ವರ್ಷದ ಮುದುಕಿ (ಮಕ್ಕಳ ಅಜ್ಜಿ) ಯನ್ನು ‘ ನೀನು ನಿನ್ನ ಕೆಲಸ ನೋಡಿಕೋ ನೀನು ಮಗುವನ್ನು ಬೆಳೆಸಿದ್ದಾಗಿದೆ.. ನಿನ್ನ ಕಾಲ ಮುಗಿಯಿತು‘ ಈಗ ನೀನು ‘ *ಕ – *ಯಿ ಮುಚ್ಚಿಕೊಂಡು ಇರುವ ಕಾಲ ಬಂದಿದೆ ‘ ಯೆಂದು ಹೀನಾಯವಾಗಿ ಬೈದ ಪ್ರಸಂಗ ನನ್ನ ಕಣ್ಣ ಕಟ್ಟಿ ನಿಂತಿದೆ !,.. ಇದನ್ನೆಲ್ಲಾ ಕೇಳಿಸಿಕೊಂಡ ಮಕ್ಕಳು ದೇವರೇ ಗತಿ.

ಎಷ್ಟು ಅಸಹ್ಯವಾದ ವಿಚಾರವಲ್ಲವೇ?

ಸುಮ್ಮನಿರಲಾಗದ ನಾನು ಕೆಟ್ಟ ಭಾಷೆ ಬಳಸಿ ಬೈದ ತಾಯಿಯನ್ನು ‘ಮಕ್ಕಳ ಮುಂದೆ ಹೀಗೆಲ್ಲ ಮಾತಾಡುವುದು ಸರೆಯೇ ಎಂದು ಕೇಳಿದಾಗ ‘ .. ಹೌದು ರೀ ಸರಿನೇ ..
ನೀವು ಏನಾದರೂ ತಿಳಿದುಕೊಳ್ಳಿರಿ .. ನಾನು ನನ್ನ ಕೋಪ ಮತ್ತು ಅಸಮಾಧಾನವನ್ನು ಇದೇ ರೀತಿ ತೀರಿಸಿಕೊಳ್ಳುವುದು.. ಮಕ್ಕಳಿಗೇನು ಅರ್ಥವಾಗುವುದಿಲ್ಲ ಎಂದುಬಿಟ್ಟಳು… ‘ಆ ಯಮ್ಮ .. ಅವಳಿಗೆ ಹೇಳಿ ನನಗೆ ಮಾತ್ರ ಹೇಳಲು ಬಂದುಬಿಟ್ರಲಾ…‘ ನನ್ನ ಮಕ್ಕಳನ್ನು ನಾನು ಹೇಗಾದರೂ ಬಯ್ಯುತ್ತೇನೆ ಹೇಗಾದರೂ ಬೆಳೆಸುತ್ತೇನೆ.. ಇವಳುಯಾರು ರೀ ಹೇಳಕ್ಕೆ?.. ಎಂದಳು.
ಆ ಮುದುಕಿ ಈ ಮಕ್ಕಳ ಅಜ್ಜಿ .. ಅವರು ಈ ಮಕ್ಕಳು ಮಾಡಿದ ತಪ್ಪನ್ನು ಮುಚ್ಚಲು ಬಂದಿಲ್ಲ .. ನೀವು ಹೀಗೆ ಮಕ್ಕಳ ಮುಂದೆ ಕೆಟ್ಟ ಮಾತು ಆಡಿದ್ದನ್ನು ಕೇಳಲಾಗದೆ ತಮ್ಮ ಅಸಮಾದಾನವನ್ನು ವ್ಯಕ್ತ ಪಡಿಸುತ್ತಾ ಮಕ್ಕಳನ್ನು ಈ ಸನ್ನಿವೇಶದಿಂದ ಹೊರಗೆ ತೆಗೆಯಲು ನಿಮ್ಮ ಜೊತೆ ಕಟುವಾಗಿ ಮಾತಾಡಿದ್ದಾರೆ ಎಂದೆ. …

ಹೌದು ರೀ ‘ಈ ಯಮ್ಮ ಮದರಿಂಡಿಯಾ (mother India) ಕಣ್ರೀ ಮದರಿಂಡಿಯಾ (mother India), ಅವ್ರು ಯಾವತ್ತೂ ತಪ್ಪೇ ಮಾಡಲ್ಲಕಣ್ರೀ… ತಪ್ಪೇ ಮಾಡಲ್ಲ ‘  ನಿಮ್ಮ ಕೆಲಸ ನೀವು ಮಾಡಿಕೊಳ್ಳಿರಿ ‘ಈ ಮನೆಯಲ್ಲಿ ನಾನು ಒಂಟಿ ಬೇವರ್ಸಿ ‘ ಎಂದು ನನ್ನನ್ನು ಬೈದುಬಿಟ್ಟಳು..

