ಮಕ್ಕಳು ಬೆಳೆಯುವ ಪರಿಸರ

“ಕೆಲ ದಿನಗಳ ಹಿಂದೆ ನನ್ನ ಮನೆಗೆ ಯೆನ್.ಜಿ.ಓ ಸಂಸ್ಥೆಇಂದ ನನ್ನ ಮಕ್ಕಳು ಬೆಳೆಯುತ್ತಿರುವ ಪರಿಸರ / ಪರಿಸ್ಥಿತಿ ಗಳ ಬಗ್ಗೆ ತಿಳಿದುಕೊಳ್ಳಲು ಕೆಲವರು ಬಂದಿದ್ದರು”. ಮಕ್ಕಳಿಗೆ ಸರಿಯಾದ ರೀತಿಯ ಪರಿಸರ ಸಿಗುತ್ತಿಲ ಎಂದು ನಿಖರವಾದ ದೂರಿರುವುದರಿಂದ ಬಂದಿದ್ದರೆಂದು ತಿಳಿದುಬಂತು. ಈ ವಿಚಾರವಾಗಿ ನನ್ನ ಮನೆಯವರ ಮನದಲ್ಲಿ ರುದ್ರತಾಂಡವವೇ ನಡೆದ ವಿಚಾರ ಹಾಗಿರಲಿ, ಆದರೆ ತಕ್ಷಣ ನನಗೆ ಹೊಳೆದದ್ದು ನಾನು ಹಿಂದೆ ಬರೆದುಕೊಂಡ ಈ ಕೆಳಗಿನ ಸಾಲುಗಳನ್ನು ಈ ದಿನ(21-02-2016) ಈ ತಾಣದಲ್ಲಿ ಪ್ರಕಟಿಸುತ್ತಿದ್ದೇನೆ. ಈ ಮಾತುಗಳು ನನ್ನವಲ್ಲ. […]

ಮಕ್ಕಳು

ನಿಜವಾದ ಜೀವಂತ ದೇವರುಗಳನ್ನು / ದೇವರನ್ನು ನೋಡಬೇಕು ಎಂದರೆ, ಎಲ್ಲಿ? ಎಂದು ಯಾರಾದರು ಕೇಳಿದಾಗ ತಿಳಿದವರು ಹೇಳುವುದು ಒಂದೇ ಜವಾಬು(ಉತ್ತರ), “ಮಕ್ಕಳನ್ನು ನೋಡಿ !” ಎಂದು. ನಿಜ!! ಪ್ರತ್ಯಕ್ಷ ದೇವರುಗಳು ಎಂದರೆ ಮಕ್ಕಳೇ!! ನನ್ನ ಪ್ರಕಾರ ಹೊಸದಾಗಿ ರೂಪುಗೊಂಡಿತುವ ಮುಗ್ಧ ಸ್ವರೂಪದ ಪುಟ್ಟ ಚೇತನಾ ಶಕ್ತಿಗಳು. ಎಷ್ಟು ಶುದ್ಧವಾದ ಮನಸ್ಸು! ಸ್ವಲ್ಪವೂ ಕಲ್ಮಷ ಇಲ್ಲದ, ಚೂರೂ ಕೆಟ್ಟಬುದ್ಧಿ ಇಲ್ಲದ, ಅನಂತದಿಂದ ಆಗತಾನೇ ಇಳಿದುಬಂದ ಜೀವಗಳು. ಅದ್ಭುತವಾಗಿ ಹೆಣೆದಂತಹ ಹಗುರವಾದ ನೂಲಿನ ಬಟ್ಟೆಗಳಂತೆ. ಮುಗ್ಧತೆಯ ತಾಣಗಳಿದ್ದಂತೆ!  ನೇರ ನುಡಿ, ಕಂಡದ್ದನ್ನು ಕಂಡಂತೆ […]

