ನಾನೇಕೆ ಬರೆಯಬೇಕು?

ಬರಹ ಸಾಹಿತ್ಯದ ಕಣ್ಣು. ಸಾಹಿತ್ಯ ಪ್ರಪಂಚದಾದ್ಯಂತ ಹರಡಲು ಬರಹವೇ ಕಾರಣ. ಭಾಷೆಯ ಉಗಮದ(ಹುಟ್ಟಿನ) ಜೊತೆ-ಜೊತೆಗೆ ಬಂದಿರುವುದು ಬರಹ. ನಾವು ತಾಳೆಗರಿಗಳ ಮೇಲಿನ ಬರಹಗಳನ್ನು ನೋಡಿದಾಗ ನಮ್ಮ ಜ್ಞಾನ ಸಂಗ್ರಹದ ಬಗ್ಗೆ ನಮಗೆ ಬರಹಗಳ ಪ್ರಾಮುಖ್ಯತೆ ತಿಳಿಯುತ್ತದೆ ಹಾಗು ಹೆಮ್ಮೆ ಎನಿಸುತ್ತದೆ.

ಬರೆಯುವುದರಿಂದ ಹಲವಾರು ರೀತಿಯ ಬದಲಾವಣೆಗಳು ವೈಯಕ್ತಿಕವಾಗಿ ಹಾಗು ಸಾಮಾಜಿಕವಾಗಿ ನಡೆದಿರುವುದಕ್ಕೆ ಇತಿಹಾಸವೇ ಸಾಕ್ಷಿ. ಅದರಲ್ಲೂ ಜಗತ್ತಿಗೆ ಭಾರತದ ಬರಹಗಳ ಕೊಡುಗೆ ಅಪಾರ(ಬಹಳ). ವೇದ, ವಚನ, ಗದ್ಯ, ಪದ್ಯ, ನಾಟಕ, ಕಾದಂಬರಿ, ಮಹಾಕಾವ್ಯ ಹೀಗೆ ಹತ್ತು ಹಲವು.

ಬಹುಷಃ ಗಣಪತಿ ಮಹಾಭಾರತವನ್ನು ಬರೆಯದಿದ್ದರೆ ನಮಗೆ ಮಹಾಭಾರತ ದೊರಕುತ್ತಿತ್ತೋ ಇಲ್ಲವೊ…!

ಬರವಣಿಗೆಇಂದ ನಮ್ಮ ಆತ್ಮಾವಲೋಕನ ನಡೆಯುತ್ತದೆಂದು ನನ್ನ ನಂಬಿಕೆ. ನಮ್ಮ ವಿಚಾರಗಳನ್ನು ಬೇರೆಯವರಿಗೆ ತಿಳಿಸುವುದು, ಅದರ ವಿಮರ್ಶೆಇಂದ ಪರಿಪೂರ್ಣತೆ ಹೊಂದುವುದು ಇವೆಲ್ಲವು ಬರಹದಿಂದ ಮಾತ್ರ ಸಾಧ್ಯ. ಬರೆಯುವುದರಿಂದ ನಮ್ಮ ಅನುಭವ ಹಲವರಿಗೆ ತಿಳಿಸುತ್ತೇವೆ, ಹಾಗೆ ಇತರರ ಅನುಭವದಿಂದ ನಾವು ಅನೇಕ ರೀತಿಯಲ್ಲಿ ಜಾಗ್ರತಗೊಳ್ಳುತ್ತೇವೆ. ಯಾವುದೇ ವ್ಯಕ್ತಿಯ ಅನುಭವ ಇನ್ನೊಬ್ಬರಿಗೆ ಮಾರ್ಗದರ್ಶನವೇ ಸರಿ. ಬರಹಗಾರ ತನ್ನ ಕಾಲ, ಪರಿಸ್ಥಿತಿ, ಮನೋವಿಚಾರ, ಮನಸ್ಥಿತಿ, ಅಂದಿನ ಸಂದರ್ಭ, ವಿಶೇಷತೆ, ಕೊರತೆ ಇವೆಲ್ಲವನ್ನೂ ಸಂಗ್ರಹಿಸುತ್ತಾನೆ.

ಆದ್ದರಿಂದ ಗೆಳೆಯ/ಗೆಳತಿಯರೆ ಬನ್ನಿ ಹೊಸ ಹೊಸ ವಿಚಾರಗಳಿಂದ, ಬರಹಗಳಿಂದ ನಮ್ಮಲಿ, ಸಮಾಜದಲ್ಲಿ ಮತ್ತು ದೇಶದಲ್ಲಿ ಬದಲಾವಣೆ ಕಾಣೋಣ!  ತಿಳಿದವರು ಹೇಳಿದಂತೆ “ಬರಹವೇ ಮಾನವನ ಅತ್ಯಂತ ಹತ್ತಿರದ ಗೆಳೆಯ”.

Leave a Reply

Your email address will not be published. Required fields are marked *