ಬೀಸೋಕಲ್ಲಿನ ಪದ

ಚಿತ್ರ ಕೊಡುಗೆ : Image Courtesy ಕಲ್ಲಮ್ಮ ತಾಯಿ ಮೆಲ್ಲಮ್ಮ ರಾಗಿಯಜಲ್ಲ ಜಲ್ಲಾನೆ ಉದುರಮ್ಮಜಲ್ಲ ಜಲ್ಲಾನೆ ಉದುರಮ್ಮ ನಾ ನಿನಗೆಬೆಲ್ಲದಾರತಿಯ ಬೆಳಗೇನು, ಬೆಲ್ಲದಾರತಿಯ ಬೆಳಗೇನು ಅಂದುಳ್ಳ ಅಡಿಗಲ್ಲು ಚಂದುಳ್ಳ ಮೇಗಲ್ಲುಚಂದ್ರಮತಿಯೆಂಬ ಹಿಡಿಗೂಟಚಂದ್ರಮತಿಯೆಂಬ ಹಿಡಿಗೂಟ ಹೀಡುಕೊಂಡುತಂದೆ-ತಾಯಿಗಳ ನೆನೆದೇನ, ತಂದೆ-ತಾಯಿಗಳ ನೆನೆದೇನ ರಾಗಿಯು ಮುಗಿದಾವು ರಾಜನ್ನ ಹೆಚ್ಚ್ಯಾವುನಾನ್ ಹಿಡಿದ ಕೆಲಸ ವದಗ್ಯಾವುನಾನ್ ಹಿಡಿದ ಕೆಲಸ ವದಗ್ಯಾವು ರಾಗಿಕಲ್ಲೇನಾ ತೂಗಿ ಬಿಡುತೀನಿ ಬಲದೋಳು, ನಾ ತೂಗಿ ಬಿಡುತೀನಿ ಬಲದೋಳು ಕಲ್ಲು ಬಿಟ್ಟೇನೆಂದು ಸಿಟ್ಟ್ಯಾಕೆ ಸರಸತಿಯೇಕುಕ್ಕೇಲಿ ರಾಗಿ ಬೆಳೆಯಾಲಿಕುಕ್ಕೇಲಿ ರಾಗಿ ಬೆಳೆಯಾಲಿ, ತಕ್ಕೊಂಡುಮತ್ತೆ […]

ಪಟ್ಟ ಕಟ್ಟ ಬೇಡಿ

ಅತ್ತ ಪುಲಿ ಇತ್ತ ದರಿ ಎಂಬುದೇ ಭ್ರಮೆ.ಹುಟ್ಟಲಾರದ ಅಪೇಕ್ಷೆಯ ಅರಿವಿನಅಸಂಗಥದ ವಾಸ್ತವಕ್ಕೆಏನೇನೂ ಅಳುಕಿನ, ಅಸಯ್ಯದ ಹೇಲು ಸಾರಿಸಿ,ಅಲ್ಲೇ ಮೃಷ್ಟಾನ್ನ ಭೋಜನಅಪಥ್ಯವಾದ ಮಿಥ್ಯಗಳಬೊಜ್ಜು ಹೊಟ್ಟೆ ಪ್ರಪಂಚಕ್ಕೆ ಸುಖದ ಸಂಕೇತ.ದ್ವಂದ್ವಗಳ ತಿಕ್ಕಾಟದ ಮನಸ್ಸು, ಅವರಿಗೆಹರೆಯದ ಕಾಮ ತೀಟೆ; ಇನ್ನು ‘ಸತ್ಯ’ಸನ್ಯಾಸಿಯ ಪದವಂತೆ! ಅದರ ಹೊನಲಿನಹುಡುಕಾಟದ ಯತ್ನಕ್ಕೆ ಕರ್ಕಶವಾದ ನಗುವಿನ ಕೇಕೆ;ನಿಂತಿರುವುದು ಕಕ್ಕದಲ್ಲಾದರೇನು; ನಾನೋ ಹಾತೊರೆವ ಸ್ವಾತಂತ್ರಕ್ಕೆಹಾದರದ ಬೆಲೆ ಕಟ್ಟಲಾರೆ.ಆತುರಕ್ಕೆ ಕರೆದಾಕೆ ಕೊಟ್ಟ ತೃಪ್ತಿ ಕ್ಷಣಿಕ ನನಗೆ;ಆಕೆ ಪಡೆದದ್ದು ಬಯಕೆಯ ಕಾಸು.ಕೊಟ್ಟ ತೃಪ್ತಿಯ ಆದರಿಸದಿದ್ದುದು ನನ್ನ ಕೊಳಕೋ?ಕಾಣಿಕೆಯದಾಚೆಗಿನ ಬಯಕೆ ಬಯಸಲಾರದ್ದು ಅವಳ […]

