ದೇಹಒಂದು ದೇವ ವೀಣೆ ನರ ನರವು ತಂತಿತಾನೆ
ದೇಹಒಂದು ದೇವ ವೀಣೆ ನರ ನರವು ತಂತಿತಾನೆ
ಹಗಲಿರುಳು ನುಡಿಯುತ್ತಿಹ ಉಸಿರಾಟವೆ ಗೀತಾ
ಅದ ಬಾರಿಸೆ ನೀ ಪ್ರವೀಣೆ ತಾಯಿ ನಿನ್ನ ಕೈಗೆ ನಾನೇ
ಒಪ್ಪಿಸಿಕೊಂಡಿಹೆನು ಬರಲಿ ಜೀವದ ಸಂಗೀತ …
ದೇಹಒಂದು ದೇವ ವೀಣೆ ನರ ನರವು ತಂತಿತಾನೆ
ದೇಹಒಂದು ದೇವ ವೀಣೆ ….
ಮನದ ಮಲೆಯ ತುದಿ-ತುದಿಯಲಿ ಮೌನದ ಸುತ್ತೂರಧಿಯಲಿ
ಏಳಲಿ ಅಲೆ ನವತಾರೆಯ ಕಿರಣಾವಲಿಯಂತೆ
ಮನದ ಮಲೆಯ ತುದಿ-ತುದಿಯಲಿ ಮೌನದ ಸುತ್ತೂರಧಿಯಲಿ
ಏಳಲಿ ಅಲೆ ನವತಾರೆಯ ಕಿರಣಾವಲಿಯಂತೆ
ಇಗೋ ಚಿತ್ತದ ಯಾವುದೋ ಸ್ಮೃತಿ ಸುಳಿಸುತ್ತಿದೆ ವಿದ್ಯಾರತಿ
ಇಗೋ ಚಿತ್ತದ ಯಾವುದೋ ಸ್ಮೃತಿ ಸುಳಿಸುತ್ತಿದೆ ವಿದ್ಯಾರತಿ
ಮೈ-ಮನವು ಪ್ರಾಣಪಥವೆ , ಮೈ-ಮನವು ಪ್ರಾಣಪಥವೆ
ನಲಿ ನಲಿ ನಲಿವಂತೆ …
ದೇಹಒಂದು ದೇವ ವೀಣೆ ನರ ನರವು ತಂತಿತಾನೆ
ದೇಹಒಂದು ದೇವ ವೀಣೆ ….
ನೀನೆಲ್ಲೋ ಹಾಡುತಿಹೆ, ನಾನೆತ್ತೋ ನೋಡುತಿಹೆ
ಹಾಡಿದ ಒಡನಾಟಕೆ ಒಳನಾಡಿಯು ನಡುಗುತ್ತಿದೆ
ನೀನೆಲ್ಲೋ ಹಾಡುತಿಹೆ, ನಾನೆತ್ತೋ ನೋಡುತಿಹೆ
ಹಾಡಿದ ಒಡನಾಟಕೆ ಒಳನಾಡಿಯು ನಡುಗುತ್ತಿದೆ
ಸ್ಪುರಿಸುತ್ತಿದೆ ಸ್ಪಂದಿಸುತಿದೆ ವಿವಿಧ ಸ್ವರ ಹೊಂದಿಸುತಿದೆ
ಸ್ಪುರಿಸುತ್ತಿದೆ ಸ್ಪಂದಿಸುತಿದೆ ವಿವಿಧ ಸ್ವರ ಹೊಂದಿಸುತಿದೆ
ಉಳಿದಲೆದಾಟವು ಎಲ್ಲೋ ಅಲ್ಲೇ ಅಡಗುತಿದೆ
ದೇಹಒಂದು ದೇವ ವೀಣೆ ನರ ನರವು ತಂತಿತಾನೆ
ದೇಹಒಂದು ದೇವ ವೀಣೆ ನರ ನರವು ತಂತಿತಾನೆ
ಹಗಲಿರುಳು ನುಡಿಯುತ್ತಿಹ ಉಸಿರಾಟವೆ ಗೀತಾ
ಅದ ಬಾರಿಸೆ ನೀ ಪ್ರವೀಣೆ ತಾಯಿ ನಿನ್ನ ಕೈಗೆ ನಾನೇ
ಒಪ್ಪಿಸಿಕೊಂಡಿಹೆನು ಬರಲಿ ಜೀವದ ಸಂಗೀತ …
ದೇಹಒಂದು ದೇವ ವೀಣೆ ನರ ನರವು ತಂತಿತಾನೆ
ಹಗಲಿರುಳು ನುಡಿಯುತ್ತಿಹ ಉಸಿರಾಟವೆ ಗೀತಾ
ಉಸಿರಾಟವೆ ಗೀತಾ
ಉಸಿರಾಟವೆ ಗೀತಾ
ಉಸಿರಾಟವೆ ಗೀತಾ ….