ಕಾಣದ ಕಡಲಿಗೆ

ಸಾಹಿತ್ಯ : ಜಿ ಎಸ್ ಶಿವರುದ್ರಪ್ಪ
ಸಂಗೀತ : C ಅಶ್ವಥ್

ಕಾಣದ ಕಡಲಿಗೆ ಹಂಬಲಿಸಿದೆ ಮನ ||
ಕಾಣಬಲ್ಲೆನೆ ಒಂದು ದಿನ ಕಡಲನು ||
ಕೂಡಬಲ್ಲೆನೆ ಒಂದು ದಿನ ||

ಕಾಣದ ಕಡಲಿಗೆ ಹಂಬಲಿಸಿದೆ ಮನ

ಕಾಣದ ಕಡಲಿನ ಮೊರೆತದ ಜೋಗುಳ ಒಳಗಿವಿಗಿಂದು ಕೇಳುತಿದೆ ||
ನನ್ನ ಕಲ್ಪನೆಯು ತನ್ನ ಕಡಲನೆ ಚಿತ್ರಿಸಿ ಚಿಂತಿಸಿ ಸ್ಯುಯುತಿದೆ
ಎಲ್ಲಿರುವುದೋ ಅದು ? ಎಂತಿರುವುದೋ ಅದು ?
ನೋಡಬಲ್ಲೆನೆ ಒಂದು ದಿನ ಕಡಲನು, ಕೂಡಬಲ್ಲೆನೆ ಒಂದು ದಿನ

ಕಾಣದ ಕಡಲಿಗೆ ಹಂಬಲಿಸಿದೆ ಮನ

ಸಾವಿರ ಹೊಳೆಗಳು ತುಂಬಿ ಹರಿದರೂ ಒಂದೇ ಸಮನಾಗಿಹುದಂತೆ
ಸುನಿಲ, ವಿಸ್ತರ ತರಂಗ ಶೋಭಿತ ಗಂಭೀರಾಂಬುಧಿ ತಾನಂತೆ
ಮುನ್ನೀರಂತೆ ಅಪಾರವಂತೆ
ಕಾಣಬಲ್ಲೆನೆ ಒಂದು ದಿನ ಅದರೊಳು ಕರಗಲಾರೆನೆ ಒಂದು ದಿನ

ಕಾಣದ ಕಡಲಿಗೆ ಹಂಬಲಿಸಿದೆ ಮನ

ಜಟಿಲ ಕಾನನದ ಕುಟಿಲ ಪಥಗಳಲಿ ಹರಿವ ತೊರೆಯು ನಾನು
ಎಂದಿಗಾದರೂ ಕಾಣದ ಕಡಲನು ಸೇರಬಲ್ಲೆನೇನು
ಸೇರಬಹುದೇ ನಾನು ಕಡಲ ನೀಲಿಯೊಳು… ಕರಗಬಹುದೇ ನಾನು

ಕರಗಬಹುದೇ ನಾನು

ಕರಗಬಹುದೇ ನಾನು

Leave a Reply

Your email address will not be published. Required fields are marked *