ಜೀವದಾತ ಗೂರ್ಖಾ (Gūrkhā)

ಗೋಕರ್ಣದ ನಾಯಿ(ಗೂರ್ಖಾ), ಮೈಸೂರಿನ ನಾಯಿಯನ್ನು (ಕಾಳ) ಬದುಕಿಸಿದ ನಿಜದ ಪ್ರಸಂಗ,  ಜೀವಂತ ಘಟನೆಗೆ ನಾನು ಸಾಕ್ಷಿ. (ನಮ್ಮಲ್ಲಿ ಈ  ಅನುಭವ ಕಡಿಮೆ.  ಈ ಅನುಭವನ್ನು ನಾನು ಹಚ್ಚಿಕೊಳ್ಳಲು ಬಯಸುತ್ತೇನೆ, ರಕ್ತದಾನ ಬರಿ ಮನುಷ್ಯನಿಗೆ ಮಾತ್ರ ಸೀಮಿತವಲ್ಲ, ಪ್ರಾಣಿಗಳಲ್ಲಿಯೂ ರಕ್ತದಾನ ಸಾಧ್ಯ !.  ಈ ಅರಿವು ಎಲ್ಲರಿಗೂ ತಿಳಿಯಬೇಕು) ನನ್ನ ಕಣ್ಣಮುಂದೆ ಕುಸಿದುಬಿದ್ದ ಕಾಳನನ್ನು Dr. ಮದನ್ (Dr. Madan) ಬಳಿ ಕರೆದುತಂದಾಗ ನನ್ನ ಅಂತರಾಳ ಕುಂದಿತ್ತು. ನನ್ನ ೧೦ (10) ವರ್ಷದ ಮಗ ಕಾಳನನ್ನೇ ನೋಡುತ್ತಾ, ಅಪ್ಪ ನಮ್ಮ ಕಾಳನಿಗೆ […]

ಕನ್ನಡ ಮತ್ತು ಇಂಗ್ಲಿಷ್ ಪದಗಳ ಹೋಲಿಕೆ

ಈ ಕನ್ನಡ ಪದಗಳನ್ನು ಉಚ್ಚಾರ ಮಾಡುವಾಗ ಸಮನಾದ ಇಂಗ್ಲಿಷ್ ಪದಗಳ ಉಚ್ಚಾರಣೆಯ ಹೋಲಿಕೆ ಸಿಗುತ್ತದೆ. (ಸಹಜವಾಗಿ, ಸಂಸ್ಕೃತ ಭಾಷೆಯೂ ಕೂಡ ಕನ್ನಡ ಭಾಷೆಯ ಮೇಲೆ ಪ್ರಭಾವ ಬೀರಿರುವುದರಿಂದ ಸಂಸ್ಕೃತ ಭಾಷೆಯನ್ನೂ ಹೋಲುತ್ತದೆ.  ಅಲ್ಲದೆ, ಗ್ರೀಕ್ ದೇಶದ ವ್ಯಾಪಾರಸ್ಥರ ಸಂಪರ್ಕದಿಂದ ನಮ್ಮ ಭಾಷೆ ಗ್ರೀಕ್ ಭಾಷೆಯೊಂದಿಗೆ ಬೆರೆತು, ಇಂಗ್ಲಿಷ್ ಭಾಷೆಗೆ ಸೇರಿರುವುದುಂಟು) ಮಾಧ್ಯಮ ಕನ್ನಡ English ಇಳುವರಿ Yield ನಿಸರ್ಗ Nature ಪ್ರಕಟಿಸು (ಪ್ರಕಾಶನ) Publish ಸನ್ನಿವೇಶ Situation ಅವಕಾಶ Opportunity ಸಕ್ಕರೆ Sugar ಮಿಲನ Meet ಜಂಟಿ […]

ಯಾರಿಗಾಗಿ?