ಆ ಮಕ್ಕಳನ್ನು ನೋಡಿ ಮತ್ತೆ ಮರುಕವುಂಟಾಯಿತು .. ನಾನು ಇಲ್ಲಿ ನೋಡಿದ ಸಂಗತಿ ಇಷ್ಟೇ

  • ಮಕ್ಕಳು ಸಹಜವಾಗಿ ಕೀಟಲೆ / ಚೇಷ್ಟೆ ಮಾಡುತ್ತಾರೆ, ಅವರನ್ನು ಪ್ರೀತಿಯಿಂದ ಮಾತ್ರ ಹೇಳಬೇಕು / ಮಾತಾಡಿಸಬೇಕು
  • ತನ್ನ ದಿನ ನಿತ್ಯದ ಬದುಕಿನಿಂದ ಸೋತ ಹೆಂಗಸು ತನ್ನ ಅಸಮಾಧಾನವನ್ನು ತನ್ನ ಮಾತುಗಳು ಮಕ್ಕಳ ಮನಸಿನ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂದು ತಿಳಿಯದೇ ಬಾಯಿಗೆ ಬಂದದ್ದನ್ನು ಬಯ್ಯುತ್ತಿದ್ದಾಳೆ
  • ತಾಯಿಯು ಕೋಪವನ್ನು ತಾಳಲಾರದೆ ಮಗನ ತಲೆಯನ್ನು ಹಿಡಿದು ಗೋಡೆಗೆ ಅಪ್ಪ್ಳಿಸಲು, ಮಗನು ಜೋರಾಗಿ ಕಿರುಚಿಕೊಳ್ಳಲು, ಮುದುಕಿಯು ಮೊಮ್ಮಗನನ್ನು ನೋಡಲಾರದೆ, ಮತ್ತು ಸೊಸೆಯ ನಿಂದನೆಯನ್ನು ಕೇಳಲಾರದೆ, ಮಗುವನ್ನು ಬಿಡಿಸಿಕೊಳ್ಳಲು ಹೊರಗೆ ಬಂದಿದ್ದಾರೆ
  • 70 ವರ್ಷದ ಮುದುಕಿ ಮಕ್ಕಳು ಈ ವಯಸ್ಸಿನಲ್ಲಿ ಈ ರೀತಿಯಾದ ಮಾತುಗಳನ್ನು ಕೇಳಿಸಿಕೊಂಡರೆ ಮುಂದೆ ಹೇಗೆ ಎಂದು ತಿಳಿದು ಕಳವಳದಿಂದ ತನ್ನ ಸೊಸೆಯನ್ನು ಬೈದಿದ್ದಾರೆ
  • ಸೊಸೆಯು ತನ್ನ ಮಕ್ಕಳು ಮಾಡಿದ ‘ಅಪರಾಧ’ ವನ್ನು ಈ ಮುದುಕಿ ಸಮರ್ಥಿಸಿ ಕೊಳ್ಳುತ್ತಿದ್ದಾಳೆ ಎಂದು ತಿಳಿದು, ಮುದುಕಿಯು ಜರಿಯುತ್ತಾ ಅಸಮಾಧಾನಗೊಂಡಿದ್ದಾಳೆ

ಇವೆಲ್ಲರ ನುಡುವೆ ಸಣ್ಣ ಮಕ್ಕಳು ಬಲಿಯಾಗುತ್ತಿದ್ದಾರೆ

ಏನೋ ದೊಡ್ಡದಾಗಿ ಬುದ್ದಿವಾದ ಹೇಳಲು ಹೋದನಾನು ಮೂರ್ಖನಾಗಿ ಹೊರ ಬಂದೆ

ವಿಷವವೆನೆಂದರೆ .. ಮಕ್ಕಳ ಹೆತ್ತ ತಾಯಿ ಅವಳ ಮಕ್ಕಳೊಡನೆ ಏನಾದರೂ ಮಾಡಬಹುದು, ಶಿಕ್ಷೆಮಾಡಲು ತನಗೆಮಾತ್ರ ಮೊದಲ ಹಕ್ಕು ಇರುವುದರಿಂದ ತಾನು ಏನಾದರೂ ಮಾಡಬಹುದು ಮಕ್ಕಳಿಗೆ ಎಂದು ತಿಳಿದಿರುವ ತಾಯಂದಿರುಗಳಿಗೆ ನಾಗು ಹೇಳುವುದೆಂದರೆ

  • ಮಕ್ಕಳು ದೊಡ್ಡವರಂತೆ ಯೋಚಿಸಲಾರರು
  • ಅನ್ಯಾಯವಾಗುತ್ತಿದಾಗ ಯಾರುಬೇಕಾದರೂ ಧ್ವನಿಮಾಡಬಹುದು, ನಾನು ಹೆತ್ತ ಮಕ್ಕಳಿಗೆ ತಾನು ಏನಾದರೂ ಮಾಡಬಹುದು ಬೇರೆಯವರಿಗೆ ಹಕ್ಕಿಲ್ಲಾ ಎಂದರೆ ಕಾನೂನು ಕೂಡ ಒಪ್ಪುವುದಿಲ್ಲ
  • ನಮ್ಮ ಕೋಪ ಮಕ್ಕಳ ಮೇಲೆ ಎಂದೊ ತೋರಿಸಬಾರದು, ಮಕ್ಕಳಿಗೆ ನೀವು ಯೇಕೆ ಕೊಪಮಾಡಿಕೊಂಡಿದ್ದೀರಿ   ಎಂದೆ ಗೊತ್ತಾಗಿರುವುದಿಲ್ಲ

Leave a Reply

Your email address will not be published. Required fields are marked *