ದೀಪದ ಹಾವಳಿ ಈ ದೀಪಾವಳಿ

ದೀಪಗಳ ಹಾವಳಿ ಈ ದೀಪಾವಳಿ,
ಮನೆ ಮನೆಯಲ್ಲೂ ಬಣ್ಣದ ರಂಗೋಲಿ,
ಮನ ಮನಗಳಲ್ಲೂ ಬೀಸುವ ತಂಗಾಳಿ,
ಎಲ್ಲರ ಬದುಕಲ್ಲೂ…ಹೊತ್ತು ತರಲಿ ಪ್ರೀತಿಯ ಈ ಬೆಳಕಿನ ದೀಪಾವಳಿ…

ಬೆಳಗುವ ದೀಪವು ಸುಡಲಿ ದ್ವೇಶವ,
ಕರಗಲಿ ಜಾತಿ-ಮತಗಳ ಭಾವ,
ಎಲ್ಲರೂ ಹೊಸೆಯಲಿ ಒಲವಿನ ದಾರವ,
ಇಂದೇ ಹುಟ್ಟಲಿ ಶಾಂತಿಯ ಮಾನವ

ಎಲ್ಲರ ಮನೆಯಲ್ಲೂ ಬೆಳಗಲಿ ಶಾಂತಿಯ ನೀತಿ,
ಎಲ್ಲರ ಮನದಲ್ಲೂ ಹುಟ್ಟಲಿ ನೀತಿಯ ಪ್ರೀತಿ,
ಪ್ರತಿದಿನ ವಾತಾವರಣವಿರಲಿ ಹಬ್ಬದ ರೀತಿ,
ಎಲ್ಲರ ಬಾಳಲಿ ಬೆಳಗಲಿ ಈ ಬೆಳಕಿನ ಆರತಿ….ಈ ಬೆಳಕಿನ ಆರತಿ….

– ಶಮಂತ್

Leave a Reply

Your email address will not be published. Required fields are marked *