ಈ ಬರಹಗಳು ಎಲ್ಲರಿಗೂ ಸರಿ ಹೊಂದುತ್ತದೆ ಎಂದು ತಿಳಿದಿದ್ದೇನೆ. ಈಗಿನ ಯುವ ಪೀಳಿಗೆಗೆ, ಕಾಲೇಜು ಹುಡುಗ-ಹುಡುಗಿಯರಿಗೆ, ಸಾಹಿತ್ಯ ಪ್ರಿಯರಿಗೆ, ಜನಪದ ಇಷ್ಟ ಪಡುವವರಿಗೆ, ವಿಮರ್ಶಕರಿಗೆ, ಚುಟುಕು ಕವನಗಳನ್ನು ಕಟ್ಟುವವರಿಗೆ, ತಮ್ಮ ಬರಹಗಳನ್ನು ಪ್ರಪಂಚಕ್ಕೆ ಮುಕ್ತವಾಗಿ ತೋರುವರಿಗೆ, ಗ್ರಾಮೀಣ ಜನರಿಗೆ, ರೈತರಿಗೆ, ತರ್ಕಬದ್ಧ ವಿಚಾರಗಳನ್ನು ಇಷ್ಟ ಪಡುವವರನ್ನು ಹೀಗೆ ಹಲವರನ್ನು ಈ ಮೂಲಕ ಮುಟ್ಟುವ ಪ್ರಯತ್ನ. ಎಲ್ಲರೂ ತಮ್ಮದೇ ಆದ ಪರಿಸರದಲ್ಲಿ ಬೆಳೆದಿರುತ್ತಾರೆ. ಅವರ ಯೋಚನೆ, ಅನುಭವ, ಗೆಳೆತನ, ವಿಧ್ಯಾಭ್ಯಾಸ, ನೋವು-ನಲಿವು, ಆಚಾರ-ವಿಚಾರ ಎಲ್ಲವೂ ಭಿನ್ನವಾಗಿರುತ್ತವೆ. ಜೀವನಾನುಭವ ಭಿನ್ನವಾಗಿದ್ದರೂ […]

ಬಯಲ ಹಿಂದಿನ ಚಿಂತನೆ

ಈ ಅಂತರ್ಜಾಲ ತಾಣವನ್ನು ಕಟ್ಟಲು ನಾನು ಆರಂಭಿಸಿರುವುದು ಕನ್ನಡ ಸಾಹಿತ್ಯವನ್ನು ಪ್ರೀತಿಸುವವರಿಗಾಗಿ, ಒಂದು ಮಾಹಿತಿಯ ನೆಲೆಯಾಗಿ, ಒಂದು ಜ್ಞಾನದ ಹೆಬ್ಬಾಗಿಲಾಗಿ ಸಾಮಾನ್ಯ ಮನುಷ್ಯನಿಗೂ ಸುಲಭವಾಗಿ ದೊರಕುವಂತೆ ಬೆಳೆಸಬೇಕೆಂಬ ಕನಸಿನಿಂದ. ಇಲ್ಲಿನ ಬರಹಗಳು ನನ್ನ ನಿಮ್ಮಂತಹ ಜನರಿಂದ ಕೊಡಲ್ಪಡುತ್ತದೆ ಮತ್ತು ಸಾಮನ್ಯವಾದ ಸರಳ ಭಾಷೆಯಲ್ಲಿರುತ್ತದೆ. ನಾನು ಈ ಅಂತರ್ಜಾಲ ತಾಣವನ್ನು, ಯಾರು ತನ್ನ ಸಂಪರ್ಕಕ್ಕೆ ಬಂದ ಎಲ್ಲರೊಡನೆ ಬದುಕಿನ ಆದರ್ಶವನ್ನು / ಮೌಲ್ಯಗಳನ್ನು / ಜ್ಞಾನವನ್ನು ಹಂಚಿಕೊಂಡ ದಿವ್ಯ ಚೇತನಕ್ಕೆ, ಸಮರ್ಪಿಸುತ್ತಿದ್ದೇನೆ. ’ಬಯಲು’ ಎಂಬ ಕನ್ನಡ ಪದ ವಿಶಾಲವಾದ ತೆರೆದಜಾಗ, […]