ಕಾಡು ಕುದುರಿ(ರೆ) ಓಡಿ ಬಂದಿತ್ತಾ

ಕಾಡು ಕುದುರಿ(ರೆ) ಓಡಿ ಬಂದಿತ್ತಾ
ಕಾಡು ಕುದುರಿ(ರೆ) ಓಡಿ ಬಂದಿತ್ತಾ
ಕಾಡು ಕುದುರಿ(ರೆ) ಓಡಿ ಬಂದಿತ್ತಾ
ಕಾಡು ಕುದುರಿ(ರೆ) ಓಡಿ ಬಂದಿತ್ತಾ

ಆಹಾ .. ಭಲೇ.. ಭಲೇ ಭಲೇ ಭಲೇ ಭಲೇ ….

ಊರಿನಾಚೆ ದೂರ ದಾರಿ ಶುರುವಾಗೊ (ಸುರುವಾಗೋ) ಜಾಗದಲ್ಲಿ
ಮೂಡ ಬೆಟ್ಟ ಸೂರ್ಯ ಹುಟ್ಟಿ ಹಸಿರಿನ ಗುಡ್ಡ ವಾಡೇವಲ್ಲಿ
ಮುಗಿವೇ ಇಲ್ಲದ ಮುಗಿಲಿನಿಂದ ಜಾರಿ ಬಿದ್ದ ಉಲ್ಕಿಹಾಂಗ ಕಾಡಿನಿಂದ ಚಂಗನೆ ನೆಗೆದಿತ್ತ

ಕಾಡು ಕುದುರಿ(ರೆ) ಓಡಿ ಬಂದಿತ್ತಾ

ಹೇ ಹೇಯ್ , ಕುಣಿ ಮತ್ತ … ಹ ಹ ಹ ಹ

ಮೈಯ ಬೆಂಕಿ ಮಿರುಗುತ್ತಿತ್ತಾ ಬ್ಯಾಸಿಗಿ ಬಿಸಿಲ ಉಸಿರಾಡಿತ್ತ
ಮೈಯ ಬೆಂಕಿ ಮಿರುಗುತ್ತಿತ್ತಾ ಬ್ಯಾಸಿಗಿ ಬಿಸಿಲ ಉಸಿರಾಡಿತ್ತ
ಹೊತ್ತಿ ಉರಿಯೋ ಕೇಶರಾಶಿ ಕತ್ತಿನಾಗ ಕುಣಿತ್ತಿತ್ತ
ಹೊತ್ತಿ ಉರಿಯೋ ಕೇಶರಾಶಿ ಕತ್ತಿನಾಗ ಕುಣಿಯುತ್ತಿತ್ತ
ಧೂಮಕೇತು ಹಿಂಬಾಲಿತ್ತ .. ಹೌಹಾರಿತ್ತ ಹೈದಾಡಿತ್ತ .. ಹೈ ಹೈ ಅಂತ ಹಾರಿಬಂದಿತ್ತಾ

ಕಾಡು ಕುದುರಿ(ರೆ) ಓಡಿ ಬಂದಿತ್ತಾ
ಕಾಡು ಕುದುರಿ(ರೆ) ಓಡಿ ಬಂದಿತ್ತಾ

ಹೇಯ್ ಹೇಯ್… ಹ ಹಾ .. ಭಲೇ.. ಭಲೇ ಭಲೇ ಭಲೇ ಭಲೇ ….

ಕಣ್ಣಿನಾಗ ಸಣ್ಣ ಖಡ್ಗ ಆಸುಪಾಸು ಝಳಪಿಸಿತ್ತಾ
ಕಣ್ಣಿನಾಗ ಸಣ್ಣ ಖಡ್ಗ ಆಸುಪಾಸು ಝಳಪಿಸಿತ್ತಾ
ಬೆನ್ನ ಹುರಿ ಬಿಗಿದಿತಣ್ಣ ಸೊಂಟದಿ ಬುಗರಿ ತಿರುಗುತ್ತಿತ್ತ
ಬಿಗಿದ ಕಾಡ ಬಿಲ್ಲಿನಿಂದ, ಬಿಟ್ಟ ಬಾಣ ಧಾರಾ ಚಿಮ್ಮಿ
ಹದ್ದಿನ ಮೀರಿ ಹಾರಿ ಬಂದಿತ್ತಾ

ಕಾಡು ಕುದುರಿ(ರೆ) ಓಡಿ ಬಂದಿತ್ತಾ

ಆಹಾ…

ಮೇಲ ಬಿದ್ದು ಗುದ್ದ ತೋಡಿ ಗುದ್ದಿನ ಬದ್ದಿ ಒದ್ದಿಯಾಗಿ
ಮೇಲ ಬಿದ್ದು ಗುದ್ದ ತೋಡಿ ಗುದ್ದಿನ ಬದ್ದಿ ಒದ್ದಿಯಾಗಿ
ವರ್ತಿ ನೀರು ಭರ್ತಿಯಾಗಿ ಹರಿಯೋಹಂಗ ಹೆಜ್ಜೆ ಹಾಕಿ
ವರ್ತಿ ನೀರು ಭರ್ತಿಯಾಗಿ ಹರಿಯೋಹಂಗ ಹೆಜ್ಜೆ ಹಾಕಿ
ಹತ್ತಿದವರ ಎತ್ತುಕೊಂಡು ಏಳು ಕೊಳ್ಳ ಗಿಲ್ಲಿ ಆಡಿ
ಕಳ್ಳೆ-ಮಳ್ಳೆ ಆಡಿ ಕೆಡವಿತ್ತಾ

ಕಾಡು ಕುದುರಿ(ರೆ) ಓಡಿ ಬಂದಿತ್ತಾ
ಕಾಡು ಕುದುರಿ(ರೆ) ಓಡಿ ಬಂದಿತ್ತಾ

Leave a Reply

Your email address will not be published. Required fields are marked *