ಏನೆಂದು ನಾ ಹೇಳಲಿ… ಮಾನವನಾಸೆಗೆ ಕೊನೆ ಎಲ್ಲಿ ?

ಗೀತ ರಚನೆ : ಚಿ।। ಉದಯಶಂಕರ್
ಹಾಡು : ಡಾ।। ರಾಜ್ ಕುಮಾರ್
ಸಂಗೀತ : ರಾಜನ್-ನಾಗೇಂದ್ರ

ಏನೆಂದು ನಾ ಹೇಳಲಿ… ಮಾನವನಾಸೆಗೆ ಕೊನೆ ಎಲ್ಲಿ ?

ಕಾಣೊದೆಲ್ಲ ಬೇಕು ಎಂಬ ಹಠದಲ್ಲಿ
ಒಳ್ಳೆದೆಲ್ಲ ಬೇಕು ಎಂಬ ಛಲದಲ್ಲಿ..
ಯಾರನ್ನೂ ಪ್ರೀತಿಸನು ಮನದಲ್ಲಿ
ಏನನ್ನು ಬಾಳಿಸನು ಜಗದಲ್ಲಿ… ಹೋ….
ಯಾರನ್ನೂ ಪ್ರೀತಿಸನು ಮನದಲ್ಲಿ .. ಏನೊಂದೂ ಬಾಳಿಸನು ಜಗದಲ್ಲಿ…

ಏನೆಂದು ನಾ ಹೇಳಲಿ… ಆ….
ಮಾನವನಾಸೆಗೆ ಕೊನೆ ಎಲ್ಲಿ ?

ಜೇನುಗಳೆಲ್ಲ ಅಲೆಯುತ ಹಾರಿ ಕಾಡೆಲ್ಲ! ಕಾಡೆಲ್ಲ! ಕಾಡೆಲ್ಲ!..
ಹನಿ-ಹನಿ ಜೇನು ಸೇರಿಸಲೇನು..
ಬೇಕುಎಂದಾಗ ತನದೆನ್ನುವ…

ಕೆಸರಿನ ಹೂವು, ವಿಷದಾ ಹಾವು ಭಯವಿಲ್ಲ! ಭಯವಿಲ್ಲ! ಭಯವಿಲ್ಲ!
ಚೆಲುವಿನದೆಲ್ಲ, ರುಚಿಸುವುದೆಲ್ಲ ಕಂಡುಬಂದಾಗ ಬೇಕೆನ್ನುವ..
ಏನೆಂದು ನಾ ಹೇಳಲಿ… ಆ….
ಮಾನವನಾಸೆಗೆ ಕೊನೆ ಎಲ್ಲಿ ?

ಪ್ರಾಣಿಗಳೇನು, ಗಿಡ-ಮರವೇನು ಬಿಡಲಾರ! ಬಿಡಲಾರ! ಬಿಡಲಾರ!
ಬಳಸುವನೆಲ್ಲ.. ಉಳಿಸುವುದಿಲ್ಲ.. ತನ್ನ ಹಿತಕಾಗಿ ಹೋರಾಡುವ..
ನುಡಿಯುವುದೊಂದು, ನಡೆಯುವುದೊಂದು ಎಂದೆಂದು! ಎಂದೆಂದು! ಎಂದೆಂದು!
ಪಡೆಯುವುದೊಂದು ಕೊಡುವುದು ಒಂದು..
ಸ್ವಾರ್ಥಿ ತಾನಾಗಿ ಮೆರೆದಾಡುವ..

ಏನೆಂದು ನಾ ಹೇಳಲಿ… ಮಾನವನಾಸೆಗೆ ಕೊನೆ ಎಲ್ಲಿ ?

ಕಾಣೊದೆಲ್ಲ ಬೇಕು ಎಂಬ ಹಠದಲ್ಲಿ
ಒಳ್ಳೆದೆಲ್ಲ ಬೇಕು ಎಂಬ ಛಲದಲ್ಲಿ..
ಯಾರನ್ನೂ ಪ್ರೀತಿಸನು ಮನದಲ್ಲಿ
ಏನನ್ನು ಬಾಳಿಸನು ಜಗದಲ್ಲಿ… ಹೋ….
ಯಾರನ್ನೂ ಪ್ರೀತಿಸನು ಮನದಲ್ಲಿ .. ಏನೊಂದೂ ಬಾಳಿಸನು ಜಗದಲ್ಲಿ…

ಏನೆಂದು ನಾ ಹೇಳಲಿ… ಮಾನವನಾಸೆಗೆ ಕೊನೆ ಎಲ್ಲಿ?
ಕೊನೆ ಎಲ್ಲಿ? ಕೊನೆ ಎಲ್ಲಿ? ಕೊನೆ ಎಲ್ಲಿ?

Leave a Reply

Your email address will not be published. Required fields are marked *