ನಮ್ಮೆಲ್ಲರಲ್ಲೂ ಒಬ್ಬ ಕವಿ ಇದ್ದಾನೆ

ನಮ್ಮೆಲ್ಲರಲ್ಲೂ ಒಬ್ಬ ಕವಿ ಇದ್ದಾನೆ.. ನಾವೂ ಕವಿತೆಗಳನ್ನು ಕಟ್ಟಬಹುದು,ನಮ್ಮೆಲ್ಲರಲ್ಲೂ ಒಬ್ಬ ರವಿ ಇದ್ದಾನೆ.. ಬೆಳಕನ್ನು ನಾವೂ ಸಹ ಬೀರಬಹುದು,ಹೀಗೆ ಒ೦ದುಗೂಡಿ ನಡೆದರೆ ಸಾಕು, ಒ೦ದು ದಿನ ಕನ್ನಡಕ್ಕೆ ಎತ್ತರದ ಸ್ಥಾನ ಮಾನ ಗಿಟ್ಟಿಸಬಹುದು; ಬನ್ನಿ ಕನ್ನಡವನ್ನು ಮತ್ತೆ ಕಟ್ಟೋಣ,ಅಳಿಸಿ ಹೋಗಿರುವ ನೆನಪುಗಳನ್ನು ಮತ್ತೆ ನೆನೆಯೋಣ,ನಡೆದು ಬಂದ ದಾರಿ ಯಾವುದೇ ಇರಲಿ,ಮರೆತವರಿಗೆ ಕನ್ನಡಾಂಬೆಯ ಪರಿಚಯ ಮತ್ತೆ ಮಾಡಿಸೋಣ… ಜೈ ಕರ್ನಾಟಕ ಮಾತೆ —  ಶಮಂತ್

ಬೇಲಿಯ ಹೂವು

ಬೇಲಿಯ ಹೂವು ಏರದು ಮುಡಿಗೆ, ಬಣ್ಣದ ಹೂವದು ಕಾಣದು ಹೊರಗೆನೋಡಿತು ನೋಡುತ ನಲಿಯುತ ಹೇಳಿತು, ಸಂತಸ ಒಳಗಿದೆ ಹೊರಗಿಲ್ಲೆಂದಿತು ಗಿಡದಲೆ ಮೊಳೆತು, ಗಿಡದಲೆ ಅರಳಿ, ಸಸ್ಯದ ಸಾರವ ಹೀರುವೆ ನಾನುಬಾಡುವವರೆಗು ಸೃಷ್ಟಿಯ ಸಾರವ ಅಡೆ-ತಡೆ ಇಲ್ಲದೆ ಸವಿಯುವೆನೆಂದಿತು ನನ್ನನು ಯಾರು ನೋಡಿದರೇನು?, ಮಾತನಾಡಿಸದೆ ಹೋದರೆ ಏನು?ಸೂರ್ಯನ ಶಾಖದಿ, ಗಾಳಿಯ ಸ್ಪರ್ಶದಿ, ಮಂಜಿನ ಹನಿಯಲಿ ತೋಯುವೆನೆಂದಿತು ಚಿಲಿಪಿಲಿಗುಟ್ಟುತ, ಚೀರುತ ಹಾರುವ ಹಕ್ಕಿಯ ಬಳಗವೆ ನನ್ನಯ ಆಪ್ತರುಬಳುಕುತ ಬಳಸಿಹ ಬಳ್ಳಿಗಳೆಲ್ಲವು ಮಾತನು ಹರಟುವ ಮಿತ್ರರು ಎಂದಿತು ಯಾರಿಗು ಕಾಣದೆ ಮರೆಯಲಿ […]

