ತುತ್ತು ಅನ್ನ ತಿನ್ನೋಕ್ಕೆ

ಹಾಡು: ವಿಷ್ಣುವರ್ಧನ್
ಸಂಗೀತ : ವಿಜಯಭಾಸ್ಕರ್

ತುತ್ತು ಅನ್ನ ತಿನ್ನೋಕ್ಕೆ ಬೊಗಸೆ ನೀರು ಕುಡಿಯೋಕ್ಕೆ
ತುತ್ತು ಅನ್ನ ತಿನ್ನೋಕ್ಕೆ ಬೊಗಸೆ ನೀರು ಕುಡಿಯೋಕ್ಕೆ
ತುಂಡು ಬಟ್ಟೆ ಸಾಕು ನನ್ನ ಮಾನ ಮುಚ್ಹೂಕ್ಕೆ
ಅಂಗೈಯಗಲ ಜಾಗ ಸಾಕು ಅಯಾಗಿರೋಕ್ಕೆ

ತುತ್ತು ಅನ್ನ ತಿನ್ನೋಕ್ಕೆ ಬೊಗಸೆ ನೀರು ಕುಡಿಯೋಕ್ಕೆ

ಕಾಡ್ನಾಗ್ ಒಂದು ಮರವೇ ಒಣಗಿ ಬಿದ್ರೆ ಏನಾಯ್ತು?
ಊರಾಗ್ ಒಂದು ಮನೆಯೇ ಉರಿದು ಓದ್ರೆ ಏನಾಯ್ತು?
ಕಾಡ್ನಾಗ್ ಒಂದು ಮರವೇ ಒಣಗಿ ಬಿದ್ರೆ ಏನಾಯ್ತು?
ಊರಾಗ್ ಒಂದು ಮನೆಯೇ ಉರಿದು ಓದ್ರೆ ಏನಾಯ್ತು?

ಒಂದು ಅಳ್ಲಿಲ್ ನನ್ನ ಓಗೋ ಅಂದರೇನು?
ಸ್ವರ್ಗದಂತ ಊರು ನನ್ನ ಅತ್ತಿರ ಕರೆದಾಯ್ತು. ಹ ಹ..
ತುತ್ತು ಅನ್ನ ತಿನ್ನೋಕ್ಕೆ ಬೊಗಸೆ ನೀರು ಕುಡಿಯೋಕ್ಕೆ

ದುಡಿಯೋಕ್ಕಂತಾ ಮೈಯ್ಯ ತುಂಬಾ ಸಕ್ತಿ ತುಂಬೈತೆ..
ಅಡ್ಡ ದಾರಿ ಇಡಿಯೋದ್ ತಪ್ಪು ಅಂತಾ ಗೊತೈತೆ… ಆ..
ದುಡಿಯೋಕ್ಕಂತಾ ಮೈಯ್ಯ ತುಂಬಾ ಸಕ್ತಿ ತುಂಬೈತೆ..
ಅಡ್ಡ ದಾರಿ ಇಡಿಯೋದ್ ತಪ್ಪು ಅಂತಾ ಗೊತೈತೆ

ಕಷ್ಟಾ ಒಂದೇ ಬರದು.. ಸುಖವು ಬರದೇ ಇರದು..
ರಾತ್ರೀ ಮುಗಿದಾಮೇಲೆ ಆಗಲು ಬಂದೇ ಬತ್ತೈತೆ… ಆ..
ತುತ್ತು ಅನ್ನ ತಿನ್ನೋಕ್ಕೆ ಬೊಗಸೆ ನೀರು ಕುಡಿಯೋಕ್ಕೆ..

ಹರಿಯೊನದಿಯು ಒಂದೇ ಕಡೆ ನಿಲ್ಲೋಕ್ಕಾಗಲ್ಲ..
ಹುಟ್ಟಿದ ಮನ್ಸ ಒಂದೇ ಊರಲಿ ಬಾಳೋಕ್ಕಾಗಲ್ಲ.. ಹ ಹ
ಹರಿಯೊನದಿಯು ಒಂದೇ ಕಡೆ ನಿಲ್ಲೋಕ್ಕಾಗಲ್ಲ..
ಹುಟ್ಟಿದ ಮನ್ಸ ಒಂದೇ ಊರಲಿ ಬಾಳೋಕ್ಕಾಗಲ್ಲ..
ದೇವ್ರು ತಾನೆ ನಂಗೆ ಅಪ್ಪ-ಅಮ್ಮ ಎಲ್ಲಾ..
ಸಾಯೊಗಂಟ ನಂಬಿದವರ ಕೈ ಬಿಡಾಕಿಲ್ಲ.. ಹ ಹೇ

ತುತ್ತು ಅನ್ನ ತಿನ್ನೋಕ್ಕೆ ಬೊಗಸೆ ನೀರು ಕುಡಿಯೋಕ್ಕೆ
ತುಂಡು ಬಟ್ಟೆ ಸಾಕು ನನ್ನ ಮಾನ ಮುಚ್ಹೂಕ್ಕೆ
ಅಂಗೈಯಗಲ ಜಾಗ ಸಾಕು ಅಯಾಗಿರೋಕ್ಕೆ
ಅಯಾಗಿರೋಕ್ಕೆ … ಅಯಾಗಿರೋಕ್ಕೆ ..

Leave a Reply

Your email address will not be published. Required fields are marked *