ನಮ್ಮ ಭವಿಷ್ಯ ನಮ್ಮ ಕೈಯಲ್ಲಿ ಮಾತ್ರ

ನಮ್ಮಲ್ಲಿ ೧೫ದ ನೇ ಚುನಾವಣೆ ಮುಗಿದಿದೆ. ಕೇಂದ್ರದಲ್ಲಿ ಕಾಂಗ್ರೆಸ್ ಸರಕಾರ ಕಟ್ಟುತ್ತದೆ ಎಂದು ಖಾತ್ರಿಯಾಗಿದೆ. ಸ್ವಲ್ಪ ದಿನಗಳ ಹಿಂದೆ ನಾನು ಪೇಪರ್ ನಲ್ಲಿ ಓದಿದೆ. ಅರಸೀಕೆರೆ ತಾಲ್ಲುಕಿನಲ್ಲಿರುವ ಒಂದು ಗುರುಗಳ ಮಠದಲ್ಲಿ ನಮ್ಮ ದೇಶದ ಭವಿಷ್ಯವನ್ನು ನುಡಿದರಂತೆ. ಅವರು ಹೇಳಿದಂತೆ ಎಲ್ಲವೂ ನಿಜವಾಗುತ್ತದೆಂದು . ಶ್ರೀಗಳು ತಾಳೆ ಬರಹಗಳನ್ನು ಓದಿ ಭವಿಷ್ಯ ಹೇಳುತ್ತಾರಂತೆ. ನಮ್ಮ ಜನಗಳನ್ನು ಎಷ್ಟು ಸುಲಭವಾಗಿ ಮೋಸ ಮಾಡುತ್ತಾರೆ. ಜನಗಳಿಗೆ ಏಕೆ ಯೋಚಿಸಲಾಗುತ್ತಿಲ್ಲ? ಎಲ್ಲರೂ ಹೇಳಿದಂತೆ ಪ್ರಪಂಚ ನಡೆಯುತಿದ್ದರೆ ಕಷ್ಟ-ಅಶಾಂತಿಗಳನ್ನೂ ಯಾವಾಗಲೋ ನೀಗಿರಬಹುದಿತ್ತು. ಯಾವ ಯೋಗಿಯಿಂದಲೂ , ಗುರುಗಳಿಂದಲೂ, ಸಿದ್ಧರಿಂದಲೂ ರಾಜಕೀಯ ವ್ಯವಸ್ಥೆಯನ್ನು ತಿಳಿಯಲಾಗುವುದಿಲ್ಲ. ೧೦೦ ವರ್ಷಗಳ ನಂತರದ ಬದುಕನ್ನು ಯಾರೂ ಬರೆಯಲಾರರು. ಕಾಂಗ್ರೆಸ್ ಇರಬಹುದು, ಭಾಜಪ ಇರಬಹುದು, ಜನತಾ ದಳ ಇರಬಹುದು ಅಥವಾ ಇನ್ನೊಂದು ಪಕ್ಷ ಇರಬಹುದು, ಈರೀತಿಯಲ್ಲಿ ಪಕ್ಷಗಳು ಹುಟ್ಟುತ್ತವೆ ಎಂದು ಹೇಗೆ ಹೇಳಲಾಗುವುದು. ಜನರಿಗೆ ಮಣ್ಣು ಎರಚುವುದು ಮಾತ್ರ ಕರಗತ ಮಾಡಿಕೊಂಡಿರುವ ಮಠಾಧೀಶರು ಏನನ್ನು ಸಾಧಿಸಿಯಾರು?. ಇವೆಲ್ಲವೂ ಕಾಕತಾಳಿಯ ! (Just a coincidence..) ನಮ್ಮ ರಾಜಕಾರಣಿಗಳೇನು ಕಡಿಮೆಯಲ್ಲ, ಮಠಾಧೀಶರ ಮೂಲಕ ಒಂದು ಜಾತಿಯ ಪಂಗಡಕ್ಕೆ/ವರ್ಗಕ್ಕೆ ಸೇರಿದ ಜನರಿಗೆ ಮತ ಚಲಾಯಿಸಲು ಆದೇಶಿಸುತ್ತಾರೆ. ಸನ್ಯಾಸಿಗೂ ರಾಜಕೀಯಕ್ಕೂ ಎಲ್ಲಿಯ ಸಂಬಂಧ!! ಜನ ದೇವರಲ್ಲಿ ಭಕ್ತಿ ಇಡುವುದಕ್ಕಿಂತ ಈ ಸನ್ಯಾಸಿಗಳಿಗೆ ಹೆದರುತ್ತಾರೆ. ಪಾಪ ಜನಗಳಾದರೂ ಏನು ಮಾಡಿಯಾರು, ಇವರ ಕುಟುಂಬದ ಸಮಸ್ಯೆಗಳನ್ನು ಮಠಾಧೀಶರುಗಳೇ ನೋಡಬೇಕಲ್ಲ!. ಕಾಯಕವೇ ಕೈಲಾಸ ಎಂದ ಬಸವಣ್ಣನವರ ಮಾತುಗಳು ಸಾಮಾನ್ಯ ಜನಗಳಿಗೆ ಎಂದು ತಿಳಿಯುವುದೋ ಶಿವನೆ ಬಲ್ಲ. ದೂರದ ಡೆಲ್ಲಿ ಇಂದ ಬಂದ ರಾಜಕಾರಣಿಗಳು ಶ್ರೀಗಳಿಗೆ ಪೂಜೆ ಸಲ್ಲಿಸಿ, ತಮ್ಮ ಪಕ್ಷಕ್ಕೆ ಮತ ನೀಡುವಂತೆ ಮಠಮಾನ್ಯರ ಮೂಲಕ ಜನರಿಗೆ ಹೇಳಿಸಿ ಭವಿಷ್ಯವನಾಡುವಂತೆ ಮಾಡುತ್ತಾರೆ. ಜನರು ಬುದ್ದಿವನ್ತರಾದರೆ ಮಾತ್ರ ಜನರ ಏಳಿಗೆ. ಒಟ್ಟಿನಲ್ಲಿ ಎಲ್ಲಿಯವರೆಗೂ ಭವಿಷ್ಯ ಕೆಳುವವರಿರುತ್ತಾರೂ, ಅಲ್ಲಿಯವರೆಗೂ ಭವಿಷ್ಯ ನುಡಿಯುವವರು ಗಟ್ಟಿಯಾಗಿ ಇರುತ್ತಾರೆ!!

ಒಂದು ಮಾತ್ರ ನಿಜ ‘ನಮ್ಮ ಭವಿಷ್ಯ ನಮ್ಮ ಕೈಯಲ್ಲಿ ಮಾತ್ರ’ ಬೇರೆ ಯಾರೋ ನಮ್ಮ ಭವಿಷ್ಯ ಬರೆಯುವುದು ಶತ-ಸುಳ್ಳು.

Leave a Reply

Your email address will not be published. Required fields are marked *