ಗಣೇಶನ ಗದ್ದಲ

ಈ ದಿನ ಗೌರೀ-ಗಣೇಶನ ಹಬ್ಬ. ಮೈಸೂರಿನಲ್ಲಿ, ಸುಮಾರು ಒಂದು ಬೀದಿಗೆ ಕನಿಷ್ಠ ೨ (ಎರಡು) ಗಣಪತಿಗಳನ್ನು ಕೂರಿಸಿರುವುದನ್ನು ನೋಡಿದೆ. ಅಂದರೆ, ಮೈಸೂರಿನಲ್ಲಿ ಸುಮಾರು ಎರಡು ಸಾವಿರ ಬೀದಿಗಳಿವೆ. ಒಟ್ಟು ೨೦೦೦ * ೨ ಗಣಪಗಳು = ೪೦೦೦ (ನಾಲ್ಕು ಸಾವಿರ) ಬೀದಿ ಗಣೇಶಗಳು. ಗಳೆಯರೇ, ಗಣೇಶನನ್ನು ಕೂರಿಸುವುದರಲ್ಲಿ ತಪ್ಪಿಲ್ಲ ಆದರೆ ಗಣೇಶನ ಹೆಸರಿನಲ್ಲಿ ಬೀದಿ-ಬೀದಿಗಳಲ್ಲಿ ಜೋರಾಗಿ ಮೈಕ್-ಸೆಟ್ ಗಳನ್ನು ಹಾಕಿ ಅಬ್ಬರ ಮಾಡಿದರೆ ಜನ-ಸಾಮಾನ್ಯರು ಎಲ್ಲಿ ಹೋಗಬೇಕು. ಇದನ್ನು ಈಗ ಬರೆಯುತ್ತಿರುವ ನನ್ನ ಬಲದಲ್ಲಿ “ಚಿಂತೆ ಏಕೆ ಮನವೆ” ಎಂದು ಡಾ|| ರಾಜ್, ಹಾಡುತ್ತಿದ್ದಾರೆ. ನನ್ನ ಎಡ ದಲ್ಲಿ ಹೊಸ ಚಲನ-ಚಿತ್ರದ ಹಾಡು ಹಾಡುತ್ತಿದೆ. ಎರಡು ಪಾರ್ಟಿಯವರಿಂದ ಸ್ವೆಚ್ಛಾಚಾರ ನಡೆಯುತ್ತಿದೆ. ಎಷ್ಟೊಂದು ಬಿಟ್ಟೀ ವಿದ್ಯುತ್ ಬಳಕೆ, ಶಬ್ದ-ಮಾಲಿನ್ಯ. ಚಲನ-ಚಿತ್ರದ ಹಾಡುಗಳು ಹೇಗಿವೆ ನೋಡಿ. ಹೇ.. ಪಾರೋ…. (ಗಣೇಶನ ಮನ ಒಲಿಕೆ) ಸಂತೆಯಲ್ಲಿ ನಿಂತರೂನು… (ಮತ್ತೊಂದು ಗಣೇಶನ ಮನ ಒಲಿಕೆ) ಸೂರ್ಯ ನಿನ್ನ ತಂದೆಯಾಣೆಗೂ, ಚಂದ್ರ ನಿನ್ನ ತಾಯಿಯಾಣೆಗೂ ಪೋಲಿ ಇವನು.. (ಪೋಲಿ ಇವನು ಎಂದು ಹೇಳಲು ಸೂರ್ಯ-ಚಂದ್ರರ ತಂದೆ-ತಾಯಿಯರ ಆಣೆ.. ಆಹಾ.. ಅಧ್ಬುತ….) ಸರಿ ಇದರ ಅನಾಹುತಗಳ ಬಗ್ಗೆ ಅರಿವಿದೆಯೇ?… ಮನೆಯಲ್ಲಿ ವಯಸ್ಸಾದವರಿದ್ದರೆ…, ಬಾಣಂತಿ-ಕೂಸಿನ ಮನೆ ಇದ್ದರೆ.. ಅವರು ನಮ್ಮ ಅರಚಾಟಕ್ಕೆ ಏನು ಮಾಡಬೇಕು?… ಗಣೇಶನೇ ಹೇಳಬೇಕು ಅವನಿಗೆ.. ಏನು ಬೇಕು ಎಂದು… ಜೈ-ಗಣೇಶ

Leave a Reply

Your email address will not be published. Required fields are marked *