ಸಿಟ್ಟಿನ ಸಂದರ್ಭವನ್ನು ನಿಭಾಯಿಸಿ

ಸಿಟ್ಟು ಎನ್ನುವುದು ಒಂದು ಭಾವನೆ ! ಹೇಗೆ ಸಂತೋಷ, ದುಃಖ, ಆನಂದ ಎನ್ನುವುದು ಭಾವನೆಗಳೋ ಹಾಗೆಯೇ ‘ಸಿಟ್ಟು’ ಕೂಡ ಒಂದು ಭಾವನೆ. ನೀವು ಸಿಟ್ಟು ಪಡುವುದಕ್ಕಿಂತ ಮುನ್ನ ನಿಮ್ಮ ಸಿಟ್ಟಿನ ಕಾರಣವನ್ನು ಮಾತನಾಡಿ. ನೀವು ಅಥವಾ ನಿಮ್ಮ ಜೊತೆಗಾರರಲ್ಲಿ ಸಿಟ್ಟಿನ ಕಾರಣವನ್ನು ಮುಂದಿಟ್ಟು ಮಾತಾಡಿದಾಗ, ಸುರಕ್ಷಕವಾಗಿ ಪರಿಹಾರ ದೊರಕುತ್ತದೆ. ಅದು ವಾದ-ವಿವಾದ ಅಥವಾ ವ್ಯರ್ಥ-ಚರ್ಚೆಗೆ ಎಡೆ ಮಾಡಿಕೊಡುವುದಿಲ್ಲ. ಕೆಲವೊಮ್ಮೆ ಸಮಸ್ಯೆಯನ್ನು ‘ಮಾತಾಡಿ ವಿವರಿಸಿದರೆ’ ಅಲ್ಲೇ ಸಮಸ್ಯೆಯ ಪರಿಹಾರ ಸಿಗುತ್ತದೆ. ಮುಂದಿನ ಅನಾಹುತವನ್ನು ಅಲ್ಲೇ ತಡೆಗಟ್ಟಬಹುದು. ಈ ಸಂದರ್ಭದಲ್ಲಿ […]

ಓಂ ಶಿವೋಹಂ

ಈ ಹಾಡು ಕೇಳ್ದಾಗ ಮೈ ಎಲ್ಲ ರೋಮಾಂಚನ ಆಗಿತ್ತು. ಎಂಥಹ ರಾಗ ಸಂಯೋಜನೆ ಈ ಥರ ಹಾಡಿನ ಸಂಯೋಜನೆ ಇಳೆಯರಾಜ ಮಾತ್ರ ಮಾಡಬಲ್ಲರು. ವಿಜಯ ಪ್ರಕಾಶ್ ಹಾಡಿರುವ ಈ ಹಾಡು ಸಾಮಾನ್ಯವಾಗಿಲ್ಲ ! ಅದ್ಬುತ !! ಹರ ಹರ ಹರ ಹರ !  ಹರ ಹರ ಹರ ಹರ … ಮಹಾದೇವ್ ! ಹರ ಹರ ಹರ ಹರ !  ಹರ ಹರ ಹರ ಹರ … ಮಹಾದೇವ್ ! ಓಂಭೈರವ ರುದ್ರಾಯ !ಮಹಾ ರುದ್ರಾಯ !ಕಾಲ […]

ಒಂದಿಷ್ಟು ಸುತ್ತಿದಾಗ

ಇದು ನನ್ನ ಅನುಭವ ಮಾತ್ರ, ಇಲ್ಲಿ ಹೇಳುವ ಎಲ್ಲ ಸನ್ನಿವೇಶಗಳು ನನ್ನ ಅಭಿಪ್ರಾಯವಷ್ಟೇ. ನಮ್ಮ ರಾಜ್ಯವನ್ನು ಬಿಟ್ಟು ಎಲ್ಲ ರಾಜ್ಯಗಳನ್ನು ಸುತ್ತಿದ್ದಾಗಿದೆ, ಇತರ ರಾಷ್ಟ್ರಗಳನ್ನು ನೋಡಿದ್ದಾಗಿದೆ. ಹೊಸ ನೆಲ, ಹೊಸ ನೀರು, ಹೊಸ ಜನ, ಹೊಸ ಉಡುಪು, ಹೊಸ ಭಾಷೆ, ಹೊಸ ನಡೆ, ಹೊಸ ಊಟ/ಆಹಾರ, ಹೊಸ ಪದ್ದತಿಗಳು, ಹೊಸ ನೀತಿ, ಹೊಸ ಯೋಚನೆಗಳು. ಆರಾಮಿನ / ಸವಲಿತ್ತಿನ ಜೀವನ ಶೈಲಿ, ಕೈ ನೀಡಿದರೆ ಸಿಗುವ ವಸ್ತುಗಳು, ಯಾವ ಲೌಕಿಕ ಸುಖ-ಭೋಗ ಗಳಿಗೂ ಕೊರತೆಯೇ ಇಲ್ಲದ ಜೀವನ. […]

