ತೇರಾಯೇರಿ ಅಂಬರದಾಗೆ ನೇಸರ ನಗುತಾನೆ

ಹಾಡು: ಎಸ್. ಪಿ. ಬಾಲಸುಬ್ರಮಣ್ಯಂ
ಸಂಗೀತ: ರಾಜನ್-ನಾಗೇಂದ್ರ
ಸಾಹಿತ್ಯ: ಪ್ರೊ: ದೂಡ್ಡ ರಂಗೇಗೌಡ

ತೇರಾಯೇರಿ ಅಂಬರದಾಗೆ ನೇಸರು ನಗುತಾನೆ..
ಅ, ತೇರಾಯೇರಿ ಅಂಬರದಾಗೆ ನೇಸರು ನಗುತಾನೆ..

ಮರ-ಗಿಡ ತೂಗ್ಯಾವೆ, ಹಕ್ಕಿ ಹಾಡ್ಯಾವೆ
ಮರ-ಗಿಡ ತೂಗ್ಯಾವೆ, ಹಕ್ಕಿ ಹಾಡ್ಯಾವೆ
ಬೀರ್ಯಾವೇ ಚೆಲುವ ಬೀರ್ಯಾವೇ ಬಾ..
ನೋಡಿ ನಲಿಯೋಣ ತಮ್ಮ …
ನಾವ್ ಹಾಡಿ ಕುಣಿಯೋಣ ತಮ್ಮ …

ತೇರಾಯೇರಿ ಅಂಬರದಾಗೆ ನೇಸರು ನಗುತಾನೆ..
ಅ, ತೇರಾಯೇರಿ ಅಂಬರದಾಗೆ ನೇಸರು ನಗುತಾನೆ..
ಮರ-ಗಿಡ ತೂಗ್ಯಾವೆ, ಹಕ್ಕಿ ಹಾಡ್ಯಾವೆ
ಮರ-ಗಿಡ ತೂಗ್ಯಾವೆ, ಚಿಲಿ-ಪಿಲಿ ಹಕ್ಕಿ ಹಾಡ್ಯಾವೆ

ಬೇಲಿಮ್ಯಾಗೆ ಬಣ್ಣ ಬಣ್ಣದ ಹೂವು ಅರಳ್ಯಾವೇ ..
ಆ ಹೂವಿನ ತುಂಬಾ ಸಣ್ಣ ಚಿಟ್ಟೆ ಕುಂತಾವೆ …
ಬಾಗಿ-ಬೀಗಿ ಅತ್ತ-ಇತ್ತ ಬಾಳೆ ಬಳುಕ್ಯಾವೇ …
ಆ ಬಾಳೆ ವನವೇ ನಕ್ಕು ಕಣ್ಣು ತಂದ್ಯಾವೆ
ಕುಂತರೆ ಸೆಳೆವ, ಸಂತಸ ತರುವ
ಕುಂತರೆ ಸೆಳೆವ, ಸಂತಸ ತರುವ
ಹೊಂಗೆ ಟೊಂಗೆ ತೂಗಿ ತೂಗಿ ಗಾಳಿ ಬೀಸ್ಯಾವೇ

ಆಹ.. ತೇರಾಯೇರಿ ಅಂಬರದಾಗೆ ನೇಸರು ನಗುತಾನೆ..
ಮರ-ಗಿಡ ತೂಗ್ಯಾವೆ, ಹಕ್ಕಿ ಹಾಡ್ಯಾವೆ
ಮರ-ಗಿಡ ತೂಗ್ಯಾವೆ, ಹಕ್ಕಿ ಹಾಡ್ಯಾವೆ

ಭೂಮಿ ಮ್ಯಾಗೆ ಹಚ್ಹ ಹಚ್ಹ ಗೆ ಹಾದಿ ತೆರೆದಾವೇ
ಆ ಹಾದಿ ಅಕ್ಕ-ಪಕ್ಕ ಬಳ್ಳಿ ಬೆಳೆದಾವೆ
ಸಾಲು-ಸಾಲು ಬೆಟ್ಟ-ಗುಡ್ಡ ಮೌನ ತಳೆದಾವೇ
ಅ ಮೌನದ ಗಾನ ಎಲ್ಲರ ಮನಸ ಸಳೆದಾವೆ..
ಭಾವ ಬಿರಿದು ಹತ್ತಿರ ಕರದು
ಭಾವ ಬಿರಿದು ಹತ್ತಿರ ಕರದು
ಮಾವು, ಬೇವು, ತಾಳೆ, ತೆಂಗು ಲಾಲಿ ಹಾಡ್ಯಾವೆ

ಡುರ್ರ್ ರ್ರ್ ರ್ರ್ ರ್ರ್ ರ್ರ್ ಅ….

ತೇರಾಯೇರಿ ಅಂಬರದಾಗೆ ನೇಸರು ನಗುತಾನೆ..
ಮರ-ಗಿಡ ತೂಗ್ಯಾವೆ, ಹಕ್ಕಿ ಹಾಡ್ಯಾವೆ
ಮರ-ಗಿಡ ತೂಗ್ಯಾವೆ, ಹಕ್ಕಿ ಹಾಡ್ಯಾವೆ

ಭೇದ-ಭಾವ ಮುಚ್ಚು-ಮರೆ ಒಂದು ಮಾಡ್ದೆನೇ
ಅ ಸೂರ್ಯ ಒಂದೇ ಬೆಳಕಾ ನಮಗೇ ನೀಡ್ಯಾನೇ ಹಾ:..
ಗಾಳಿ, ನೀರು ಎಲ್ಲಾ ಕೊಟ್ಟು ಜಾಗ್ವಾ ನಡೆಸ್ಯಾನೇ
ಆ ಸಿರಿಯಾ ಹಂಚಿಕೊಂಡರೆ ಬಾಳು ಸವಿ ಜೇನೇ

ಪ್ರೀತಿ ಬೆಳೆದು…. ಸ್ನೇಹಾ ತಳೆದು … ಹೂಂ …
ಪ್ರೀತಿ ಬೆಳೆದು…. ಸ್ನೇಹಾ ತಳೆದು
ನಗ್ತಾ ನಗ್ತಾ ನಾವು ನೀವು ಸವಿಯುವ ಸುಖವನ್ನೇ …

ಹ ಹ ಹ್ಹ ಹ್ಹ ಹಾ …

ತೇರಾಯೇರಿ ಅಂಬರದಾಗೆ ನೇಸರು ನಗುತಾನೆ..
ಮರ-ಗಿಡ ತೂಗ್ಯಾವೆ, ಹಕ್ಕಿ ಹಾಡ್ಯಾವೆ
ಮರ-ಗಿಡ ತೂಗ್ಯಾವೆ, ಚಿಲಿ-ಪಿಲಿ ಹಕ್ಕಿ ಹಾಡ್ಯಾವೆ
ಬೀರ್ಯಾವೇ ಚೆಲುವ ಬೀರ್ಯಾವೇ ಬಾ..
ನೋಡಿ ನಲಿಯೋಣ ತಮ್ಮ …
ನಾವ್ ಹಾಡಿ ಕುಣಿಯೋಣ ತಮ್ಮ …

Leave a Reply

Your email address will not be published. Required fields are marked *