ಒಳ್ಳೆಯ ಮಾತುಗಳು

ಬಹಳ ಜನ ಜೀವನದಲ್ಲಿ ಸಾಕಷ್ಟು ಅನುಭವವನ್ನು ಒಂದು ಸಣ್ಣ ವಾಖ್ಯದಲ್ಲಿ ಅಥವಾ ಒಂದು ಸಾಲಿನ ಮಾತಿನಲ್ಲಿ ಯಾವುದಾದರೊಂದು ಸಂದರ್ಭದಲ್ಲಿ ಬಳಸಿರುತ್ತಾರೆ. ಆ ಮಹಾನುಭಾವರ ಮಾತು ಜೀವನದ ಮಾರ್ಗವನ್ನೋ, ಸರಳ ಯೋಚನೆಯನ್ನೋ, ಮನುಷ್ಯನ ಬದುಕಿನ ಉದ್ದೇಶವನ್ನೋ ಹೇಳುವುದೆಂದು ನನ್ನ ನಂಬಿಕೆ. ಈ ರೀತಿಯ ಸಾಲುಗಳಲ್ಲಿ ದಿಟವಾದ ಅರ್ಥವಿರುತ್ತದೆ. ತಕ್ಷಣಕ್ಕೆ ಒಪ್ಪದಿದ್ದರೂ ನಿಧಾನವಾಗಿ ತಾಳ್ಮೆಯಿಂದ ಯೋಚಿಸಿದಾಗ ಈ ಮಾತಿನ ತಿರುಳು ತಿಳಿಯುತ್ತದೆ. ಈ ಮಾತುಗಳನ್ನು / ಸಾಲುಗಳನ್ನು ಬರೆದವರ / ಸೃಷ್ಠಿಸಿದವರ ನೆನಪು ನನಗೆ ಇಲ್ಲವಾದರೂ, ಬೇರೆಯವರರಿಂದ ಕೇಳಿರುವುದನ್ನು ಬರೆಯುತ್ತಿದ್ದೇನೆ. […]

ಗಾದೆಗಳು

ವೇದ ಸುಳ್ಳಾದರು.. ಗಾದೆ ಸುಳ್ಳಾಗದು!! ಗಾದೆಗಳು ಜೀವನ ಅನುಭವದಿಂದ ಬರುವ ಮಾತುಗಳು!  ಗಾದೆಗಳು ಜನರ ದಿನ-ನಿತ್ಯದ ಬದುಕಿನಲ್ಲಿ ಬಳಸುವಂತಹ ನಯವಾದ ಮತ್ತು ಚೂಪಾದ ಮಾತುಗಳು. ಕಳ್ಳನ ನಂಬಿದರು ಕುಳ್ಳನ ನಂಬಬಾರದು ! ಹಳೇ ಗಂಡನ ಪಾದವೇ ಗತಿ ! ಒಲ್ಲದ (ಬೇಡದ) ಗಂಡನಿಗೆ ಮೊಸರಲ್ಲಿ ಕಲ್ಲಿತ್ತಂತೆ ! ಕುಂಬಳಕಾಯಿ ಕಳ್ಳ ಅಂದ್ರೆ ಹೆಗಲು ಮುಟ್ಟಿ ನೋಡಿಕೊಂಡರಂತೆ ! ಗಂಡ-ಹೆಂಡತಿ ಜಗಳಲದಲ್ಲಿ ಕೂಸು ಬಡವಾಯ್ತು ! ಕಳ್ಳನಿಗೊಂದು ಪಿಳ್ಳೆ ನೆಪ (ನೆವ) ! ತಾನು ಕಳ್ಳ ಪರರ ನಂಬ […]